Тёмный

ಅಂಥಾದೇನಿದೆ ಹೊಸ TVS ICUBE ಇಲ್ಲಿದೆ ಸಂಪೂರ್ಣ ವಿವರ 

Hanumesh Yavagal
Подписаться 160
Просмотров 2,6 тыс.
50% 1

ಅಂಥಾದೇನಿದೆ ಹೊಸ TVS ICUBE ಇಲ್ಲಿದೆ ಸಂಪೂರ್ಣ ವಿವರ
ಎಲೆಕ್ನಿಕ್ ವಾಹನಗಳನ್ನು ಎಲ್ಲರಿಗೂ ದೊರಕಿಸುವ ಉದ್ದೇಶವನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಟಿವಿಎಸ್ ಐಕ್ಯೂಬ್ ಉತ್ಪನ್ನ ಶ್ರೇಣಿಗೆ ಹೊಸ ರೂಪಾಂತರಗಳನ್ನು ಪರಿಚಯಿಸಿದ ಟಿವಿಎಸ್ ಮೋಟಾರ್ ಕಂಪನಿ
ಟಿವಿಎಸ್‌ಎಂನ ಕ್ರಾಂತಿಕಾರಕ ಆಂತರಿಕ ಇವಿ ತಂತ್ರಜ್ಞಾನದ ಆಧಾರದಿಂದ ಚಾಲಿತವಾಗಿರುವ ಟಿವಿಎಸ್ ಐಕ್ಯೂಬ್ ಎಲೆಕ್ನಿಕ್ ಸರಣಿಯ 300,000 ಗಾಡಿಗಳು ಮಾರಾಟದ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ.
ಭಾರತದ ಅಚ್ಚುಮೆಚ್ಚಿನ ಕೌಟುಂಬಿಕ ಇವಿ ಆಗಿರುವ ಟಿವಿಎಸ್ ಐಕ್ಯೂಬ್ ಈಗ 3 ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದೆ, ಅವುಗಳೆಂದರೆ - 2.2 kWh, 3.4 kWh, ಮತ್ತು 5.1 kWh. ಟಿವಿಎಸ್ ಐಕ್ಯೂಬ್ ಎಸ್‌ಟಿಯ 2 ರೂಪಾಂತರಗಳೂ ಇವುಗಳಲ್ಲಿ ಸೇರಿವೆ. ಉತ್ಪನ್ನ ಶ್ರೇಣಿಯು ಆಕರ್ಷಕ ಪರಿಚಯಾತ್ಮಕ ರೂ. 94,999 ಎಕ್ಸ್ ಶೋ ರೂಂ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.
ಕರ್ನಾಟಕದಲ್ಲಿ ಈಗಾಗಲೇ ಟಿವಿಎಸ್ ಐಕ್ಯೂಬ್ ಗ್ರಾಹಕರು 380,458,208
ಕಿಲೋಮೀಟರ್‌ಗಳನ್ನು ಟಿವಿಎಸ್ ಐಕ್ಯೂಬ್ ನಲ್ಲಿ ಸಾಗಿದ್ದಾರೆ, ಆ ಲೆಕ್ಕವನ್ನು ನೋಡಿದರೆ ಇದುವರೆಗೆ ರೂ.777,523,719 ರಷ್ಟು ಇಂಧನ ವೆಚ್ಚ ಉಳಿತಾಯ ಆಗಿದೆ.
