Тёмный

Innashtu Bekenna by Shree Harsha | ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ | HarshaDhwani | Gajanana Sharma 

HarshaDhwani - ShreeHarsha
Подписаться 162 тыс.
Просмотров 4,5 млн
50% 1

Wonderful depiction of Lord Sri Rama and his character
Lyrics by Dr. Gajanana Sharma
Music by Sri Saaket Sharma
Video conceptualisation
Music Arrangement
Home Recording
Editing & Mastering
Singing by
M R Shree Harsha.
Official Website:: www.harshadhwani.com/
Facebook Page :: / shreeharshaofficial
Instagram :: / harshadhwani_shreeharsha
Twitter :: / harshadhwani
SoundCloud :: / shree-harsha-singer
This happens to be anthem song of Sri Ramachandrapura Mutt, Hosanagara as per details shared by Sri Gajanana Sharma.
We humbly dedicate this song at holy feet of deity Sri Ramachandra Swamy of Sri Ramachandrapura mutt, Hosanagara, Karnataka.
Lyrics in Kannada :
ರಾಮಾ..ರಾಮಾ ರಾಮಾ...ರಾಮಾ..
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ ||
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ||
ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|
ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|
ಕಷ್ಟಗಳ ಕೊಡಬೇಡ ಎನಲಾರೆ ರಾಮ|
ಕಷ್ಟ ಸಹಿಸುವ ಸಹನೆ ಕೊಡು ಎನಗೆ ರಾಮ|
ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|
ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ ||
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ ||
ರಾಮಾ..ರಾಮಾ ರಾಮಾ...ರಾಮಾ..
ಒಳಿತಿನೆಡೆ ಮುನ್ನಡೆವ ಮನವ ಕೊಡು ರಾಮ|
ಸೆಳೆತಕ್ಕೆ ಸಿಗದಂತ ಸ್ಥಿರತೆ ಕೊಡು ರಾಮ|
ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ|
ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ|
ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
ಕಣ್ಣು ಕಳೆದರು ನಿನ್ನ ಕನಸ ಕೊಡು ರಾಮ|
ನನ್ನ ಹರಣಕೆ ನಿನ್ನ ಚರಣ ಕೊಡು ರಾಮ ||
ರಾಮಾ..ರಾಮಾ ರಾಮಾ...ರಾಮಾ..
ಕೌಸಲ್ಯೆಯಾಗುವೆನು ಮಡಿಲಲಿರು ರಾಮ|
ವೈದೇಹಿಯಾಗುವೆನು ಒಡನಾಡು ರಾಮ|
ಪಾದುಕೆಯ ತಲೆಯಲಿಡು ಭರತನಾಗುವೆ ರಾಮ|
ಸಹವಾಸ ಕೊಡು ನಾನು ಸೌಮಿತ್ರಿ ರಾಮ|
ಸುಗ್ರೀವನಾಗುವೆನು ಸ್ನೇಹ ಕೊಡು ರಾಮ|
ಹನುಮನಾಗುವೆ ನಿನ್ನ ಸೇವೆ ಕೊಡು ರಾಮ|
ಶಬರಿಯಾಗುವೆ ನಿನ್ನ ಭಾವ ಕೊಡು ರಾಮ ||
ರಾಮಾ..ರಾಮಾ ರಾಮಾ...ರಾಮಾ..
ಮಡಿಲಲ್ಲಿ ಮರಣ ಕೊಡು ನಾ ಜಟಾಯುವು ರಾಮ|
ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ|
ನಾ ವಿಭೀಷಣ ಶರಣುಭಾವ ಕೊಡು ರಾಮ|
ನನ್ನೊಳಿಹ ರಾವಣಗೆ ಸಾವ ಕೊಡು ರಾಮ|
ಕಣ್ಣೀರ ಕರೆಯುವೆನು ನನ್ನತನ ಕಳೆ ರಾಮ|
ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ ||
ರಾಮಾ..ರಾಮಾ ರಾಮಾ...ರಾಮಾ..
ಋತ ನೀನೆ ಋತು ನೀನೆ ಶ್ರುತಿ ನೀನೆ ರಾಮ|
ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ|
ಆರಂಭ ಅಸ್ತಿತ್ವ ಅಂತ್ಯ ನೀ ರಾಮ|
ಪೂರ್ಣ ನೀ ಪ್ರಕಟ ನೀ ಆನಂದ ರಾಮ|
ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ|
ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
ರಘುರಾಮ ರಘುರಾಮ ರಘುರಾಮ ರಾಮ|
ನಗು ರಾಮ ನಗ ರಾಮ ಜಗ ರಾಮ ರಾಮ ||
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ ||
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ||
ರಾಮಾ..ರಾಮಾ ರಾಮಾ...ರಾಮಾ..
~~~~

Видеоклипы

Опубликовано:

 

24 мар 2020

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 2,3 тыс.   
@HbpreetHbpreet
@HbpreetHbpreet 5 месяцев назад
❤ಸಾಹಿತ್ಯಕ್ಕೆ ಶಿರಸಾಷ್ಟಾಂಗ ನಮಸ್ಕಾರಗಳು🙏🙏 ಗಾಯನಕ್ಕೆ ದೀರ್ಘ ದಂಡ ಪ್ರಣಾಮಗಳು 🚩🚩🚩🚩🚩
@srinivasyogbharti8578
@srinivasyogbharti8578 5 месяцев назад
ದಿನದಲ್ಲಿ ಒಮ್ಮೆ ಈ ಹಾಡು ಕೇಳಿ ಜೀವನ ಪವಿತ್ರ ವಾಗುವುದು
@vasanthanagaraj4890
@vasanthanagaraj4890 11 месяцев назад
ಹರ್ಷ‌..ಅವರ ಕಂಚಿನ ಕಂಠದ ರಾಮ ರಾಮ ಶಬ್ದ ರೋಮಾಂಚನ ಮೂಡಿತು... ಕೇಳುತ್ತಾ ಕಣ್ಣಿಂದ ನೀರು ಬಂದಿತ್ತು.🙏🌹
@timmannabhatbhat517
@timmannabhatbhat517 5 месяцев назад
ಅದ್ಭುತವಾದ ಹಾಡು, ಭಕ್ತಿಫಾರವ್ವಷವಾಯಿತೇನ್ನಮನಸ್ಸು
@manjularamesh1892
@manjularamesh1892 5 месяцев назад
ನಾನೂ ಸಹಾ ದಿನಾ ರಾತ್ರಿ ಮಲಗುವ ಮುನ್ನ ಈ ಹಾಡು ಕೇಳಿ ಭಕ್ತಿ ತುಂಬಿಕೊಂಡು, ಆನಂದವಾಗಿ ಮಲಗುತ್ತೇನೆ.
@somasundarkadur1779
@somasundarkadur1779 6 месяцев назад
ಎಂತಾ ಮಧುರ ಧ್ವನಿ. ಮೈಸೂರಿನ ಈ ಕೋಗಿಲೆ ನಮ್ಮ ಹೆಮ್ಮೆ.
@sowmyanmsowmya7323
@sowmyanmsowmya7323 2 года назад
ನಿಮ್ಮ ಕಂಠ ಸಿರಿಗೆ ನನ್ನ ಕೋಟಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@gowrip593
@gowrip593 5 месяцев назад
ಅದ್ಭುತ ಕಂಠ ಸಿರಿ ನಿಮ್ಮದು ನಿಮ್ಮ ಸಂಗೀತ ಪಯಣ ತುಂಬ ಚೆನ್ನಾಗಿ ಸಾಗಲಿ 🎉🎉ಧನ್ಯವಾದಗಳು🙏🚩🚩
@erammapujar3637
@erammapujar3637 Год назад
ಎಷ್ಟು ಬಾರಿ ಕೇಳಿ ದರೂ ಸಾಕೆನ್ನದ ಹಾಗೆ ಇದೆ ಹಾಡು,, 🙏🙏🙏🙏🙏
@mangalajayant6449
@mangalajayant6449 5 месяцев назад
ನನ್ನೊಳಿಹ ರಾವಣಗೆ ಸಾವ ಕೊಡೋ ರಾಮ
@ranjanajoshi8096
@ranjanajoshi8096 Год назад
ಶ್ರೀ ರಾಮ ಜಯ ರಾಮ ಜಯ ಜಯ ರಾಮ ಶ್ರೀ ರಾಮ ಜಯ ರಾಮ ಜಯ ಜಯ ರಾಮ ಶ್ರೀ ರಾಮ ಜಯ ರಾಮ ಜಯ ಜಯ ರಾಮ
@kantharajhassan6874
@kantharajhassan6874 5 месяцев назад
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ರಾಮ ರಾಮ ರಾಮ ರಾಮ ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ| ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ| ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ| ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ| ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ| ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ಒಳಿತಿನೆಡೆ ಮುನ್ನೆಡೆವ ಮನವಕೊಡು‌ ರಾಮ| ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ| ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ| ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ| ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ| ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ| ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ| ನನ್ನ ಹರಣಕೆ ನಿನ್ನ ಚರಣ ಕೊಂಡು ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ಕೌಸಲ್ಯೆಯಾಗುವೆನು ಮಡಿಲಲಿರು ರಾಮ| ವೈದೇಹಿಯಾಗುವೆನು ಒಡನಾಡು ರಾಮ| ಪಾದುಕೆಯ ತಲೆಯಲಿಡು ಭರತನಾಗುವೆ ರಾಮ| ಸಹವಾಸ ಕೊಡು ನನಗೆ ಸೌಮಿತ್ರಿ ರಾಮ| ಸುಗ್ರೀವನಾಗುವೆನು ಸ್ನೇಹ ಕೊಡು ರಾಮ| ಹನುಮನಾಗುವೆ ನಿನ್ನ ಸೇವೆ ಕೊಡು ರಾಮ| ಶಬರಿಯಾಗುವೆ ನಿನ್ನ ಭಾವ ಕೊಡು ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ಮಡಿಲಲ್ಲಿ ಮರಣಕೊಡು ನಾ ಜಟಾಯೂವು ರಾಮ| ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ| ನಾ ವಿಭೀಷಣ ಶರಣುಭಾವ ಕೊಡು ರಾಮ| ನನ್ನೊಳಿಹ ರಾವಣಗೆ ಸಾವ ಕೊಡು ರಾಮ| ಕಣ್ಣೀರು ಕರೆಯುವೆನು ನನ್ನತನ ಕಳೆ ರಾಮ| ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ಋತ ನೀನೆ ಋತು ನೀನೆ ಶೃತಿ ನೀನೆ ರಾಮ| ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ| ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ| ಪೂರ್ಣ ನೀ ಪ್ರಕಟ ನೀ ಆನಂದ ರಾಮ| ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ| ಗುರಿ ನೀನೆ ಗುರು ನೀನೆ ಅರಿವು ನೀ ರಾಮ| ಗುರಿ ನೀನೆ ಗುರು ನೀನೆ ಅರಿವು ನೀ ರಾಮ| ರಘುರಾಮ ರಘುರಾಮ ರಘುರಾಮ ರಘುರಾಮ| ನಗುರಾಮ ನಗರಾಮ ಜಗರಾಮ ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
@sudhast2931
@sudhast2931 5 месяцев назад
ತುಂಬಾ ಧನ್ಯವಾದಗಳು🙏🌹
@ananthanarayan8490
@ananthanarayan8490 2 месяца назад
ಸಾಹಿತ್ಯ ಅಮೋಘ 🎉❤
@rukminibhashyam3943
@rukminibhashyam3943 4 месяца назад
ಶ್ರೀ ಹರ್ಷ ರವರ ಗಾಯನ ಅದ್ಭುತ ಅರ್ಥಪೂರ್ಣವಾದ ಸಾಹಿತ್ಯ ಹಾಡನ್ನು ರಚಿಸಿದವರಿಗೆ ಸಾಷ್ಟಾಂಗ ಪ್ರಣಾಮಗಳು
@user-qu1dy6rq4v
@user-qu1dy6rq4v 5 месяцев назад
ಶ್ರೀ ರಾಮರ ವರ್ಣನಾತೀತ ವ್ಯಕ್ತಿತ್ವದ ಹೃದಯ ಸ್ಪರ್ಶಿ ಮೆಲುಕು.
@harishhari2300
@harishhari2300 Год назад
ನನ್ನ ಮರಣಕ್ಕೆ ನೀನ್ನ ಚರಣ ಕೊಡು ರಾಮ 🙏🙏🙏🌹🌹🌹
@shivakumarn7073
@shivakumarn7073 Год назад
True but expect pallavi for new things
@deepikadiva8395
@deepikadiva8395 5 месяцев назад
Yentha mathu😊
@ajjiyakavitegalu5605
@ajjiyakavitegalu5605 5 месяцев назад
ನಿಮ್ಮ ಹಾಡಿನಲ್ಲೇ ಇದೆ ಪರಿಪೂರ್ಣ ಆನಂದ.. ಹರ್ಷ ದ್ವನಿ 🙋‍♂️🙋‍♂️🙋‍♂️🕉️🕉️🕉️✡️
@rekhashiv3366
@rekhashiv3366 3 месяца назад
¹o
@krishnanr2645
@krishnanr2645 6 месяцев назад
ಒಬ್ಬ ವ್ಯಕ್ತಿ ತನ್ನ ಕೆಟ್ಟ ಗುಣಗಳಿಂದ ಹೋರ ಬರ ಬೇಕಾದರೆ ಈ ಹಾಡು ನ್ನೂ ಕೇಳಿದರೆ ಸಾಕು ಜನ್ಮ ಸಾರ್ಥಕವಾಗಿತು.🎉
@pavitrap60
@pavitrap60 2 года назад
ಭಕ್ತಿ ಉಕ್ಕುವ ಗಾಯನ.. ಹೀಗೇ ನಿಮ್ಮ ಸಂಗೀತ ಪಯಣ ಸಾಗಲಿ.. ನಮ್ಮ ಕಿವಿಗಳು ನಿಮ್ಮ ಗಾಯನದಿಂದ ಸಂಭ್ರಮಿಸಲಿ..
@kavithasridhar1563
@kavithasridhar1563 5 месяцев назад
ಅದ್ಬುತ ಕಂಠ ಸಿರಿ, ದಿನ ಕೆಳ ಬೇಕೇನೇನುಸುವು. ಹಾಡು ವಂದನೆಗಳು ಹರ್ಷ 😊
@shanmukhamys2282
@shanmukhamys2282 11 месяцев назад
ಗೊಂದಲಗಳೆಲ್ಲ ಕಾಣೆಯಾದವು, ಅದ್ಭುತ ಗಾಯನ ಅನಂತಾನಂತ ವಂದನೆಗಳು, ಶ್ರೀಹರ್ಷ ಅವರಿಗೆ ಹರುಷದ ನಮಸ್ಕಾರಗಳು.
