ಸ್ತುತಿಯೂ ಮಹಿಮೆಯೂ ! "ಯೆಹೋವನು ಒಳ್ಳೆಯವನು, ಆತನ ಕೃಪೆಯೂ ಶಾಶ್ವತವಾಗಿರುವುದು ಎಂದು ಕೃತಜ್ಞತಾಸ್ತುತಿ ಮಾಡುವವರ ಸ್ವರವು ಕೇಳಿಸಿದೊಡನೆ ಮೇಘವು ಯೆಹೋವನ ಆಲಯದಲ್ಲಿ ತುಂಬಿಕೊಂಡಿತು ". 2 ಪೊ.ವೃ.5:13. ಸೊಲೊಮೋನನ ಚಿಕ್ಕ ಪ್ರಾಯವು ಆಶೀರ್ವದಿಸಲ್ಪಟ್ಟದದ್ದಾಗಿಯೂ ಕರ್ತ ನೊಂದಿಗೆ ಅನ್ಯೋನ್ಯತೆಯಿಂದ ಕೂಡಿದ್ದಾಗಿಯೂ ಇತ್ತು. ಸೌಲ, ದಾವೀದನ ನಂತರ ಸೊಲೊಮೋನನನ್ನು ಕರ್ತನು ಇಸ್ರೇಲ್ ಅರಸನನ್ನಾಗಿ ನೇಮಿಸಿದನು. "ನನ್ನ ದೇವರು ರಾಜಾಧಿರಾಜನು ಎಲ್ಲಾ ದೇವರುಗಳಿಗಿಂಲೂ ದೊಡ್ಡವನು. ನಾನು ಆತನಿಗಾಗಿ ಕಟ್ಟುವ ಆಲಯವೂ ದೊಡ್ಡದಾಗಿರುವುದು". ಎಂದು ಹೇಳಿ ಸೊಲೊಮೋನನು ಕರ್ತನಿಗೆಂದು ಮಹಿಮೆಯಾದ ದೇವಾಲಯವನ್ನು ಕಟ್ಟಿದನು. ಆ ದೇವಾಲಯವನ್ನು ದೇವಮಹಿಮೆಯಿಂದಲೂ ತುಂಬಿಸಬೇಕೆಂದು ಬಯಸಿದ ಸೊಲೊಮೋನನು , ಪ್ರತ್ಯೇಕವಾಗಿ ಹೇರಳವಾದ ಯಜ್ಞ ಯಾಗಾದಿಗಳನ್ನು ಮಾಡಿ ಕರ್ತನನ್ನು ಬೇಡಿದ್ದು ಮಾತ್ರವಲ್ಲ, ಕರ್ತನನ್ನು ಹಾಡಿ ಸ್ತುತಿಸುವಂತೆ ಯಾಜಕ ವರ್ಗದವರನ್ನೂ ವಾದ್ಯ ಬಾರಿಸುವವರನ್ನು ನೇಮಿಸಿದನು. ಅವರು ವಾದ್ಯಗಳನ್ನು ಬಾರಿಸಿ ಏಕ ಶಬ್ದದಿಂದ ಕರ್ತನನ್ನು ಸ್ತುತಿಸಿ ಸ್ತೋತ್ರ ಮಾಡಲು ಕರ್ತನ ಮನೆಯಾದ ದೇವಾಲಯ ದೇವ ಮಹಿಮೆಯಿಂದ ತುಂಬಲ್ಪಟ್ಟಿತು ಎಂದು 2 ಪೂ .ವೃ.5:13,14 ನೇಯ ವಚನ ತಿಳಿಸುತ್ತದೆ. "ಪ್ರಿಯರೇ, ನಿಮ್ಮ ಶರೀರವೂ ದೇವರ ಆಲಯವಾಗಿದೆ". ಕರ್ತನು ಮನುಷ್ಯರ ಮಧ್ಯೆ ವಾಸಿಸಲು ಇಚ್ಚಿಸುವನು. ಆತನು ನಿಮ್ಮನ್ನು ತನ್ನ ಮಹಿಮೆಯಿಂದ ತುಂಬಬೇಕೆಂದರೆ, ನೀವು