Тёмный

ಬಾಕಾಹು | Vihara Plus | Raw Banana Flour | BAKAHU Benefits 

Vihara Plus
Подписаться 6 тыс.
Просмотров 10 тыс.
50% 1

#Bakahu #BananaFlourRecipes #ViharaPlus
Bakahu...
It is a term that is currently trending in the agricultural sector.
It has no special meaning. Banana powder is just an abbreviation. But with the experiment going on in this new method it seems like it Bakahu will get a permanent place in the kitchen along with other items.
Banana powder has been used to prepare chapati, idli, dosa, appam, shankarapoli, golibaje, dryjamun, roti, semolina kesaribath etc, which is not only delicious but also healthy. There is no fear of gluten like wheat flour.
The 'Bakahu' campaign is being initiated by Mr Shri Padre, editor of Adike Patrike, an agriculture Journal. It was only in the third week of June Bakahu took birth. Later, through social media, Bakahu stretched out its arms along the coast, malnad and bayalu seeme region. This creates a new alternative for banana farmers who are suffering due to falling prices and also a healthy diet for users.
How to prepare bakahu?
Bakahu can be made from any banana. First wash and peel the banana. As soon as the banana is peeled, see that no oxidation takes place. For this, mix a quarter-liter of rice porridge water and 15 grams of salt per liter of water beforehand. If there is no porridge water, add some buttermilk to the water. Immerse the banana as soon as it is peeled in this solution. Make a slice of chips using a slicer to make a banana removed from the solution. Dry in the dryer. In summer, it can be dried in the sun. After drying properly, fry using a mixer. It can be crushed without peeling also which is more nutritious.
ಬಾಕಾಹು...
ಇದ್ದು ಕೃಷಿವಲಯದಲ್ಲಿ ಸದ್ಯ ಟ್ರೆಂಡ್ ಆಗುತ್ತಿರುವ ಪದ.
ಇದಕ್ಕೆ ವಿಶೇಷ ಅರ್ಥವೇನೂ ಇಲ್ಲ. ಬಾಳೆಕಾಯಿ ಹುಡಿ ಎನ್ನುವುದರ ಅಪಭ್ರಂಶ ಅಷ್ಟೇ. ಆದರೆ ಇದರಲ್ಲಿ ಆಗುತ್ತಿರುವ ಪ್ರಯೋಗ ಹಾಗೂ ಕ್ರಾಂತಿ ನೋಡಿದರೆ ಅಡಿಗೆ ಮನೆಯಲ್ಲಿ ಇತರ ವಸ್ತುಗಳ ಜೊತೆಗೆ ಖಾಯಂ ಸ್ಥಾನ ಪಡೆಯುವುದರಲ್ಲಿ ಹೆಚ್ಚೇನೂ ಕಾಲ ಕಾಯಬೇಕಿಲ್ಲ ಎಂಬಂತಿದೆ.
ಬಾಳೆಕಾಯಿಯ ಪುಡಿಯಲ್ಲಿ ಈಗಾಗಲೇ ಚಪಾತಿ, ಇಡ್ಲಿ, ದೋಸೆ, ಅಪ್ಪಂ, ಶಂಕರಪೋಳಿ, ಗೋಳಿಬಜೆ, ಡ್ರೈಜಾಮೂನ್, ರೊಟ್ಟಿ, ರವೆಯ ಕೇಸರಿಬಾತ್ ಹೀಗೆ ತರಹೇವಾರಿ ಪ್ರಯೋಗಗಳಾಗಿವೆ, ಎಲ್ಲವನ್ನೂ ಮಾಡಿದ ಜನರು ಇದು ರುಚಿಕರವಷ್ಟೇ ಅಲ್ಲ, ಆರೋಗ್ಯಪೂರ್ಣವೂ ಹೌದು. ಗೋಧಿಹಿಟ್ಟಿನಂತೆ ಗ್ಲೂಟೆನ್ ಭಯವಿಲ್ಲ. ಅಕ್ಕಿಪುಡಿಗೆ ಪರ್ಯಾಯ ಎಂಬಂತಹ ಪ್ರತಿಕ್ರಿಯೆ ಬಂದಿದೆ.