@umashankari7405
@umashankari7405 5 месяцев назад
ಬಹಳ ಇಷ್ಟ ಪಟ್ಟ, ಹೃದಯ ಮುಟ್ಟಿದ ಸಾಹಿತ್ಯ ಇದು.. ಈಗ ಕಂಠವೂ ಆಪ್ತವಾಯಿತು.. 👏👏👌👌🙏
@rashmi.n3781
@rashmi.n3781 Год назад
ಅತಿಯಾದ ದುಃಖ ಇದ್ದಾಗ ಈ ಹಾಡು ನನ್ನ ಮನಸಿಗೆ ಮುದ ನೀಡುತ್ತದೆ. ಏನೋ ಒಂಥರಾ ಸಮಾಧಾನ ಖುಷಿ ನೆಮ್ಮದಿ ಸಂತೋಷ ತರುತ್ತದೆ. ಹರ್ಷರವರಿಗೆ ತುಂಬಾ ಧನ್ಯವಾದಗಳು. ನಿಮ್ಮ ಧ್ವನಿಯಲ್ಲಿ ಯಾವುದೋ ದೈವ ರೂಪದ ಶಕ್ತಿ ಅಡಗಿದೆ ಅನಿಸುತ್ತದೆ. ಹೀಗೆ ಮತ್ತಷ್ಟು ಮುದ ನೀಡುವ ಹಾಡುಗಳನ್ನು ಹಾಡಿ, ನಮಸ್ಕಾರ
@nandinig.n1791
@nandinig.n1791 5 месяцев назад
ಎಷ್ಟು,ಅರ್ಥಪೂರ್ಣವಾದ ಸಾಹಿತ್ಯ..ಜೊತೆಗೆ ನಿಮ್ಮ ಅದ್ಭುತವಾದ ಗಾಯನ..ಮನಸ್ಸಿಗೆ ಎನೋ ಒಂದು ರೀತಿಯ ತೃಪ್ತಿ ಈ ಹಾಡನ್ನ ಕೇಳ್ತಿದ್ರೆ...💐💐🙏🙏
@ask6733
@ask6733 2 года назад
ಯೇೂಗಮಾರ್ಗಗಳಲ್ಲಿ ಭಕ್ತಮಾರ್ಗವೂ ಒಂದು , ಸೂಪರ್ ಸಾಂಗ್ ಜೈ ಶ್ರೀರಾಮ್
@hariniiyengar9458
@hariniiyengar9458 2 года назад
ಆಹಾ ಎಂತಾ ಸುಮಧುರವಾದ ಧ್ವನಿ... ರಾಮನೇ ಎದುರು ಬಂದರೂ ಆಶ್ಚರ್ಯವಿಲ್ಲ 👌👏👏👏🙏
@manjunathkk9425
@manjunathkk9425 2 года назад
ಅದ್ಭುತವಾದಂತಹ ಗೀತೆ ಶ್ರೀ ರಾಮನ ಬಗ್ಗೆ ಭಾವನೆಗಳನ್ನ ಮನದಲ್ಲಿ ತುಂಬಿಸುವಂತಹ ಸಾಲುಗಳು ಅದ್ಭುತವಾಗಿವೆ... ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್
@pushpaashok7729
@pushpaashok7729 Год назад
Jai shriram ಪದ ಗಳಲ್ಲಿ ಹಾಡಾಗಿ bramnda ಹಡಗಿದೆ. Tha nku ಚೆನ್ನಾಗಿ ಹಾ ಡಿ ದ್ದೀ ರ
@nageshmahabalashetty7761
@nageshmahabalashetty7761 Год назад
ದಿನ ಬೆಳಿಗ್ಗೆ ಒಂದು ಸಾರಿ ಕೇಳಿದ್ರೆ ದಿನವಿಡೀ ನವೋಲ್ಲಾಸ.
@neelaveni4811
@neelaveni4811 5 месяцев назад
ತುಂಬಾ ಚೆನ್ನಾಗಿದೆ
@sushumasuresh4562
@sushumasuresh4562 Год назад
ನನ್ನಾಯಸ್ಸಿನ ಉಳಿದ ದಿನಗಳನ್ನ ಕೊಡಬಹುದಾದರೆ...ಅದು ನಿಮ್ಮ ಧ್ವನಿಗೆ, ಅದರೊಳಗಣ ಭಾವಕ್ಕೆ....🙏🙏🙏🙏
@kusumaks2633
@kusumaks2633 Год назад
NMMA.PUNYA.SIR.ZSDEVARU.NEMMA.DHWZNI Keluvaodzloo.nzmmamna.kzradae.kollivallla.iruva.obanae.mHznannu.u.s.z.gae.kaluhesi ನಮ್ಮ.maneyavaru.nanu.badikiddanar.andarae.adakae.jarshs Dhwaniyae.katana.anta.adbitha.shakthi.a.devaru.avaru.patta.shramakkaedzya.palisiddanae ಆದರೆ.harsjadhwani.namma.kemppae.gowdara Dhwani
@venugopalhnhonnavalli837
@venugopalhnhonnavalli837 Год назад
@@kusumaks2633 .....
@venugopalhnhonnavalli837
@venugopalhnhonnavalli837 Год назад
Hi how are you@@kusumaks2633
@Sridevi-ki4mn
@Sridevi-ki4mn Год назад
Super
@rekhamurlidhar7137
@rekhamurlidhar7137 9 месяцев назад
@sushma Suresh4562....wah😊
@AnuRadha-vt4ro
@AnuRadha-vt4ro 2 года назад
ತುಂಬಾ ಚೆನ್ನಾಗಿದೆ. ಈ ಹಾಡುನ್ನು ಕೇಳಿದಾಗಲೆಲ್ಲ ಕಣ್ಣೀರು ಬರುತ್ತದೆ. ಆಮೇಲೆ ಮನಸ್ಸು ಶಾಂತವಾಗುತ್ತದೆ
@nagrajnagraj8134
@nagrajnagraj8134 5 месяцев назад
ಸಾಹಿತ್ಯ ರಚನೆಗೆ ಅವರ ಪಾದಗಳಿಗೆ ಸಾಸ್ಟಂಗ ನಮಸ್ಕಾರ ಅದ್ಭುತವಾದ ಸಾಹಿತ್ಯ ರಚನೆ ತುಂಬು ಹೃದಯದ ಧನ್ಯವಾದಗಳು
@shashikalanaik3964
@shashikalanaik3964 5 месяцев назад
Happy
@sarojasrinivas9090
@sarojasrinivas9090 5 месяцев назад
❤🎉Ramaa Ramaa Ramaa❤No words further.Thank you ❤🎉
@geetabkkalaburgiputanigalu6577
ಲೌಕಿಕದಿಂದ ಅಲೌಕಿಕದ ಕಡೆಗೆ ಕರೆದೊಯ್ಯುವ ಅದ್ಭುತ ಹಾಡು
@anusuyabai3317
@anusuyabai3317 2 года назад
e bhakti hadu prati dina maluguva muna ondu sari keledera manasege tumba shanti seguthade prati nitya keluteni
@savithribl7247
@savithribl7247 5 месяцев назад
ದಿನಾಲೂ.ರಾತ್ರಿ ಮಲಗುವ.ಮುನ್ನ ಈಹಾಡು ಕೇಳಿ. ದೈಯ.ತಂದುಕೂಂಡಿದೆನೆ.ಜೈಶ್ರೀರಾಮ
@sureshanp570
@sureshanp570 5 месяцев назад
9
@roopaaradhya514
@roopaaradhya514 2 года назад
ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತು. ಹೃದಯ ಸ್ಪರ್ಶಿ ಹಾಡು. ರಾಮಾಯಣದ ಬಹುತೇಕ ಪಾತ್ರಗಳನ್ನು ಮತ್ತು ಅವರ ರಾಮನ ಜೊತೆಗಿನ ಭಾವಗಳು ಸುಂದರವಾಗಿ ಮೂಡಿವೆ. ಹರ್ಷ ಅವರ ಧ್ವನಿ ಕೂಡ ಅದಕ್ಕೆ ಇನ್ನಷ್ಟು ಮೆರಗು ಕೊಟ್ಟಿದೆ. 🙏🙏🙏
@kusumaks2633
@kusumaks2633 Год назад
harsha ಅವರ ಸರ್ವೆ ಪ್ರತಿ ಒಂದು Hadigu ಎಷ್ಟೋ.meragu.koduthae.ಎಂಡಿ.ಹೇಳಲು asadya
@kusumaks2633
@kusumaks2633 Год назад
harshadhwani7avarzukha bavavae ಹೃದಯ sapthistufe oh.ಅವರ .