ಬೆಂಗಳೂರು, ಮೇ 13, 2024: ಪ್ರಮುಖ ಜಾಗತಿಕ ವಾಹನ ತಯಾರಕ ಕಂಪನಿಯಾಗಿರುವ ಟಿವಿಎಸ್ ಮೋಟಾರ್ ಕಂಪನಿಯು ಇಂದು 2.2 kWh ಬ್ಯಾಟರಿ ಆಯ್ಕೆ ಲಭ್ಯವಿರುವ ಟಿವಿಎಸ್ ಐಕ್ಯೂಬ್ ನ ಹೊಸ ರೂಪಾಂತರವನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ಇದೇ ಸಂದರ್ಭದಲ್ಲಿ ಕಂಪನಿಯು ಇಂದಿನಿಂದ ಬೆಂಗಳೂರಿನ ಗ್ರಾಹಕರಿಗೆ ಟಿವಿಎಸ್ ಐಕ್ಯೂಬ್ ಎಸ್‌ಟಿಯನ್ನು ಡೆಲಿವರಿ ಮಾಡಲಿದೆ ಎಂದು ಘೋಷಿಸಿದೆ. ಟಿವಿಎಸ್ ಐಕ್ಯೂಬ್ ಎಸ್‌ಟಿ ಈಗ 3.4 kWh ಮತ್ತು 5.1 kWh ಎಂಬ ಎರಡು ವೇರಿಯೆಂಟ್ ಬ್ಯಾಟರಿ ಗಳಲ್ಲಿ ದೊರೆಯಲಿದೆ. ಇದು ಈ ವಿಭಾಗದಲ್ಲಿನ ಅತಿದೊಡ್ಡ ಬ್ಯಾಟರಿ ಪ್ಯಾಕ್ ಆಗಿದೆ. ಇದರೊಂದಿಗೆ, ಟಿವಿಎಸ್ ಐಕ್ಯೂಬ್ ಸರಣಿಯು ಈಗ ಅತ್ಯಾಕರ್ಷಕ 11 ಬಣ್ಣಗಳಲ್ಲಿ ದೊರೆಯಲಿರುವ ಐದು ವೇರಿಯೆಂಟ್ ಗಳ ಉತ್ಪನ್ನ ಶ್ರೇಣಿಯನ್ನು ಒದಗಿಸುತ್ತದೆ. ಇದು ಮಾರುಕಟ್ಟೆಯಲ್ಲಿರುವ ಅತಿದೊಡ್ಡ ಮತ್ತು ಅತ್ಯಂತ ಆಕರ್ಷಕವಾದ ಇವಿ ಉತ್ಪನ್ನ ಶ್ರೇಣಿಗಳಲ್ಲಿ ಒಂದಾಗಿದೆ.
ಹೆಚ್ಚು ಸುಸ್ಥಿರ ಮತ್ತು ಬುದ್ಧಿವಂತ ದಾರಿಯನ್ನು ಆರಿಸಿಕೊಂಡಿರುವ ಕರ್ನಾಟಕದ ಟಿವಿಎಸ್ ಐಕ್ಯೂಬ್ ಗ್ರಾಹಕರು ಇದುವರೆಗೆ ತಮ್ಮ ಟಿವಿಎಸ್ ಐಕ್ಯೂಬ್ ನಲ್ಲಿ 380,458,208 ಕಿಮೀ ದೂರವನ್ನು ಕ್ರಮಿಸಿದ್ದಾರೆ. ಆ ಲೆಕ್ಕಾಚಾರದ ಪ್ರಕಾರ ಇದುವರೆಗೆ 13,000 ಟನ್‌ಗಳಷ್ಟು ಮೌಲ್ಯದ ಇಂಗಾಲದ ಹೊರಸೂಸುವಿಕೆಯನ್ನು
ಕಡಿಮೆಗೊಳಿಸಲಾಗಿದೆ.
ಸುಸ್ಥಿರ ಚಲನಶೀಲತೆ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟಿವಿಎಸ್ ಮೋಟಾರ್ ಕಂಪನಿಯು ವಿಶ್ವಾಸಾರ್ಹ, ನವೀನ ಮತ್ತು ಆನಂದದಾಯಕ ಉತ್ಪನ್ನಗಳನ್ನು ಒದಗಿಸುವ ಮೂಲಕ ಇವಿ
ವಿಭಾಗದ ಮೇಲೆ ತಮಗಿರುವ ಬದ್ಧತೆಯನ್ನು ಸಾರಿದೆ. ಈ ದೃಷ್ಟಿಕೋನವನ್ನು ಮುಂದುವರಿಸುತ್ತಾ ಮತ್ತು ಎಲ್ಲರಿಗೂ ಇವಿ ಅನ್ನು ಕೈಗೆಟುಕುವಂತೆ ಮಾಡುವ ಉದ್ದೇಶ ಹಾಗೂ ಪ್ರಯತ್ನದಲ್ಲಿ ಹೊಸತಾಗಿ 2.2 kWh ಬ್ಯಾಟರಿ ರೂಪಾಂತರವನ್ನು ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಟಿವಿಎಸ್ ಐಕ್ಯೂಬ್ ಸರಣಿಯು ಈಗ ಪರಿಚಯಾತ್ಮಕ ಎಕ್ಸ್ ಶೋ ರೂಂ ಬೆಲೆ ರೂ. 94,999 ಕ್ಕೆ ದೊರೆಯಲಿದೆ. ಇದರಿಂದ ಗ್ರಾಹಕರಿಗೆ ಮಾಲೀಕತ್ವದ ಒಟ್ಟು ವೆಚ್ಚವನ್ನು (ಟೋಟಲ್ ಕಾಸ್ಟ್ ಆಫ್ ಓನರ್ ಶಿಪ್- ಟಿಸಿಓ) ಕಡಿಮೆ ಮಾಡಲು
ಸಹಾಯವಾಗಲಿದೆ.
