ಸುಚಿತ್ರ ಪ್ರಸನ್ನರವರೇ ನೀವು ನಿಜಕ್ಕೂ ಮಾದರಿ ಮಹಿಳೆ. ಆಸಕ್ತಿಯ ಕ್ಷೇತ್ರವಾದ ಗಾಯನ ರಂಗವನ್ನು ನಿತ್ಯ ಗೌರವಿಸಿ, ಈಗ ಶ್ರದ್ಧಾವಂತ ಗಾಯಕಿಯಾಗಿ ಗೌರವಕ್ಕೆ ಭಾಜನರಾಗಿದ್ದೀರಿ. ದೇಶಭಕ್ತಿ ಗೀತೆಗಳನ್ನು ಹಾಡುವಾಗ ಅಲ್ಲಿ ಸಂಗೀತ, ಧ್ವನಿಯ ಜೊತೆಗೆ ಒಂದು ಹೆಮ್ಮೆಯ ಭಾವ ಜೊತೆಗಿರಬೇಕು, ಅದು ನಿಮ್ಮ ಮಧುರ ಧ್ವನಿಯಲ್ಲಿದೆ. ಒಂದೊಂದು ಹಾಡುಗಳಿಗೂ ನಿಷ್ಠೆಯನ್ನು ತೋರಿ ಕಲಿವ ನಿಮ್ಮ ಗುಣ ಕಲಿಕಾಹಂತದಲ್ಲಿರುವವರಿಗೆ ಉದಾಹರಣೆ..ಹಾಡು ಉತ್ತಮವಾಗಿದೆ.