@kusumaks2633
@kusumaks2633 Год назад
ಧ್ವನಿಯನ್ನು.avaruseara.horahommuthodagalae adeshtoo.hrudya.sprhisitae harshadhwaniyannuadara ಅವರು.ಅವರ ಸಿಹಿ dukk6ananda ಸಂತೋಷ hadi.ಮುಗಿಯುವ ವಿರಹ da ನೋವು ಆಡನ್ನು.ಅನುಭವಿಸಿ davarigae ಗೊತ್ತು ahrudya3da ನೋವು enu ಅಂತ.ಆ.novinallu harshadhwaniya ಸಿಹಿ yada ಸವಿಯಾದ.ನೋವು. ಸಹ.hrudya ಸ್ಪರ್ಶ 6situae
@kusumaks2633
@kusumaks2633 Год назад
you.listen.to.his.manaswani shambo ಶಿವಮೊಗ್ಗ.shambo ಶಿವಮೊಗ್ಗ.ತಂಡದ.stotra there.re.ನabanduant.
@kusumaks2633
@kusumaks2633 Год назад
ಆ.ದೇವರು ಅವರ fans.ಗಲ್ಲ ಐದು avarigae kottu.kapadali
@pushparaviravindra8901
@pushparaviravindra8901 5 месяцев назад
ಮನಸ್ಸಿಗೆ ತುಂಬಾ ನೆಮ್ಮದಿ ಕೊಡುವ ಹಾಡು
@radhag3149
@radhag3149 2 года назад
ಅದ್ಭುತ ಗಾಯಕ ನೀವು ನಿಮ್ಮ ಅಭಿಮಾನಿ ನಾನು
@JAYAPRAKASHA100
@JAYAPRAKASHA100 5 месяцев назад
ಅದುತ
@seshagiriprabhakararao3313
@seshagiriprabhakararao3313 4 года назад
ಬಹಳ ಅದ್ಬುತವಾಗಿ ಸಂಯೋಜನೆ ಮಾಡಿ ಪ್ರಸ್ತುತ ಪಡಿಸಿರುವ ಈ ಹಾಡು ಬಹಳ ಸೊಗಸಾಗಿ,ಸರಳವಾಗಿ, ಸುಲಲಿತವಾಗಿ ಮೂಡಿ ಬಂದಿದೆ ದೈವಾನುಗ್ರಹ. ಪ್ರಸ್ತುತ ಪಡಿಸಿದ ಸಕಲರಿಗೂ ಅಭಿನಂದನೆಗಳು. ತಮ್ಮೆಲ್ಲರಿಗೂ ಆ ಪರಮಾತ್ಮ ಆಯುರಾರೋಗ್ಯ ಐಶ್ವರ್ಯಾದಿಗಳನ್ನು ಕೊಟ್ಟು ಹರಸಲಿ. ಪ್ರಭಾಕರ್
@HarshaDhwaniShreeHarsha
@HarshaDhwaniShreeHarsha 3 года назад
NImma abhimaanakke dhanyavadagalu
@sharadamosale9180
@sharadamosale9180 2 года назад
8 7for 6
@jagadambabasavataju9556
@jagadambabasavataju9556 2 года назад
Superthis Song
@dhanalakshmikumaresan8211
@dhanalakshmikumaresan8211 2 года назад
@@jagadambabasavataju9556 c, cd
@kusumaks2633
@kusumaks2633 2 года назад
Heeding ರಾಮಾಯಣ vae kanna mundae nodidashtu anubhavaaagutae kemppaegowarae ashtu adbutha vagi hadidera navaluru dhanyradevu harsha dhwani keli
@suchethagirish8303
@suchethagirish8303 5 месяцев назад
ಭಕ್ತಿ ಭಾವ ತುಂಬಿದ ಹಾಡು 🎉🎉
@sudhasubbaiahkrishnaveni377
ಸ ರಿ ಗ ಮ ಪ ಶೋಗೆ ಬಂದಾಗಿನಿಂದ ನಾನು ನಿಮ್ಮ ಅಭಿಮಾನಿ ಆಗಿದ್ದೇನೆ. ಒಂದು ಶೋ ಕೂಡ ಮಿಸ್ ಮಾಡದೆ ನಿಮ್ಮ ಪ್ರೋಗ್ರಾಂ ನೋಡುತ್ತೇನೆ. ಸರಸ್ವತಿಯ ಪೂರ್ಣ ಆಶೀರ್ವಾದ ನಿನ್ನ ಮೇಲಿರಲಿ. ಈ ಹಾಡು ಕೇಳುತ್ತಾ ನಾನೇ ಕಳೆದು ಹೋಗಿ ಬಿಟ್ಟೆ ಇನ್ನಷ್ಟು ಹಾಡುಗಳು ನಿನ್ನ ಕಂಠ ದಿಂದ ಬರಲಿ.