ಕೃಷಿಯಲ್ಲಿ ಹಲವು ವಿಧದ ಪರ್ಯಾಯ ಮಾರ್ಗಗಳನ್ನು ಹುಡುಕುತ್ತ ಇರುವ ಅಡಿಕೆಪತ್ರಿಕೆ ಸಂಪಾದಕ ಶ್ರೀ ಪಡ್ರೆಯವರು ಈ ‘ಬಾಕಾಹು’ ಅಭಿಯಾನ ನಡೆಸುತ್ತಿದ್ದಾರೆ. ಮೊನ್ನೆ ಮೊನ್ನೆ ಜೂನ್ ಮೂರನೇ ವಾರದಲ್ಲಷ್ಟೇ ಬಾಕಾಹುವಿನ ನಮ್ಮ ನಡುವೆ ಕಣ್ಣೊಡೆಯಿತು. ಆ ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಕರಾವಳಿ, ಮಲೆನಾಡು, ಬಯಲುಸೀಮೆಯಲ್ಲಿಡೀ ಬಾಕಾಹು ತನ್ನ ಬಾಹುಗಳನ್ನು ಚಾಚಿಕೊಳ್ತಾ ಇದೆ. ಸೀಸನ್‌ನಲ್ಲಿ ದರ ಕಡಿಮೆಯಾಗಿ ಕಂಗೆಡುವ ಬಾಳೆಕಾಯಿ ಕೃಷಿಕರಿಗೆ ಇದೊಂದು ಹೊಸ ಪರ್ಯಾಯವನ್ನು ಸೃಷ್ಟಿಸಿದರೆ ಬಳಕೆದಾರರಿಗೆ ಆರೋಗ್ಯಪೂರ್ಣವಾದ ಆಹಾರ.
ಹಿಂದೆ ಕೂಡಾ ನಮ್ಮ ಹಿರಿಯರು ಬಾಳೆಕಾಯಿಯನ್ನು ಪುಡಿ ಮಾಡಿ ಬಳಸುತ್ತಿದ್ದರು, ಆದರೆ ಕಾಲಾನುಕ್ರಮದಲ್ಲಿ ಅದು ನಿಂತು ಹೋಗಿತ್ತು. ಕೇರಳದಲ್ಲಿ ನೇಂದ್ರ ಬಾಳೆಕಾಯಿಯ ಪುಡಿಯನ್ನು ಚಿಕ್ಕ ಮಕ್ಕಳಿಗೆ ಪೌಷ್ಠಿಕ ಆಹಾರವಾಗಿ ನೀಡುತ್ತಾರೆ. ಆದರೆ ಯಾವುದೇ ಬಾಳೆಕಾಯಿಯಿಂದಲೂ ಪುಡಿ ತಯಾರಿಸಬಹುದು. ಅದನ್ನು ಇಷ್ಟೆಲ್ಲಾ ತಿಂಡಿಗಳಿಗೆ ಬಳಸಿಕೊಳ್ಳಬಹುದು ಎನ್ನುವುದನ್ನು ಈಗಷ್ಟೇ ನಾವು ತಿಳಿದುಕೊಳ್ಳುತ್ತಿದ್ದೇವೆ ಅಂತಾರೆ ಶ್ರೀಪಡ್ರೆ