2
ಹೊಸ ರೂಪಾಂತರಗಳ ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಟಿವಿಎಸ್ ಮೋಟಾರ್ ಕಂಪನಿಯ ಇವಿ ಬಿಸಿನೆಸ್‌ನ ಹಿರಿಯ ಉಪಾಧ್ಯಕ್ಷ ಮನು ಸಕ್ಷೇನಾ, "ಟಿವಿಎಸ್ ಮೋಟಾರ್ ಕಂಪನಿಯಲ್ಲಿ ನಾವು ಉದ್ಯಮದಲ್ಲಿ ನಾವೀನ್ಯತೆ ಮತ್ತು ಸುಸ್ಥಿರತೆಗೆ ಚಾಲನೆ ನೀಡಲು ಬದ್ಧರಾಗಿದ್ದೇವೆ. ನಮ್ಮ 3 ಲಕ್ಷ ದಷ್ಟು ವಿಸ್ತಾರವಾದ ಟಿವಿಎಸ್ ಐಕ್ಯೂಬ್ ಕುಟುಂಬದ ಬೆಳವಣಿಗೆಯನ್ನು ವೀಕ್ಷಿಸುವುದು ನಿಜಕ್ಕೂ ಆನಂದದಾಯಕ ಅನುಭವವಾಗಿದೆ. ನಮ್ಮ ಇವಿ ಗ್ರಾಹಕರ ರೈಡಿಂಗ್ ಪ್ರಯಾಣದ ಮೂಲಕ ಪಡೆದ ಅನುಭವದ ಆಧಾರದಿಂದ ನಾವು ಟಿವಿಎಸ್ ಐಕ್ಯೂಬ್ ಸರಣಿಯಲ್ಲಿ ಹೊಚ್ಚ ಹೊಸ 2.2 kWh ಫಾಸ್ಟೆಸ್ಟ್ ಚಾಜಿರ್ಂಗ್ ರೂಪಾಂತರವನ್ನು ಮತ್ತು ಟಿವಿಎಸ್ ಐಕ್ಯೂಬ್ ಎಸ್ ಟಿಯ ಹೆಚ್ಚುವರಿ ರೂಪಾಂತರವನ್ನು ನಾವು ತುಂಬಾ ಸಂತೋಷದಿಂದ ಬಿಡುಗಡೆ ಮಾಡುತ್ತಿದ್ದೇವೆ. ಟಿವಿಎಸ್ ಐಕ್ಯೂಬ್ ಎಲೆಕ್ನಿಕ್ ಸರಣಿಯು ಈಗ 3 ಬ್ಯಾಟರಿ ಆಯ್ಕೆಗಳೊಂದಿಗೆ ಲಭ್ಯವಿದ್ದು, ನಮ್ಮ ಗ್ರಾಹಕರಿಗೆ ಸೂಕ್ತವಾದ ರೇಂಜ್ ಮತ್ತು ದರದಲ್ಲಿ ದೊರೆಯಲಿದೆ. ಸಂಪೂರ್ಣ ಟಿವಿಎಸ್ ಐಕ್ಯೂಬ್ ಸರಣಿಯು ಈಗ ಭಾರತದಾದ್ಯಂತ ಡೆಲಿವರಿ ಹೊಂದಲು ಸಿದ್ಧವಿದೆ. ಟಿವಿಎಸ್ ಮೋಟಾರ್ ವಿಶ್ವಾಸಾರ್ಹವಾದ, ಉತ್ತಮವಾದ ಮತ್ತು ಸುಲಭವಾಗಿ ಕೈಗೆಟಕುವ ಎಲೆಕ್ನಿಕ್ ವಾಹನ ಅನುಭವವನ್ನು ಒದಗಿಸುವ ಮೂಲಕ ನಮ್ಮ ಗ್ರಾಹಕರ ಯಶಸ್ಸಿನ ಪ್ರಯಾಣದಲ್ಲಿ ಪಾಲುದಾರರಾಗುವುದನ್ನು ಮುಂದುವರೆಸುತ್ತದೆ” ಎಂದು ಹೇಳಿದರು.