@user-xt7vj9he7n
@user-xt7vj9he7n 3 месяца назад
Fine
@raghuacharya5274
@raghuacharya5274 2 года назад
ನಿಮ್ಮ ಕಂಠದಲ್ಲಿ ಕೇಳಿದ ರಾಮನಾಮ ಇನ್ನಷ್ಟು ಕೇಳಬೆಕಿನುಸತೇ. 🙏🙏
@aravindas7080
@aravindas7080 Год назад
Na.askara
@padmalathajn9619
@padmalathajn9619 4 месяца назад
ಅರ್ಥ ಗರ್ಭಿತ ಹಾಡು ಜೀವನದ ಗುರಿ ಇ ಹಾಡು.ಭಗವಂತ ನೀಡಿರುವ ನಿಮ್ಮ ಕಂಠ ಸಿರಿ ಕೇಳುವರಿಗೆ ನೆಮ್ಮದಿ ತೃಪ್ತಿ ನೀಡಿದೆ 👍👍🙏🏿🙏🏿🙏🏿🙏🏿🙏🏿
@ambikahegde3918
@ambikahegde3918 2 года назад
ನನ್ನ "ಹರಣಕೆ" ನಿನ್ನ ಚರಣ ಕೊಡೊ ರಾಮ, ಮರಣಕೆ ಅಲ್ಲ.. ನಾನು, ನನ್ನದು ಎಂಬ ಅಹಂ ಭಾವದ ಹರಣಕೆ ಅನ್ನೋ ಅರ್ಥ... ಹರೇ ರಾಮ🙏🏼
@akshayanni4239
@akshayanni4239 2 года назад
🙏🚩🚩🚩🚩
@srsrinath
@srsrinath 2 года назад
Seems to be correct. Please see below: ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ರಾಮ ರಾಮ ರಾಮ ರಾಮ ನೀನಿಷ್ಟದಂತೆನ್ನ ಇಟ್ಟಿರುವೆ ರಾಮ ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ ರಘುರಾಮ ರಘುರಾಮ ರಘುರಾಮ ರಾಮ ರಘುರಾಮ ರಘುರಾಮ ರಘುರಾಮ ರಾಮ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ರಾಮ ರಾಮ ರಾಮ ರಾಮ ಒಳಿತಿನೆಡೆ ಮುನ್ನೆಡೆವ ಮನವ ಕೊಡು ರಾಮ ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ ನಾಳೆಗಳು ಪುಣ್ಯಗಳ ಹದಿಯಾಗಲಿ ರಾಮ ನನ್ನ ಬಳಿಗೆ ನಿನ್ನ ಹಸಿವ ಕೊಡು ರಾಮ ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ ಕಣ್ಣು ಕಳೆದರು ನಿನ್ನ ಕನಸ ಕೊಡು ರಾಮ ನನ್ನ ಹರಣಕೆ ನಿನ್ನ ಚರಣ ಕೊಡು ರಾಮ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ರಾಮ ರಾಮ ರಾಮ ರಾಮ ಕೌಸಲ್ಯೆಯಾಗುವೆನು ಮಡಿಲಿಲಿರು ರಾಮ ವೈದೇಹಿಯಾಗುವೆನು ಒಡನಾಡು ರಾಮ ಪಾದುಕೆಯ ತಲೆಯಲಿಇಡು ಭರತನಾಗುವೆ ರಾಮ ಸಹವಾಸ ಕೊಡು ನಾನು ಸೌಮಿತ್ರಿ ರಾಮ ಸುಗ್ರೀವನಾಗುವೆನು ಸ್ನೇಹ ಕೊಡು ರಾಮ ಹನುಮನಾಗುವೆ ನಿನ್ನ ಸೇವೆ ಕೊಡು ರಾಮ ಹನುಮನಾಗುವೆ ನಿನ್ನ ಸೇವೆ ಕೊಡು ರಾಮ ಶಬರಿಯಾಗುವೆ ನಿನ್ನ ಭಾವ ಕೊಡು ರಾಮ ರಘುರಾಮ ರಘುರಾಮ ರಘುರಾಮ ರಾಮ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ರಾಮ ರಾಮ ರಾಮ ರಾಮ ಋತ ನೀನೆ ಋತು ನೀನೆ ಶೃತಿ ನೀನೆ ರಾಮ ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ ಪೂರ್ಣ ನೀ ಪ್ರಕಟ ನೀ ಆನಂದ ರಾಮ ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ ಗುರಿ ನೀನೆ ಗುರು ನೀನೆ ಅರಿವು ನೀ ರಾಮ ಗುರಿ ನೀನೆ ಗುರು ನೀನೆ ಅರಿವು ನೀ ರಾಮ ರಘುರಾಮ ರಘುರಾಮ ರಘುರಾಮ ರಾಮ ನಗುರಾಮ ನಗರಾಮ ಜಗರಾಮ ರಾಮ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ರಾಮ ರಾಮ ರಾಮ ರಾಮ
@vasanthamanju1964
@vasanthamanju1964 2 года назад
@@srsrinath thank you sir
@sharadammakm8694
@sharadammakm8694 2 года назад
🙏🙏🙏🙏🙏
@ashapoojary9991
@ashapoojary9991 2 года назад
Super sir
@Akshaykumar090
@Akshaykumar090 2 года назад
ಎಷ್ಟು ಅದ್ಭುತವಾಗಿ ಹಾಡಿರುವಿರಿ ಹರ್ಷ , ಮತ್ತೆಮತ್ತೆ ಕೇಳುತ್ತಲೇ ಇರುವೆವು. ಇನ್ನು ಹೆಚ್ಚು ಮನ ಮುಟ್ಟುವ ಭಕ್ತಿ ಮತ್ತು ಭಾವಗೀತೆಗಳ 🅤🅟🅛🅞🅐🅓 ಮಾಡಿ .. ಧನ್ಯವಾದಗಳು
@sudhashivanna2296
@sudhashivanna2296 Год назад
Supper
@bobbupatgar6706
@bobbupatgar6706 4 месяца назад
ಈ ಹಾಡು ಕೇಳಿದರೆ,ಶ್ರೀರಾಮನೆ ಹೃದಯದೋಳಗೆ ನಲಿಯುತ್ತಿರುವಂತೆ ಬಾಷವಾಗುತ್ತದೆ.ಜೈ,ಜೈ, ಶ್ರೀರಾಮ್.
@umabhat3103
@umabhat3103 5 месяцев назад
ನಾನು ನಿಮ್ಮ ಅಭಿಮಾನಿ, ಇಷ್ಟೊಂದು ಭಾವುಕವಾಗಿ ಮತ್ತು ಸುಂದರವಾಗಿ ಇದನ್ನು ಬೇರೆ ಯಾರೂ ಹಾಡಲು ಸಾಧ್ಯವಿಲ್ಲವೆಂದೇ ನನ್ನ ಅನಿಸಿಕೆ. ನಿಮಗೆ ಒಳ್ಳೆಯದಾಗಲಿ, ನಿಮ್ಮಹರ್ಷಧ್ವನಿಯ ಪಯಣ ನಿರಂತರವಾಗಿ ಸಾಗುತ್ತಿರಲಿ.ಈ ಹಾಡು ಕೇಳಿದಮೇಲೆ ನನಗೊಂದು ಆಸೆ, ನಾನು ರಾಮನ ಕೆಲವು ಹಾಡುಗಳನ್ನು ಬರೆದಿದ್ದೇನೆ. ಅವುಗಳೆಲ್ಲ ಈ ಹಾಡಿನ ಮುಂದೆ ಸೂರ್ಯನ ಮುಂದೆ ಹಣತೆಗಳಿಗೂ ಸಮನಲ್ಲ. ಆದರೂ ನೀವು ಒಂದಾದರೂ ನನ್ನ ಹಾಡನ್ನು ಹಾಡಿದರೆ ಈ ನಂದುತ್ತಿರುವ ದೀಪಕ್ಕೆ ಸ್ವಲ್ಪ ಎಣ್ಣೆ ಹಾಕಿದಂತಾಗುತ್ತಿತ್ತೇನೋ.
