Тёмный

ರಾಯರ ಭಕ್ತರು ಅದೆಂತಹ ದೊಡ್ಡ ತಪ್ಪನ್ನೇ ಮಾಡಿದರು ಸರಿ ರಾಯರು ಕ್ಷಣಮಾತ್ರದಲ್ಲಿ ಕ್ಷಮಿಸುತ್ತಾರೆ ಯಾವ ರೀತಿ ನೀವೇ ನೋಡಿ🙏 

SGNR Gowdru Kutumba,🙏🌏
Подписаться 5 тыс.
Просмотров 295
50% 1

#youtubeshorts #ಮಂತ್ರಾಲಯದಲ್ಲಿ #ನಮ್ಮ #ರಾಯರು#
ರಾಯರ ಭಕ್ತರು ಅದೆಂತಹ ದೊಡ್ಡ ತಪ್ಪನ್ನೇ ಮಾಡಿದರು ಸರಿ ರಾಯರು ಕ್ಷಣಮಾತ್ರದಲ್ಲಿ ಕ್ಷಮಿಸುತ್ತಾರೆ ಯಾವ ರೀತಿ ನೀವೇ ನೋಡಿ#ಒಮ್ಮೆ ರಾಘವೇಂದ್ರ ಸ್ವಾಮಿಗಳು ತಾಮ್ರಾಪರ್ಣಿ ನದಿ ತಟಕ್ಕೆ ದಿಗ್ವಿಜಯ ಯಾತ್ರೆ ಮಾಡಿಕೊಂಡು ಹೋದಾಗ ಇವರಿಗಾಗಿಯೇ ಕಾದಿದ್ದ ಒಬ್ಬ ಬ್ರಾಹ್ಮಣ ಓಡಿ ಬಂದು ರಾಯರಿಗೆ ಸಾಷ್ಟಾಂಗ ಪ್ರಣಾಮ ಮಾಡ್ತಾನೆ.ದೂರದಲ್ಲಿ ನಿಂತು ಬಿಕ್ಕಿ ಬಿಕ್ಕಿ ಅಳುತ್ತಾನೆ "ಗುರುಗಳೇ,ನಿಮಗಾಗಿ ಅನೇಕ ದಿನಗಳಿಂದ ನಿರೀಕ್ಷೆ ಮಾಡ್ತಿದ್ದೀನಿ ನೀವು ಬರುವಿರಿ ಎಂದು ಗೊತ್ತಾಯಿತು ನನಗೆ ತಿಳಿಯದೇ ಒಂದು ಅಪಚಾರ ಮಾಡಿಬಿಟ್ಟೆ ಅದಕ್ಕೆ ಪ್ರಾಯಶ್ಚಿತನೂ ಮಾಡ್ಕೊಂಡೆ ಆದರೂ ಈ ಗ್ರಾಮದವರೆಲ್ಲಾ ನನ್ನ ಬಹಿಷ್ಕರಿಸಿ ಬಿಟ್ಟಿದ್ದಾರೆ ನನಗೆ ಜೀವನವೇ ಜಿಗುಪ್ಸೆ ಆಗಿಬಿಟ್ಟಿದೆ ನಾನು ಎಷ್ಟು ಬೇಡಿದರೂ ಅವರು ನನ್ನ ಕ್ಷಮಿಸುತ್ತಿಲ್ಲ ನೀವೇ ಹೇಗಾದರೂ ಅವರಿಗೆಲ್ಲಾ ತಿಳಿ ಹೇಳಿ ಇಲ್ಲಾ ನಾನು ಶುದ್ಧ ಆಗೋಕ್ಕೆ ಏನು ಮಾಡಬೇಕೆಂದು ದಯಮಾಡಿ ತಿಳಿಸಿ ನೀವು ಹೇಳಿದಂತೆ ಮಾಡುತ್ತೇನೆ "ಎಂದು ಬಿಕ್ಕಿ ಬಿಕ್ಕಿ ಅಳುತ್ತಾನೆ.ಅವನನ್ನು ನೋಡಿ ರಾಯರ ಮನಸ್ಸು ಕರಗಿಹೋಗುತ್ತೆ. ರಾಘವೇಂದ್ರ ಸ್ವಾಮಿಗಳಲ್ಲಿ ಇದ್ದಂತಹ ಒಂದು ಗುಣವೆಂದರೆ ಯಾರು ದುಃಖಿಸಿದರು ಕರಗಿ ಹೋಗುತ್ತಿದರು. ನಮಗೆಲ್ಲಾ ಕೆಲವೊಮ್ಮೆ ಎಂತಹ ಕಠೋರ ಹೃದಯವಿರುತ್ತೆ ಕೆಲವರಂತೂ ತಪ್ಪು ಮಾಡದಿದ್ದರೂ ಮಾಡಿದ್ದಾರೆ ಅಂತ ಅನ್ಯಾಯವಾಗಿ ಅವರ ಗೌರವಕ್ಕೆ ಚ್ಯುತಿ ತರುತ್ತಾರೆ ಮನಸ್ಸನ್ನು ನೋಯಿಸುತ್ತಾರೆ ಅದು ಕೂಡ ಪಾಪದ ಕೆಲಸವೇ ಆದರೆ ನಮ್ಮ ರಾಯರು ಯಾರೇ ತಪ್ಪು ಮಾಡಿದ್ದರೂ ಕೂಡ ಅವರಿಗೆ ಕ್ಷಮೆ ಕೊಟ್ಟು ಉದ್ದರಿಸುತ್ತಾರೆ.ರಾಯರು ಕ್ಷಮಾಶೀಲರು ಎಂಥೆಂಥ ಕಷ್ಟಗಳನ್ನ ನಿವಾರಣೆ ಮಾಡಿದವರು ಮಹಾನುಭಾವರು.ನಂತರ ರಾಯರಿಗೆ , ಬ್ರಾಹ್ಮಣನ ಯೋಗ್ಯತೆ ಏನು ಎಂದು ತಿಳಿಯುತ್ತೆ."ಚಿಂತಿಸಬೇಡಪ್ಪಾಇದಕ್ಕೆಲ್ಲಾ ಪರಿಹಾರವಿದೆ ನಾಳೆ ನಾವು ಎಲ್ಲಿ ಸಂಸ್ಥಾನದ ಪೂಜೆ ಮಾಡುತ್ತಿವೋ ಅಲ್ಲಿ ಬಾ ಎನ್ನುತ್ತಾರೆ". ಮರುದಿನ ರಾಯರು ಎಲ್ಲಿ ಹೇಳಿರುತ್ತಾರೋ ಅಲ್ಲಿಗೇ ಹೋಗುತ್ತಾನೆ ಸಂಸ್ಥಾನದ ಪೂಜೆಯೆಲ್ಲಾ ಆಗಿರುತ್ತೆ ಅವನಿಗೆ ಆದೇಶ ಕೊಟ್ಟು ಕೇಶ ಮುಂಡನ ಮಾಡಿಸಿ ಪ್ರಾಯಶ್ಚಿತ ಮಾಡಿಸುತ್ತಾರೆ ನಂತರ ಹೇಳುತ್ತಾರೆ "ಚಿಂತೆ ಮಾಡಬೇಡ ಅದರೆ ಒಂದು ನಿಯಮ ನೀನು ಮಾಡಿದ ತಪ್ಪನ್ನು ಮತ್ತೆಂದೂ ಮಾಡಬೇಡ ಪ್ರಾಯಶ್ಚಿತ ಅಂದರೆ ಅದೇ ಆರ್ಥ.ನೀನು ಮಾಡಿದ ಪಾಪ ಕೃತ್ಯ ಏನಿದೆ ಅದು ಪ್ರಾಯಶ್ಚಿತ್ತ ಆಗಿದೆ ಮುಂದೆ ಎಂದಿಗೂ ಕನಸ್ಸಿನಲ್ಲಿ ಮನಸ್ಸಿನಲ್ಲಿ ನೆನೆಯಬಾರದು ಆ ತಪ್ಪು ಆಗಬಾರದು ಕಾಯ ವಾಚ ಮನಸ್ಸಾ ಆ ಕಾರ್ಯ ಮಾಡಬಾರದು ಅಂತ ಆದೇಶ ಕೊಟ್ಟರು. ಅದಕ್ಕೆ ಅವನು ಒಪ್ಪಿಕೊಂಡನು.ಆದ್ರೆ ಊ ರಿನವರಿಗೆಲ್ಲ ಇದರಿಂದ ಬೇಸರವಾಗುತ್ತೆ ನೋಡಿ ಅನೇಕ ಊರುಗಳಲ್ಲಿ ಇದೊಂದು ಯಾರನ್ನು ಬೆಳೆಯೋಕ್ಕೆ ಬಿಡೋಲ್ಲ ಯಾರಾದರೂ ಕೀರ್ತಿವಂತರಾಗುತ್ತಾರೆ ಅಂದರೆ ಅವರನ್ನ ಖಂಡಿಸುತ್ತಾರೆ .