Shri Shamasundara Seva PratishTana Hari Namma Sudha Audios Present
Song Indu Kandu DhanyanadenO KondandaPaNi
Rachane Shri Mahidhara Vittala
Singer Smt.AmbhruNi Mahidas Achar
_____________________________________________________
Music Composed By
Shripad Das And Gopal GudiBandi
_____________________________________________________
Rendition by S Jamadagni
Photo Courtesy : diipak rao n Hariprasad Vashista and all artist who creat such a wonderfull painting
_____________________________________________________
Speacial Thaks to M.Sameer Kulkarni & Mr KOushik Pandharapur
_____________________________________________________
ಇಂದು ಕಂಡು ಧನ್ಯನಾದೆನೋ ಕೋದಂಡಪಾಣಿ ಪ
ಇಂದು ಕಂಡು ಧನ್ಯನಾದೆ ಪುಂಡರೀಕ ಮೊಗವ ನೋಡಿ
ಗಂಡು ಮಧ್ವಮತದ ಸಿಂಹ ಸತ್ಯಾತ್ಮರ ಕರದಿ ನಿನ್ನ ಅಪ
ಏಳು ತಾಳಗಳನು ಏಕ ಛಾಪದಲ್ಲಿ ಮುರಿದು ನಿಂತ
ಭಾಳ ಚೆಲುವ ಮೂಲದಿಗ್ವಿಜಯ ಶ್ರೀರಾಮನನ್ನು 1
ಭಂಡ ರಕ್ಕಸನ ಹತ್ತು ರುಂಡಕಡಿದು ನಿಂತ ಕೋ-
ದಂಡಪಾಣಿ ಮೂಲದಿಗ್ವಿಜಯ ಶ್ರೀರಾಮನನ್ನು 2
ಚಂದ ವಂಶರಾಮ ವಿಠಲ ವ್ಯಾಸಮುಷ್ಠಿಗಳು
ಅಂದವುಳ್ಳ ಮೂಲದಿಗ್ವಿಜಯ ರಾಮಸೀತೆಯನ್ನು 3
ಸಾರ ಪರಿವಾರ ತನ್ನ ಸೂರಿನೊಳಗೆ ಇಟ್ಟುಕೊಂಡ
ಧೀರ ಶ್ರೀಮೂಲದಿಗ್ವಿಜಯ ರಾಮಚಂದ್ರನನ್ನು 4
ಈ ಮಹಿಯೊಳು ಉತ್ತರಾದಿಮಠದಿ ಪೂಜೆಗೊಂಬ
ಶಾಮಸುಂದರ ಮಹೀಧರವಿಠಲ ಶ್ರೀರಾಮನನ್ನು 5
5 сен 2024