@ramaprakash668
@ramaprakash668 2 месяца назад
ಎಂಥ ದಿವ್ಯ ಗಾಯನ, ಅದ್ಭುತವಾದ ರಚನೆಗೆ ಅಷ್ಟೇ ಸುಂದರವಾದ ರಾಗ ಸಂಯೋಜನೆ. 🙏🙏🙏
@sarojag7218
@sarojag7218 5 месяцев назад
Ramaa ,🙏Ramaa🙏🤲Ramaa🤲🙏🌹🌹🤲🙏
@sridevisuresh8083
@sridevisuresh8083 5 месяцев назад
Tears rolls every time I hear this song. 👃
@shalinishalu1796
@shalinishalu1796 Год назад
ನನ್ ಮಗ ಈ ಹಾಡು ಕೇಳಿದ್ರೆ ಅಷ್ಟೇ ಮಲಗೋದು ತುಂಬಾ ಚೆನ್ನಾಗಿ ಹಾಡಿದ್ದೀರ ಸರ್ ❤️
@ankithaanu9951
@ankithaanu9951 Год назад
Same ri nan magu ge 8 months ega etre ne nidde hogthane
@ganeshat1727
@ganeshat1727 Год назад
Nan magu nu aste ri
@janardhanhavale4244
@janardhanhavale4244 5 месяцев назад
Mindbloving sog&singar
@krupamanjunath3434
@krupamanjunath3434 3 года назад
ಸೊಗಸಾದ,ಅದ್ಭುತವಾದ ಗೀತೆಗೆ ರಾಮಾರ್ಪಿತವಾದ ಗಾಯನ.... ರಾಮಾಂತರ್ಗತ 'ಹರ್ಷಧ್ವನಿ'ಗೆ ನಮ್ಮ ನಮನ.. 👏👏👏👏👏👌👌👌👌👌😊👍🙏
@HarshaDhwaniShreeHarsha
@HarshaDhwaniShreeHarsha 2 года назад
ಧನ್ಯವಾದಗಳು
@ushaakamath9616
@ushaakamath9616 2 года назад
Very nice Rama song.
@vittalpujar8448
@vittalpujar8448 2 года назад
Very nice. Sulte for harash dwani
@vedavatiad5613
@vedavatiad5613 2 года назад
@@vittalpujar8448 ಹಾಗೂ ನೀ ಎನ್ನ
@sukanyaitigatti6829
@sukanyaitigatti6829 2 года назад
@@HarshaDhwaniShreeHarsha 🙏🏽🙏🏽
@indarakumarbhadravathi548
@indarakumarbhadravathi548 3 года назад
ಪ್ರತಿ ಶಬ್ದ ಮನಸ್ಸು ಮುದಗೊಳಿಸಿತು,,,, ಹರ್ಷ ರವರ ಕಂಠಕ್ಕೆ ಅನೇಕ ಅನೇಕ ಧನ್ಯವಾದಗಳು
@HarshaDhwaniShreeHarsha
@HarshaDhwaniShreeHarsha 3 года назад
ಧನ್ಯವಾದಗಳು
@vimalagopalakrishna4877
@vimalagopalakrishna4877 2 года назад
. ತುಂಬ ಸರಳವಾಗಿ ಸುಂದರವಾಗಿ ಇದೆ ಸಂತೊಷವಾಇತು
@shanthakadri1907
@shanthakadri1907 2 года назад
Very sweet voice
@venugopalt.a.5799
@venugopalt.a.5799 5 месяцев назад
ಅಧ್ಬುತ ಶಾರೀರ ಪರಮಾನಂದವಾಯಿತು ದೇವರು ನಿನಗೆ ಒಳ್ಳೆಯದು ಮಾಡಲಿ🎉
@prabhakarakudumallige1706
@prabhakarakudumallige1706 4 месяца назад
ಉತ್ತಮ ಸಾಹಿತ್ಯ ಹಾಗೂ ಉತ್ತಮ ಧ್ವನಿ ಇದಕ್ಕೆ ನನ್ನ ಪ್ರಣಾಮಗಳು. ಇಂತಹ ಹಾಡು ಕೀರ್ತನೆಗಳು ನಿಮ್ಮಿಂದ ಮೂಡಿ ಬರಲಿ.❤
@savitharamesh3966
@savitharamesh3966 3 года назад
ಸೂಪರ್..ಭಕ್ತಿ ತುಂಬಿದ.. ಗಾಯನ....ದೇವರು ಒಳ್ಳೆಯದು ಮಾಡಲಿ....
@HarshaDhwaniShreeHarsha
@HarshaDhwaniShreeHarsha 3 года назад
ಧನ್ಯವಾದಗಳು
@chaitrashet963
@chaitrashet963 2 года назад
I got goosebumps when you sung the line- ನನ್ನೊಳಿಹ ರಾವಣಗೆ ಸಾವ ಕೊಡೊ ರಾಮ! Your singing has it's own divinity ❤️😇🙏🤗
@chinmayi.h.d.7630
@chinmayi.h.d.7630 2 года назад
Super voice
@gauravbansaledu
@gauravbansaledu 5 месяцев назад
dandavata prnama sir, what a voice, i can't fully understand and yet can feel the whole, also brings tears to my eyes
@sampathkumarbhattacharya7190
@sampathkumarbhattacharya7190 4 месяца назад
ಹಾಡು ಹೃದಯ ಸ್ಪರ್ಶಿಯಾಗಿದೆ. ಜೈ ಶ್ರೀ ರಾಮ್.
@srikanthkakolusudhindra8865
@srikanthkakolusudhindra8865 3 года назад
My tears are rolling over...such a fantastic composition and an enchanting singing...we r blessed ...thank you so much🙏
@HarshaDhwaniShreeHarsha
@HarshaDhwaniShreeHarsha 3 года назад
Thnq so much
@sridharaks4597
@sridharaks4597 3 года назад
@@HarshaDhwaniShreeHarsha super
@amareshmahadevappa575
@amareshmahadevappa575 3 года назад
Such a Superb composition n melodious voice ... Thank you Sirji
@punyahg3334
@punyahg3334 3 года назад
0000000000000000000000000000000000
@sumithrar4112
@sumithrar4112 2 года назад
In
@srivatsahegde1990
@srivatsahegde1990 5 месяцев назад
Best meaningful song i ever heard❤❤❤❤❤❤❤❤
@rajanisbabu1842
@rajanisbabu1842 2 года назад
ಬಹಳ ಬಹಳ ಸೊಗಸಾಗಿ ಹಾಡಿದ್ದೀರ ಕೇಳಿ ಮನಸ್ಸು ಹೃದಯ ತುಂಬಿ ಬಂತು ಶ್ರೀರಾಮನು ನಿಮಗೂ ನಿಮ್ಮ ಕುಟುಂಬದವರಿಗೂ ಒಳ್ಳೆಯದು ಮಾಡಲಿ🙏🙏💐
@SanjayNairUK
@SanjayNairUK Год назад
My soul melts at the feet 👣of my Lord Rama when i listens to this song
@jyoti.r2983
@jyoti.r2983 2 года назад
What a song and what a voice my tears started rolling down my heart filled with full emotion and full of energy.
@manjula1054
@manjula1054 Год назад
ನಿಮ್ಮ Voice ನಮ್ಮ ಮನೇಲಿ ಎಲ್ಲರಿಗೂ ತುಂಬಾ ಇಷ್ಟಾ ಹರ್ಷ Bro ❤️❤️
@shylaharsha908
@shylaharsha908 2 года назад
ಅಬ್ಬ ಕಣ್ತುಂಬಿ ಬಂತು.... ರಚನೆ ಅಂತೂ ಅದ್ಭುತ ... ಜೊತೆಗೆ ಆ ಹಾಡಿಗೆ ಭಕ್ತಿ ಪ್ರೀತಿ ಮಮತೆ ಎಲ್ಲಾ ತುಂಬಿ ಹಾಡಿದ್ದೀರ..... ತುಂಬಾ ಚೆನ್ನಾಗಿದೆ ..... ಕರ್ನಾಟಕದ ಹೆಮ್ಮೆ ನೀವು ಸರಿಗಮ ಪನಲ್ಲಿ ನೀವು ಹಾಡುವ ಹಾಡು ತುಂಬಾ ಇಷ್ಟ... god bless you Harsha .....