ಹಾಗೇ ಗ್ರಾಮದವರು ಇದೇನು ಈ ಗುರುಗಳು ಹೀಗೆ ಹೇಳಿದ್ರಲ್ಲ ಅಂತ ಅಸಮಾಧಾನವಾಗುತ್ತೆ. ಇವನು ಹೇಗೆ ಶುದ್ಧ ಆಗೋಕೆ ಸಾಧ್ಯ ಮಾಡಬಾರದ ಅನಾಚಾರ ಮಾಡಿದ್ದಾನೆ ಎಂದು ಇಡೀ ಗ್ರಾಮದವರೆಲ್ಲ ರಾಯರ ಹತ್ತಿರ ಬರುತ್ತಾರೆ "ಇದೇನು ಗುರುಗಳೇ ಅವನೊಬ್ಬ ದ್ರೋಹಿ ಅವನು ಶುದ್ಧ ಆಗಿದ್ದಾನೆ ಅಂದ್ರಂತೆ ಹೇಗೆ ಸೇರಿಸಿ ಕೊಳ್ಳೋದು ಅಂದಾಗ ರಾಯರು ಹೇಳುತ್ತಾರೆ "ಅಪ್ಪಾ ನನ್ನ ಕಣ್ಣ ಮುಂದೆಯೇ ಅವನಿಗೆ ಪ್ರಾಯಶ್ಚಿತ್ತ ಮಾಡಿಸಿದ್ದೇನೆ ಕೇಶಮುಂಡನ ಮಾಡಿಸಿ ಶಾಸ್ತ್ರೋಕ್ತವಾಗಿ ಅವನು ಶುದ್ದನಾಗಿದ್ದಾನೆ ಆದ್ದರಿಂದ ಅವನನ್ನ ಸ್ವೀಕಾರ ಮಾಡೋದ್ರಲ್ಲಿ ಏನು ತಪ್ಪಿಲ್ಲ ಮನುಷ್ಯ ಏಷ್ಟೋ ಗಳಿಗೆಯಲ್ಲಿ ತಪ್ಪು ಮಾಡಿಬಿಡುತ್ತಾನೆ ತಪ್ಪುಗಳು ನಡೆದುಹೋಗುತ್ತವೆ ಮತ್ತೆ ಅದನ್ನ ಮುಂದುವರಿಸಬಾರದು ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಂಡು ಸರಿದಾರಿಯಲ್ಲಿ ಹೋದರೆ ಅದಕ್ಕೆ ಎಲ್ಲರೂ ಮನ್ನಣೆ ಕೊಡಬೇಕು ಅನೇಕ ಶಾಸ್ತ್ರದ ಉಕ್ತಿಗಳನ್ನು ರಾಯರು ಹೇಳುತ್ತಾರೆ ಆದರೂ ಆ ಗ್ರಾಮಸ್ಥರಿಗೆ ಮನಸ್ಸಿಗೆ ಕಸಿವಿಸಿ.ಇದನ್ನು ತಿಳಿದ ರಾಯರು ಗ್ರಾಮಸ್ಥರಿಗೆ ಹೇಳುತ್ತಾರೆ ನಿಮಗೆಲ್ಲ ಒಂದು ಘಟನೆ ತೋರಿಸುತ್ತೇನೆ ಕುಳಿತುಕೊಳ್ಳಿ ಎನ್ನುತ್ತಾರೆ.ತಮ್ಮ ಶಿಷ್ಯನಿಗೆ ಒಂದು ಬಿಳಿ ವಸ್ತ್ರ ತೆಗೆದುಕೊಂಡು ಬಾ ಎನ್ನುತ್ತಾರೆ. ಅವನು ಹೊಸದಾದ ಬಿಳಿ ವಸ್ತ್ರ ತರುತ್ತಾನೆ ಅದನ್ನು ರಾಯರು ಗೇರು ಎಣ್ಣೆಗೆ ಅದ್ದು ತ್ತಾರೆ .ಗೇರೆಣ್ಣಿ ಬಹಳ ಕಪ್ಪುಒಂದು ಸಲ ಅಂಟಿಕೊಂಡರೆ ಹೋಗುವುದಿಲ್ಲ ಅದರಲ್ಲಿ ಮುಳುಗಿಸುತ್ತಾರೆ ಆ ಬಿಳಿ ವಸ್ತ್ರ ವನ್ನು ಹಿಂಡಿ ಹೊರತೆಗೆಸುತ್ತಾರೆ ಶಿಷ್ಯನ ಕೈಲಿ ಎಲ್ಲರೂ ನೋಡುತ್ತಿದ್ದಾರೆ ರಾಘವೇಂದ್ರ ತೀರ್ಥರು ತಮ್ಮಕಮಂಡಲದಿಂದ ಶಂಖೋದಕಡಿಂದ ತೆಗೆದುಕೊಂಡ ತೀರ್ಥವನ್ನು ಅಭಿಮಂತ್ರಿಸಿ ಬಟ್ಟೆ ಮೇಲೆ ಪ್ರೋಕ್ಷಣೆ ಮಾಡುತ್ತಾರೆ ಕಪ್ಪುಬಟ್ಟೆ ಹೊಸದಾದ ಬಿಳಿ ಬಟ್ಟೆಯಾಗುತ್ತೆ ಮೊದಲು ಹೇಗಿತ್ತು ಅದಕಿಂತ ಪ್ರಕಾಶಮಾನವಾಗುತ್ತೆ. ಎಲ್ಲರೂ ಆಶ್ಚರ್ಯದಿಂದ ನೋಡುತ್ತಿದ್ದಾರೆ.