ಪಡ್ರೆಯವರಿಗೆ ಎನಿಟೈಂ ವೆಜಿಟೆಬಲ್’ ಎನ್ನುವ ವಾಟ್ಸಾಪ್ ಗ್ರೂಪ್‌ ಇದೆ. ಅದರಲ್ಲಿ ಬಾಳೆ ಕಾಯಿ ಪುಡಿ ಬಗ್ಗೆ ಯಾರೋ ಮಾಹಿತಿ ಕೇಳಿದ್ದರು. ಆಗ ಪಡ್ರೆ ಕೇರಳದ ಆಲೆಪ್ಪಿಯ ಮಹಿಳೆ ಒಬ್ಬರು ನೇಂದ್ರ ಕಾಯಿ ಖರೀದಿಸಿ, ಅಲ್ಲಿನ ಕೃಷಿ ವಿಜ್ಞಾನ ಕೇಂದ್ರದ ನೆರವಿನಲ್ಲಿ ಬಾಳೆಯ ಪುಡಿ ತಯಾರಿಸಿ 6 ತಿಂಗಳಲ್ಲಿ 1 ಕ್ವಿಂಟಾಲ್ ಮಾರಾಟ ಮಾಡಿದ್ದ ವಿಚಾರವನ್ನ ಗ್ರುಪಲ್ಲಿ ಹಾಕಿದ್ದರು. ಇದನ್ನು ಗಮನಿಸಿದ ತುಮಕೂರಿನ ನಯನಾ ಆನಂದ್ ಎಂಬವರು ಆಲೆಪ್ಪಿಯ ಕೇಂದ್ರದ ಮುಖ್ಯಸ್ಥೆ ಜೆಸ್ಸಿ ಜಾರ್ಜ್ ಅವರನ್ನು ಸಂಪರ್ಕಿಸಿ ಬಾಳೆ ಕಾಯಿ ಪುಡಿ ತಯಾರಿಸುವ ವಿಧಾನ ಅರಿತುಕೊಂಡರು.
ನಯನಾ ಯಶಸ್ವಿಯಾಗಿ ಬಾಳೆಕಾಯಿ ಪುಡಿ ತಯಾರಿಸಿದ್ದಷ್ಟೇ ಅಲ್ಲ ಅದರಿಂದ ವಿಧ ವಿಧದ ತಿಂಡಿ ಮಾಡಲು ಶುರು ಮಾಡಿದರು, ಅದನ್ನು ಗ್ರೂಪಲ್ಲೂ ಶೇರ್‌ ಮಾಡಿದರು. ಇದು ಈ ಬಾಕಾಹು ಕ್ರಾಂತಿಯ ಆರಂಭ. ಅಲ್ಲಿಂದ ಹಲವರು ಪ್ರಯೋಗ ಶುರು ಮಾಡಿದರು, ಇದನ್ನು ಪಡ್ರೆ ಸಾಮಾಜಿಕ ಜಾಲತಾಣಗಳಲ್ಲೂ ಹಂಚಿದರು. ಮಾಧ್ಯಮಗಳಲ್ಲೂ ಸುದ್ದಿಯಾಗತೊಡಗಿತು.
ಮನೆಯಲ್ಲೇ ಸುಲಭವಾಗಿ ಬಾಳೆ ಕಾಯಿ ಪುಡಿಯನ್ನು ತಯಾರಿಸಬಹುದು. ಡ್ರೈಯರ್ ಇದ್ದರೆ ಕೆಲಸ ಇನ್ನೂ ಸುಲಭ. ಉತ್ತರಕನ್ನಡದ ಬಹಳ ಮನೆಗಳಲ್ಲಿ ಡ್ರೈಯರ್ ಇರೋದು ಅವರಿಗೆ ಅನುಕೂಲ. ಆ ಭಾಗದಲ್ಲಿ ಅನೇಕ ಮನೆಗಳಿಗೆ ಈಗ ಬಾಕಾಹು ಕಾಲಿರಿಸಿದೆ, ಅದರಿಂದ ವಿಧ ವಿಧದ ಅಡುಗೆಯೂ ನಡೆಯುತ್ತಿದೆ ಎನ್ನುತ್ತಾರೆ ಪಡ್ರೆ.
----------------------------------------------------------
ಬಾಕಾಹು ಮಾಡುವುದು ಹೇಗೆ?
