ವಿಷ ಆಹಾರ ಮಾಫಿಯಾ ನಮ್ಮ ಜೀವದ ಜೊತೆ ನಿತ್ಯ ಹೇಗೆಲ್ಲಾ ಚಲ್ಲಾಟ ಆಡ್ತಿದೆ ಅನ್ನೋದಕ್ಕೆ ನಮ್ಮ ಕವರ್ಸ್ಟೋರಿ ತಂಡ ಈ ಬಾರಿ ನಡೆಸಿದ ರಹಸ್ಯ ಕಾರ್ಯಾಚರಣೆಯೇ ಸಾಕ್ಷಿ.
ಆರೋಗ್ಯಕ್ಕೆ ಅಮೃತ ಅಂತ ತಿಳಿದಿದ್ದ ದೇಸಿ ತುಪ್ಪವನ್ನೂ ಕಲಬೆರಕೆ ಮಾಫಿಯಾ ನಕಲಿ ಮಾಡಿದೆ. ಆ ಮೂಲಕ ಜನರಿಗೆ ವಿಷವುಣಿಸಸ್ತಿದೆ. ದೇಸಿ ತುಪ್ಪ ಅಮೃತ. ಅದು ದೇಹದ ಆರೋಗ್ಯಕ್ಕೆ ಪೂರಕ. ಮಕ್ಕಳ ಬೆಳವಣಿಗೆಗೆ ಅತ್ಯವಶ್ಯ. ಆದರೆ ಇದೇ ಅಮೃತಕ್ಕೆ ವಿಷ ಹಾಕ್ತಿದೆ ಕಲಬೆರಕೆ ಮಾಫಿಯಾ. ಈ ಕಟು ಸತ್ಯವನ್ನ ಕಂಡು ಹಿಡಿದಿದೆ ಸುವರ್ಣ ನ್ಯೂಸ್ನ ಕವರ್ಸ್ಟೋರಿ ತಂಡ.
ನಮ್ಮದು ದೇಸಿ ತುಪ್ಪ , ಅತ್ಯಂತ ಪರಿಶುದ್ಧ ಅಂತ ಹೇಳಿ ಜನರಿಗೆ ಮೋಸ ಮಾಡಿ ನಕಲಿ ವಿಷಕಾರಿ ತುಪ್ಪವನ್ನ ಜನರಿಗೆ ಮಾರುತ್ತಿರೋ ದೊಡ್ಡ ಮಾಫಿಯಾ ನಮ್ಮ ರಾಜಧಾನಿ ಬೆಂಗಳೂರಿನಲ್ಲೇ ಆಕ್ಟೀವ್ ಆಗಿದೆ.ಈ ನಕಲಿ ತುಪ್ಪ ಮಾರಾಟಗಾರರ ನಾನಾ ಗೋಡೌನ್ಗಳಲ್ಲಿ ರಹಸ್ಯ ಕಾರ್ಯಾಚರಣೆ ಮಾಡಿತು ಕವರ್ಸ್ಟೋರಿ ತಂಡ.
ವರದಿ: vijayalakshmi shibrur
Facebook: www.facebook.com
Twitter: twitter.com
Website: www.suvarnanews.tv
11 окт 2024