ಟಿವಿಎಸ್ ಐಕ್ಯೂಬ್ ಮೂರು ಮೂಲಭೂತ ತತ್ವಗಳಿಂದ ಪ್ರೇರಿತವಾಗಿದೆ, ಅವುಗಳೆಂದರೆ: 1. ಗ್ರಾಹಕರಿಗೆ ರೇಂಜ್, ಸಂಪರ್ಕಿತ ತಂತ್ರಜ್ಞಾನ, ಚಾಜಿರ್ಂಗ್ ಪರಿಹಾರಗಳು ಮತ್ತು ಬೆಲೆ ಆಧಾರದಲ್ಲಿ ಆಯ್ಕೆಯ ಶಕ್ತಿಯನ್ನು ನೀಡುವುದು. 2. ವಾಹನ ಸುರಕ್ಷತೆ ಮತ್ತು ಒಟ್ಟಾರೆ ಮಾಲೀಕತ್ವದ ಅನುಭವ ಒದಗಿಸುವ ಮೂಲಕ ಸಂಪೂರ್ಣ ಭರವಸೆ ಒದಗಿಸುವುದು. 3. ಗ್ರಾಹಕರ ರೈಡಿಂಗ್ ಅನುಭವವನ್ನು ಹೆಚ್ಚಿಸಲು ಬಳಕೆಗೆ ಸುಲಭವಾದ ಫೀಚರ್ ಗಳ ಮೂಲಕ ಸರಳವಾಗಿ ರೈಡಿಂಗ್ ಮಾಡುವಂತೆ ಮಾಡುವುದು. ಈ ಬಿಡುಗಡೆಯ ಮೂಲಕ ಬ್ರಾಂಡ್ ನ ಘೋಷವಾಕ್ಯವಾದ 'Bade ArmaanonkiAchchiShuruwat' ಎಂಬುದಕ್ಕೆ ಅನುಗುಣವಾಗಿ ಟಿವಿಎಸ್ ಐಕ್ಯೂಬ್ ಸರಣಿಯು ಒದಗಿಸುವ ಆಯ್ಕೆಗಳ ಮೂಲಕ ವಿವಿಧ ವಿಭಾಗಗಳಲ್ಲಿ ತಮ್ಮ ಇವಿ ಪ್ರಯಾಣವನ್ನು ಆರಂಭಿಸಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ.