@manushankar6436
@manushankar6436 Год назад
ಶ್ರೀ ರಾಮನ ನಾಮಸ್ಮರಣೆಯಿಂದ ಮನಸ್ಸಿಗೆ ಆರಾಮವಾಯಿತು. ಅದ್ಭುತವಾದ ಗಾಯನ
@srinidhijois4456
@srinidhijois4456 4 года назад
ಧನ್ಯವಾದಗಳು ಹರ್ಷ ಅದ್ಭುತ ಹಾಡುಗಾರಿಕೆ. ದೈವತ್ವದಲ್ಲಿ ಮನ ತೇಲಿತು.
@HarshaDhwaniShreeHarsha
@HarshaDhwaniShreeHarsha 3 года назад
Dhanyavadagalu
@jayannakunchur7755
@jayannakunchur7755 2 года назад
@@HarshaDhwaniShreeHarsha ನೀವು ‌ಹಾಡಿದ ಈ ಹಾಡಿನಲ್ಲಿ ಅಡಗಿರುವ ಅರ್ಥಗರ್ಭಿತವಾದ ನುಡಿಮುತ್ತುಗಳನ್ನು ಮನದಟ್ಟುವಂತ ನಿಮ್ಮ ಧ್ವನಿಗೆ ಕೇಳಿ ಆ ದೈವದ ದರ್ಶನದ ಅನುಭವಿಸುವ ನಾವೇ ಧನ್ಯ ಧನ್ಯ ಧನ್ಯ ಧನ್ಯ ಧನ್ಯ ನಮಗೆ ನೀವು ಉಣಬಡಿಸಿದ ಈ ಸಂಗೀತಕ್ಕೆ ಕೋಟಿ ಕೋಟಿ ನಮನಗಳು 🙏🙏🙏🙏🙏🙏🙏🙏🙏🙏🙏
@veenabsannakki710
@veenabsannakki710 2 года назад
👌👌voice 🌹🌹
@malathimaiya925
@malathimaiya925 3 года назад
ನನಗೆ ಈ ಹಾಡು ತುಂಬಾ ಇಷ್ಟ ..... ಎಷ್ಟೋ ಮಂದಿ ಹಾಡಿದ್ದನ್ನು ಕೇಳಿದ್ದೇನೆ .... ನೀವು ಹಾಡಿದ್ದು ಎಲ್ಲಾದಕ್ಕೂ ಕಿರೀಟ ಪ್ರಾಯವಾಗಿದೆ...
@HarshaDhwaniShreeHarsha
@HarshaDhwaniShreeHarsha 3 года назад
ಧನ್ಯವಾದಗಳು
@prakashb.g.9171
@prakashb.g.9171 5 месяцев назад
ಮನಸ್ಸಿಗೆ ತಂಪು ನೀಡುವ ಈ ಹಾಡು 🙏🙏🙏🙏🙏🙏🙏🙏🙏
@mamtharanin7632
@mamtharanin7632 5 месяцев назад
Sir , your voice is so nice and singing is very excellent. ❤❤❤❤
@ss-wc8fo
@ss-wc8fo 2 года назад
ತುಂಬಾ ಸೊಗಸಾಗಿ ಮೂಡಿಬಂದಿದೆ ನಿಮ್ಮ ಹಾಡು ಕೇಳುತ್ತಿದ್ದರೆ ಇನ್ನು ಕೇಳಬೇಕು ಎನ್ನುವ ನಿಮ್ಮ ಧ್ವನಿ ಜೈಶ್ರೀರಾಮ್ 👌👌🙏🙏
@sudharani8201
@sudharani8201 2 года назад
fine
@kavithahegde5079
@kavithahegde5079 2 года назад
1
@sitas8357
@sitas8357 2 года назад
P
@ushalokanath1661
@ushalokanath1661 2 года назад
@@sudharani8201 pjuuyuyjmmm
@bvishwanath2886
@bvishwanath2886 3 года назад
ತುಂಬಾ ಹೃದಯ ಸ್ಪರ್ಶಿ ಹಾಡು, ನೀವಿನ್ನೂ ಎತ್ತರಕ್ಕೆ ಬೆಳೆಯಿರಿ.
@HarshaDhwaniShreeHarsha
@HarshaDhwaniShreeHarsha 3 года назад
ಧನ್ಯವಾದಗಳು
@vimalambasrinivas329
@vimalambasrinivas329 2 года назад
@@HarshaDhwaniShreeHarsha ಫಯ
@sridharjetty4142
@sridharjetty4142 13 дней назад
ತುಂಬಾ ಚನ್ನಾಗಿದೇ ರಾತ್ರಿ ಮಲಗುವ ಮುನ್ನ ಈ ಹಾಡನು ಕೇಳಿ ಮಲಗಿ ಮನಸು ಶಾಂತಿಯಗಿರುತೇ
@pspace...1084
@pspace...1084 7 месяцев назад
I am from Maharashtra.I can't understand the language but I can feel the feelings of singer and his devotion to LORD RAMA. Excellent voice 👍.
@manatg3521
@manatg3521 6 месяцев назад
Harsha sir nimma voice ge fan aagiddini sir Exellent
@manatg3521
@manatg3521 6 месяцев назад
Harsha sir nimma voice ge fan aagiddini sir Exellent
@FirstLast-vr5gh
@FirstLast-vr5gh 5 месяцев назад
The lyrics is in the description. If you want you can get it translated with the help of an app
@madhukumarMaddy
@madhukumarMaddy 3 года назад
Got goosebumps while listening "nannaliro ravanage saava kodo rama" line, mind blowing voice!,
@HarshaDhwaniShreeHarsha
@HarshaDhwaniShreeHarsha 3 года назад
Thnq so much
@user-jf3ob7xq6f
@user-jf3ob7xq6f 2 года назад
Same here got emotional....god ur voice is magic 🙏🙏I heard dis song mant times but today I could just connect frm heart..
@HarshaDhwaniShreeHarsha
@HarshaDhwaniShreeHarsha 2 года назад
Thnq Shwetha avre
@visitus2130
@visitus2130 2 года назад
Nice
@deepas4917
@deepas4917 2 года назад
Yes it is so true even i get goosebumps while listening to this beautiful music and song and that gentel voice is so good💯👍🏻
@MuralikrishnaBR
@MuralikrishnaBR 4 года назад
The best version of ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ out there < 3
@HarshaDhwaniShreeHarsha
@HarshaDhwaniShreeHarsha 3 года назад
Thnq so much - HarshaDhwani
@saraswathi.msarasa7380
@saraswathi.msarasa7380 2 года назад
ತುಂಬಾ ಚನ್ನಾಗಿ ಇದೆ ಈ ಹಾಡು 🙏❤👏
@2ramitth903
@2ramitth903 5 месяцев назад
ಬಹಳ ಅದ್ಭುತ ಕಂಠ ಅತ್ಯುತ್ತಮವಾಗಿ ಹಾಡಿ ನಮ್ಮ ಜೀವನ ಪಾವನಗೊಳಿಸಿದ್ದೀರಿ ತಮಗೆ ತುಂಬಾ ಧನ್ಯವಾದಗಳು
@sukanyashantharam3202
@sukanyashantharam3202 Год назад
A very devine voice to hear Sri Ram Jai Ram
@raghavendrabhadri4748
@raghavendrabhadri4748 3 года назад
Lyrics is super in our times like Dasar padagalu or Hadugalu.congratulations and thanks to Lyricist.He takes us to SRI RAMA straight for a moment. SRI RAMA Bless him.