ರಾಯರು ಶಂಖೋದಕ ತೀರ್ಥದ ಪ್ರಭಾವ ಏನು ಅಂತಾ ರಾಯರು ತೋರಿಸ್ತಾ ಇದ್ದಾರೆ ರಾಯರು ಶಾಂತವಾಗಿ ಕುಳಿತಿದ್ದಾರೆ.ಅಗ ಗ್ರಾಮಸ್ಥರೆಲ್ಲ ರಾಯರ ಹತ್ತಿರ ಕ್ಷಮಾಪಣೆ ಕೇಳುತ್ತಾರೆ ನೀವು ಹೇಳಿದ್ರು ನಾವು ನಿಮ್ಮ ಮಾತು ಕೇಳಲಿಲ್ಲ ದಯವಿಟ್ಟು ನಮ್ಮನ್ನು ಕ್ಷಮಿಸಿ ಎಂದು ಕೇಳಿಕೊಳ್ಳುತ್ತಾರೆ ರಾಯರು ಒಂದು ಸಂದೇಶ ಕೊಡುತ್ತಾರೆ ಯಾರೇ ಒಂದು ವ್ಯಕ್ತಿ ತಾನು ಅನಾಚಾರಿಯಾದ್ರೆ ಅವನು ಮತ್ತೆ ತಾನು ಸರಿ ದಾರಿ ಬರೋಕೆ ಧರ್ಮದ ಹಾದಿ ಹಿಡಿಯೋಕ್ಕೆ ಅವಕಾಶವಿದೆ ಮೊದಲು ಅವನು ಪ್ರಾಯಶ್ಚಿತ್ತ ಮಾಡ್ಕೋಬೇಕು.ಶ್ರೀಕೃಷ್ಣ ಹೇಳಿದ್ದಾನೆ,ಶಾಸ್ತ್ರದ ವಿರುದ್ಧ ಹೋದರೆ ಅವನಿಗೆ ಇಲ್ಲೂ ಸುಖ ಸಿಗೋಲ್ಲ ಉತ್ತಮ ಗತಿಯಂತೂ ಇಲ್ಲವೇ ಇಲ್ಲ ಅಂತ.ಅದಕ್ಕೆ ರಾಯರು ಹೇಳಿರುವುದು ಶಾಸ್ತ್ರದ ವಿರುದ್ಧ ಹೋಗಬಾರದು ಒಂದು ವೇಳೆ ನಮ್ಮಿಂದ ಏನಾದರೂ ಅನಾಚಾರವಾದ್ರೆ ಪ್ರಾಯಶ್ಚಿತ್ತ ಮಾಡ್ಕೊಂಡು ಅದನ್ನು ಮತ್ತೇ ಮುಂದುವರಿಸಿಕೊಂಡು ಹೋಗದೆ ಇದ್ರೆ ಅವನಿಗೆ ಭಗವಂತ ಅನುಗ್ರಹ ಮಾಡುತ್ತಾನೆ ಎನ್ನುತ್ತಾರೆ."ಯಾರು ಒಮ್ಮೆ ಭಕ್ತಿಯಿಂದ ಶ್ರದ್ಧೆಯಿಂದ ನಾರಾಯಣ ಅಂತ ಕೂಗಿದರೆ, ನಾರಾಯಣನ ಸ್ಮರಣೆ ಮಾಡಿದ್ರೆ ಸಾಕು ಅವನು ಒಳಗೂ ಶುದ್ಧಿ ಆಗ್ತಾನೆ ಹೊರಗೂ ಶುದ್ಧಿ ಆಗ್ತಾನೆ" ಇದು ಪದ್ಮ ಪುರಾಣದ ಶ್ಲೋಕ.ರಾಘವೇಂದ್ರ ಸ್ವಾಮಿಗಳು ಆಗಿರುವುದೇ ನಮ್ಮ ಧರ್ಮದಲ್ಲಿ ನಮ್ಮ ಋಷಿ ಮುನಿಗಳಲ್ಲಿ ನಮ್ಮ ಸಾದು ಸಂತರಲ್ಲಿ ಎಷ್ಟು ಶಕ್ತಿ ಇತ್ತು ಎಷ್ಟು ಸಾಮರ್ಥ್ಯವಿತ್ತು ಎಷ್ಟು ವೈಭವ ಇತ್ತು ಇದನ್ನ ತೋರಿಸಿಕೊಡುವುದಕ್ಕೆ ಅಂತಾನೆ ಅದ ಅವತಾರ ಅಂತ ಸಂದರ್ಭ ಬಂದಾಗ ಜನರಿಗೆ ತಿಳಿ ಹೇಳುತ್ತಿದ್ದರು ರಾಯರು.