ಟಿವಿಎಸ್ ಐಕ್ಯೂಬ್ ಶ್ರೇಣಿಯು ಈಗ ಐದು ವೇರಿಯಂಟ್ ಗಳನ್ನು ಹೊಂದಿದೆ. ಅಲ್ಲದೇ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಹೊಂದಿಕೊಳ್ಳುವಂತಹ ಉತ್ಪನ್ನ ಶ್ರೇಣಿಯನ್ನು ಹೊಂದಿದೆ. ಕಾರ್ಯಕ್ಷಮತೆ, ಸೌಕರ್ಯ, ಉಪಯುಕ್ತತೆ ಮತ್ತು ಕೈಗೆಟುಕುವ ಬೆಲೆ, ಈ ಎಲ್ಲಾ ವಿಭಾಗಗಳಲ್ಲಿಯೂ ಈ ಉತ್ಪನ್ನ ಶ್ರೇಣಿ ಗ್ರಾಹಕರ ಪ್ರತಿಯೊಂದು ಅಗತ್ಯ ಮತ್ತು ಆದ್ಯತೆಗಳನ್ನು ಪೂರೈಸುತ್ತದೆ. ಟಿವಿಎಸ್ ಐಕ್ಯೂಬ್ ನ ಹೊಸ
ರೂಪಾಂತರಗಳು ಹೀಗಿವೆ:
(ಹೊಚ್ಚ ಹೊಸದು) ಟಿವಿಎಸ್ ಐಕ್ಯೂಬ್ (2.2 kWh)
ಟಿವಿಎಸ್ ಐಕ್ಯೂಬ್ (3.4 kWh)
ಟಿವಿಎಸ್ ಐಕ್ಯೂಬ್ ಎಸ್ (3.4 kWh)
(ಹೊಚ್ಚ ಹೊಸದು) ಟಿವಿಎಸ್ ಐಕ್ಯೂಬ್ ಎಸ್ ಟಿ (3.4 kWh)
ಟಿವಿಎಸ್ ಐಕ್ಯೂಬ್ ಎಸ್ ಟಿ (5.1 kWh)
ಸಂಪೂರ್ಣ ಟಿವಿಎಸ್ ಐಕ್ಯೂಬ್ ಎಲೆಕ್ನಿಕ್ ಸರಣಿಯು ಇಂದಿನಿಂದ ಬೆಂಗಳೂರಿನ 55 ಡೀಲರ್‌ ಶಿಪ್‌ಗಳಾದ್ಯಂತ ನಮ್ಮ ಮಳಿಗೆಗಳಲ್ಲಿ ಲಭ್ಯವಿರುತ್ತದೆ.
ಟಿವಿಎಸ್ ಐಕ್ಯೂಬ್ ನ ಹೊಸ ರೂಪಾಂತರಗಳ ಪ್ರಮುಖ ಮುಖ್ಯಾಂಶಗಳು:
ಟಿವಿಎಸ್ ನ ಅತ್ಯುತ್ತಮ ಉತ್ಪನ್ನ ಟಿವಿಎಸ್ ಐಕ್ಯೂಬ್ (2.2 kWh) - ಈಗ ಕೈಗೆಟುಕುವ ಬೆಲೆಯಲ್ಲಿ
ಲಭ್ಯ:
ಬ್ಯಾಟರಿ ಸಾಮರ್ಥ್ಯ - 2.2 kWh
•250&FO-950 W
5 - ಇಂಚಿನ ಕಲರ್ ಟಿ ಎಫ್ ಟಿ ಸ್ಕಿನ್
• ವೇಗವಾಗಿ ಚಾರ್ಜಿಗ್ ಮಾಡಬಹುದಾದ ಸಮಯ 2 ಗಂಟೆ (0-80%)
• ವೆಹಿಕಲ್ ಕ್ರಾಶ್ ಆಂಡ್ ಟೋ ಅಲರ್ಟ್
ಟರ್ನ್-ಬೈ-ಟರ್ನ್ ನ್ಯಾವಿಗೇಷನ್
• ಡಿಸ್ಟಾನ್ಸ್ ಇಂಡಿಕೇಟರ್
• 30 ಲೀಟರ್ ಸೀಟ್ ಸ್ಟೋರೇಜ್ ಸ್ಪೇಸ್
ಗರಿಷ್ಠ ವೇಗ ಪ್ರತೀ ಗಂಟೆಗೆ 75 ಕಿಮೀ
* ಬೆಲೆ: ರೂ. 94,999 ಎಕ್ಸ್ ಶೋರೂಂ ಬೆಂಗಳೂರು (ಇಎಂಪಿಎಸ್ ಸಬ್ಸಿಡಿ ಮತ್ತು ಕ್ಯಾಶ್‌ ಬ್ಯಾಕ್ ಒಳಗೊಂಡಿರುವ ಪರಿಚಯಾತ್ಮಕ ಬೆಲೆ ಇದು. ಜೂನ್ 30, 2024ರವರೆಗೆ ಮಾತ್ರ ಮಾನ್ಯವಾಗಿರುತ್ತದೆ)

Опубликовано:

 

9 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее
The Most Elite Chefs Ever!
00:35
Просмотров 4,5 млн