ಯಾವುದೇ ಬಾಳೆಕಾಯಿಯಿಂದ ಬಾಕಾಹು ಮಾಡಬಹುದು. ಮೊದಲು ಬಾಳೆಕಾಯಿಯನ್ನು ತೊಳೆದು ಸಿಪ್ಪೆ ತೆಗೆಯಿರಿ. ಬಾಳೆಕಾಯಿ ಸುಲಿದ ಕೂಡಲೇ ಅದು ಆಕ್ಸಿಡೈಸ್ ಆಗಿ ಬಣ್ಣ ಕಪ್ಪಾಗಬಾರದು ನೋಡಿ. ಅದಕ್ಕಾಗಿ ಮೊದಲೇ ಒಂದು ಲೀಟರ್ ನೀರಿಗೆ ಕಾಲು ಲೀಟರ್ ಅನ್ನದ ಗಂಜಿಯ ನೀರು ಮತ್ತು ೧೫ ಗ್ರಾಮ್ ಉಪ್ಪು ಮಿಕ್ಸ್‌ ಮಾಡಿ ಇಟ್ಟುಕೊಳ್ಳಿ. ಗಂಜಿ ನೀರು ಇಲ್ಲವಾದಲ್ಲಿ ನೀರಿಗೆ ಸ್ವಲ್ಪ ಮಜ್ಜಿಗೆ ಸೇರಿಸಿದರೂ ಸಾಕು. ಈ ದ್ರಾವಣದಲ್ಲಿ ಸಿಪ್ಪೆ ಸುಲಿದ ಕೂಡಲೇ ಬಾಳೆಕಾಯಿಯನ್ನು ಮುಳುಗಿಸಿ. ದ್ರಾವಣದಿಂದ ತೆಗೆದ ಬಾಳೆಕಾಯಿಯನ್ನು ಸ್ಲೈಸರ್ ಬಳಸಿ ಚಿಪ್ಸಿನಂತಹ ತುಂಡು ಮಾಡಿಕೊಳ್ಳಿ. ಡ್ರೈಯರಿನಲ್ಲಿ ಒಣಗಿಸಿ. ಬೇಸಿಗೆಯಲ್ಲಾದರೆ ಬಿಸಿಲಲ್ಲೇ ಒಣಗಿಸಬಹುದು. ಸರಿಯಾಗಿ ಒಣಗಿ ಆರಿದ ನಂತರ ಮಿಕ್ಸಿ ಬಳಸಿ ಹುಡಿ ಮಾಡಿ. ಸಿಪ್ಪೆ ತೆಗೆಯದೆಯೂ ಪುಡಿ ಮಾಡಿಕೊಳ್ಳಬಹುದು.
---------------------------------------------------
Contacts
Shri Padre : 85470 85148
For Bakahu floor
Vasundhara Hegde : 99009 27988
Nayana Anand: 91417 66536

Опубликовано:

 

16 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 29   
@bcshetty7
@bcshetty7 3 года назад
ಬಾಕಾಹು ವಿನ ಹುಟ್ಟು,ಬೆಳವಣಿಗೆಗಳನ್ನು ಬಹಳ ಚೆನ್ನಾಗಿ ದಾಖಲಿಸಿದ್ದೀರಿ.
@sanjeevareddy4823
@sanjeevareddy4823 3 месяца назад
Verygood
@hariprasadshevire7477
@hariprasadshevire7477 3 года назад
ಒಳ್ಳೆಯ ಮಾಹಿತಿ. ಶುಭವಾಗಲಿ.