ಅವರು ಪವಾಡ ಮಾಡುತ್ತಿದ್ದರು ಅಂಡುಕೊಳ್ಳಬಾರದು ಪವಾಡದಿಂದ ರಾಯರಿಗೆ ಆಗಬೇಕಾದ್ದು ಏನೂ ಇಲ್ಲ ಸತ್ಯದ ಪ್ರಕಟ ಆಗಬೇಕು ಭಗವಂತಸ ಲೀಲೆ ಏನು ಎಂಬುದು ಗೊತ್ತಾಗಬೇಕು, ಭಗವಂತನ ಶಕ್ತಿ ಏನು ಅಂತ ಗೊತ್ತಾಗಬೇಕು ಧರ್ಮದ ಉಪಾಸನೆ ಮಾಡಿದ್ರೆ ಎಂಥೆಂಥ ಶಕ್ತಿಗಳನ್ನು ಗಳಿಸಬಹುದು ಎಂಬುದನ್ನು ಮನದಟ್ಟು ಮಾಡ್ತಿದ್ರು ರಾಯರು.ಅವರ ಜೀವನ ಇಂಥದ್ದೇ ಆದ್ದರಿಂದ ನಮ್ಮ ರಾಘವೇಂದ್ರ ಸ್ವಾಮಿಗಳೂ ಯುಗಪುರುಶರು 🙏🙏

Опубликовано:

 

10 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 5   
@rajeshan895
@rajeshan895 3 месяца назад
ಓಂ ಗುರುಭ್ಯೋನಮಃ 🙏🙏🙏👏👏👏💐
@RajeshwariVenkatesh-rl3dp
@RajeshwariVenkatesh-rl3dp 3 месяца назад
Guru ragavendraya namaha
@shailaangadi4986
@shailaangadi4986 2 месяца назад
Sri raghavendraya namah
@deepamestri1464
@deepamestri1464 3 месяца назад
Om raghavendray Namaha
@shalinikumar-jk7pn
@shalinikumar-jk7pn 3 месяца назад
Sree Raghavendraya namah 🙏 Sree Harivayu Guruve namah 🙏 Sree rama Raghavendraya namah 🙏
Далее
Bike vs Super Bike Fast Challenge
00:30
Просмотров 21 млн
Apple Event - September 9
1:38:50
Просмотров 25 млн
Bike vs Super Bike Fast Challenge
00:30
Просмотров 21 млн