ಪೂರ್ಣ ಹೃದಯದಿಂದ ಕರ್ತನನ್ನು ಪ್ರೀತಿಸಬೇಕು. ಆಗ ಪ್ರಕೃತಿಗೂ ಮೀರಿದ ರೀತಿಯಲ್ಲಿ ದೇವರ ಮಹಿಮೆ ನಿಮ್ಮ ಆತ್ಮ ಪ್ರಾಣ ಶರೀರಗಳನ್ನು ತುಂಬುವುದು. ದೇವ ಪ್ರಸನ್ನತೆ, ನೀರಿನಂತೆ ಉಕ್ಕಿ ಹೊರಹೊಮ್ಮುವುದು. ಸೊಲೋಮೋನನು ಕಟ್ಟಿದ ದೇವಾಲಯದಲ್ಲಿ ಇಳಿದು ಬಂದ ಮಹಿಮೆ ನಿಮ್ಮೊಳಗೆ ಇಳಿಯುವಂತೆ ಕರ್ತನು ನಿಮ್ಮ ಅಂತರ್ಯದಲ್ಲಿ ಯೂ, ಮನೆಯಲ್ಲಿಯೂ ವಾಸಿಸುವಂತೆ ಮಾಡಲು ಸುಲಭವಾದ ಮಾರ್ಗ ಕರ್ತನನ್ನು ಸ್ತುತಿಸುವುದೇ ಆಗಿರುವುದು. ನೀವು ಸ್ತುತಿಸಿದಂತೆಲ್ಲಾ ಕರ್ತನ ಪ್ರಸನ್ನತೆ ನಿಮ್ಮಲ್ಲಿ ಪ್ರಕಟಗೊಳ್ಳುವುದು. ದೇವರ ಮಕ್ಕಳೇ ನಿಮ್ಮ ಮನೆಯಲ್ಲಿ ಕರ್ತನ ಪ್ರಸನ್ನತೆ ಇಳಿದು ಬರುವಂತೆ ಕುಟುಂಬವಾಗಿ ಕರ್ತನನ್ನು ಸ್ತುತಿಸಿ ಹಾಡಿ ಆರಾಧಿಸಿರಿ, ನಿಮ್ಮ ಕುಟುಂಬದಲ್ಲಿ ಕರ್ತನು ಮಾಡಿದ ಒಂದೊಂದು ಕಾರ್ಯಗಳನ್ನು ನೆನೆಸಿ ಕೃತಜ್ಞತೆ ಸಲ್ಲಿಸಿರಿ. ಆಗ ಸೂರ್ಯನನ್ನು ಕಂಡ ಇಬ್ಬನಿಯಂತೆ ಶತ್ರುವಿನ ಒಂದೊಂದು ಕ್ರಿಯೆಗಳು ಓಡಿ ಮರೆಯಾಗುವುದು. "ಸಂಪೂರ್ಣವಾದದ್ದು ಬಂದಾಗ ಅಪೂರ್ಣವಾದದ್ದು ಇಲ್ಲದಂತಾಗುವುದು" ಎಂದು 1ಕೊರಿ.13:10 ಹೇಳುತ್ತದೆ. ಆದುದರಿಂದ ಸ್ತುತಿಗೂ ಮಹಿಮೆಗೂ ಪಾತ್ರ ನಾಗಿರುವ ಯೇಸು ಕ್ರಿಸ್ತನ ಕೃಪೆಯು ನಿರಂತರವಾಗಿ ನಿಮ್ಮನ್ನು ನಡೆಸಿ ಕಾಯ್ದು ಕಾಪಾಡಲಿ, ಎಂದು ನಿಮಗಾಗಿ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು. ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು. 9448493381 ramusiddappa1964@gmail.com