@shreekrishnasharma3577
@shreekrishnasharma3577 3 года назад
ಒಳ್ಳೆ ಕವರೇಜ್ 👌 ನಮ್ಮ ಮಕ್ಕಳು ಚಿಕ್ಕವರಿರುವಾಗ, ಅಂದರೆ ಸುಮಾರು 30-35 ವರ್ಷ ಮೊದಲು ಬೂದು ಬಾಳೆಕಾಯಿಯ ಹುಡಿ ಮಾಡಿ, ಅದರಿಂದ ಮಣ್ಣಿಮಾಡಿ ಕೊಡ್ತಾ ಇದ್ದೆವು
@shreekrishnasharma3577
@shreekrishnasharma3577 3 года назад
@@ViharaPlus ಬೂದು ಬಾಳೆಕಾಯಿ ಮತ್ತು ಹಣ್ಣಿಗೆ, ಹೊಟ್ಟೆಯಲ್ಲಿರುವ ಕ್ರಿಮಿಗಳನ್ನು ನಾಶಮಾಡಿ‌‌ ಹೊರ ಹಾಕುವ ಗುಣವಿದೆಯೆಂದು ನಮ್ಮ ಅಜ್ಜಿ‌ಹೇಳುತ್ತಿದ್ದರು. ಹಾಗಾಗಿ ಮಕ್ಕಳಿಗೆ ಅದನ್ನು‌ಕೊಡುವ ಅಭ್ಯಾಸ.
@yashaswihebbar8417
@yashaswihebbar8417 3 года назад
ಒಳ್ಳೆಯ ಮಾರ್ಗದರ್ಶನ ನೀಡಿದ್ದಾರೆ ಶ್ರೀಪಡ್ರೆಯವರು
@RaviChandra-rg6rj
@RaviChandra-rg6rj 3 года назад
ಸರ್ ವಿವರಣೆ ತುಂಬಾ ಚೆನ್ನಾಗಿದೆ. ಧನ್ಯವಾದಗಳು
@trupti290
@trupti290 3 года назад
super appachi
@mshivaprasad2372
@mshivaprasad2372 3 года назад
Sooper
@sujatha3354
@sujatha3354 3 года назад
Super 👍🏻👍🏻👏🏻
@rashmik671
@rashmik671 3 года назад
Great 👍
@sunimane6468
@sunimane6468 3 года назад
👌👌👌👌super 👍
@venkateshe232
@venkateshe232 6 месяцев назад
🎉🎉🎉😊
@keerthibanari9731
@keerthibanari9731 3 года назад
ಉತ್ತಮ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು.
@krishnanandbhat5178
@krishnanandbhat5178 2 года назад
Good informative article about ಬಾಕಾಹು👌👌What is the life period of ಬಾಕಾಹು
@sowmyarao4187
@sowmyarao4187 2 года назад
Thank u for uploading this very use ful vdo its really forgotten nutritious food.60 years back my parents fead me this boodubale powder.so still I m v v healthy I feel.i m very impressed by this alternative food for maida.thank u and god bless u all .live and good luck from Bangalore.
@sathyanarayanrao2582
@sathyanarayanrao2582 3 года назад
👍👌👌👌
@drshaan5899
@drshaan5899 3 года назад
Pless send how to buy
@SaikumarTheVloger
@SaikumarTheVloger 7 месяцев назад
Sir give any training for banana powder maker business
@ViharaPlus
@ViharaPlus 7 месяцев назад
Pls contact shri padre. His number is in description
@sureshkumarn3645
@sureshkumarn3645 5 месяцев назад
What is Dryer cost
@hoysalarathavar5386
@hoysalarathavar5386 3 года назад
Dear sir navu Ee udyama start madbahuda........ Idakke training idre Elli tagobeku and contact number kodi plz
@gubbacchigoodunithyanandas8943
@gubbacchigoodunithyanandas8943 3 года назад
💪
@pradeep8566
@pradeep8566 3 года назад
👍👍👍
@ggaming237
@ggaming237 2 года назад
Hello sir I'm student Doing Research on Banana flour production. Why are u using butter milk instead of Potatium metabisulphate? Any idea
@KK_vizuals
@KK_vizuals 2 года назад
We are also tried in my home, But we can't marketing
Далее
Banana Special Spray _ Tiptur
8:29
Просмотров 93 тыс.
Testing Resistant Starch - Green Banana Flour
9:23
Просмотров 48 тыс.
Green Banana Flour || How to make banana flour at home
4:51