@HarshaDhwaniShreeHarsha
@HarshaDhwaniShreeHarsha 3 года назад
Thnq so much - HarshaDhwani
@rakeshchaurasiya533
@rakeshchaurasiya533 11 месяцев назад
​@@HarshaDhwaniShreeHarshafull sport from ayodhya jay shree Ram
@saraswathis4701
@saraswathis4701 3 года назад
Very melodious singing. I am a very sick person but feel very happy listening to your singing. God bless you my son.
@umadevig5907
@umadevig5907 3 года назад
Uthhama gaayana harsha
@HarshaDhwaniShreeHarsha
@HarshaDhwaniShreeHarsha 3 года назад
Thnq...wish you a speedy recovery and the blessings of Lord Rama
@sandhyavh5135
@sandhyavh5135 5 месяцев назад
Veryyyyyyy unique amazing blissful voice thank you soooooo much ❤🎉❤🎉❤🎉❤
@vasanthamanju1964
@vasanthamanju1964 2 года назад
ಹರ್ಷ' ಅಂತರಂಗದ ಭಾವವೆಲ್ಲಾ ಒಮ್ಮೆಲೆ ರಾಮ ಧ್ಯಾನದಲ್ಲಿ ಪರವಶಗೊಂಡಿತು'. ವಂದನೆಗಳು.
@sowmyasri8109
@sowmyasri8109 3 года назад
My tears are rolling over......we are blessed thank you so much 🙏🙏🙏
@shamalanagaraja6889
@shamalanagaraja6889 2 года назад
What a melancholy. Such a beautiful,splendid voice. Meaningful song. Thank you so much. God bless you.
@prashanthkrishnappa3625
@prashanthkrishnappa3625 2 года назад
🙏
@302shivaleelagorawarg6
@302shivaleelagorawarg6 2 года назад
Sir it was awesome ❤️i am big fan of u....and Rama is my heartbeat ....he is my everything...I am addicted to this song and ur voice👌
@terracegardenrecipe
@terracegardenrecipe 2 года назад
ದಿನಾಲೂ ರಾತ್ರಿ ಮಲಗುವ ಮುನ್ನ ಈಹಾಡು ಕೇಳಿ ದೈರ್ಯ ತಂದುಕೂಂಡಿದ್ದೆನೆ👏
@ramachandramkgowda2601
@ramachandramkgowda2601 6 месяцев назад
Ade nigooda Shakthi . Hesaru. Bhagavantha.
@sandeeppoojary5974
@sandeeppoojary5974 5 месяцев назад
Thumba kushi aguthe alwa
@nagendraks5229
@nagendraks5229 5 месяцев назад
ಜೈ ಶ್ರೀ ರಾಮ್
@malathys1454
@malathys1454 5 месяцев назад
Naanu hage madtini
@balaclk7736
@balaclk7736 5 месяцев назад
Jai ಶ್ರೀ ರಾಮ
@geethahr6981
@geethahr6981 2 месяца назад
ಮೈ ಮರೆಸುವ ಹೃದಯ ತುಂಬಿ ಕಂಣ್ತುಂಬಿ ಬರುತ್ತೆ
@mryashuu
@mryashuu 2 года назад
Heard this song today, and I'm cursing myself for not hearing this before.. Soothing and mind relaxing.. Respect on you has increased 1000 times.. 🙏🙏🙏🙏
@shanthashenoy5192
@shanthashenoy5192 5 месяцев назад
🙏🙏 ಸೇವೆ ಕೊಡು ರಾಮ, ಶ್ರೀ ರಾಮಾ ಜಯ ರಾಮ 🙏🙏
@raghunatharao5215
@raghunatharao5215 3 года назад
Great rendition by Sri Harsha and one of the master piece by dear friend Gajanana Sharma. Keep going. Col Raghunath Rao (Retd)
@HarshaDhwaniShreeHarsha
@HarshaDhwaniShreeHarsha 3 года назад
Thnq so much sir
@dornalswarnamba7991
@dornalswarnamba7991 Месяц назад
ಸಾಹಿತ್ಯವೂ ಸುಂದರ ಹಾಡಿರುವುದುಬಹು ಮದುರ
@rockingsantu3081
@rockingsantu3081 2 года назад
ಹರ್ಷೋಧ್ವನಿಗೆ ನನ್ನದೊಂದು ನಮಸ್ಕಾರ 🙏🏼👌😍
@kvrhari
@kvrhari 2 года назад
ನನಗರಿಯದೇ ಕಣ್ತುಂಬಿತು. ಅತ್ಯಾಪ್ತ ವಾಗಿ ಹಾಡಿದ್ದೀರಿ. ಇನ್ನಷ್ಟು ದೇವರ ನಾಮಗಳು ಧ್ವನಿಸಲಿ 🙏
@sowmyaca8898
@sowmyaca8898 2 года назад
Wow amazing 🙏🙏🙏My God what a rendition...direct touch aguthe ...goosebumps baruthe .. ur so blessed to have such a wounderful voice👌👌👌👌
@dakshavasisht9732
@dakshavasisht9732 2 года назад
Beautiful lyrics.. Harsha amazing singing. Treat to the ears. Tears in my eyes..
@mohantiptur6671
@mohantiptur6671 2 года назад
🙏 ಈ ಸುಮಧುರವಾದ ಗೀತೆಯನ್ನು ಕೇಳ್ತಾ ಕೇಳ್ತಾ ಬೇರೆ ಲೋಕ್ಕೆಕೆ ಕರೆದುಕೊಂಡು ಹೊಗ್ಬೀರ್ಟೀ 👌
@shilpaarun2746
@shilpaarun2746 Год назад
Peaceful voice n song 👏👏
@ashans5947
@ashans5947 5 месяцев назад
Jai Sri Ram🙏🙏🙏
@sharadachowdappa6308
@sharadachowdappa6308 5 месяцев назад
Jai Sriram Jai hanuman 🙏🏾🕉️🌹
@hegdechinmayi
@hegdechinmayi Год назад
ಗುರು ನೀನೇ.. ಗುರಿ ನೀನೇ... ಅರಿವು ನೀನೇ ರಾಮ...ಅದೆಂದೆಂದೂ ಕೇಳದ ಅದ್ಭುತ ಹಾಡು... ನಾನು ನಿಮ್ಮ ಅಭಿಮಾನಿ.. ನಿಮಗೆ ನನ್ನ ನಮನಗಳು ಹರ್ಷ ಸರ್🙏🙏
@rameshsiddappa7768
@rameshsiddappa7768 3 года назад
Harsha Sir, excellent voice... I love your voice Sir🙏🙏 God may bless you... Keep singing Sir🙏🙏
@HarshaDhwaniShreeHarsha
@HarshaDhwaniShreeHarsha 3 года назад
Thnq so much
@mamathachirag7546
@mamathachirag7546 2 года назад
super singing harsha....
Далее
Задержали в аэропорту
00:56
Просмотров 402 тыс.
Gajendra Moksha | Sri Vadirajaru
16:27
Просмотров 2,9 млн
JANAGA - Интервью (Official Music Video)
2:38
Просмотров 230 тыс.
БОЛЬШЕ НЕ ВАЦОК
1:43
Просмотров 1,3 млн
Ozoda - JAVOHIR ( Official Music Video )
6:37
Просмотров 6 млн
SLAY (Slowed + Reverb) - Eternxlkz
2:15
Просмотров 585 тыс.