ಹೊಸನಗರ, ಶ್ರೀರಾಮಚಂದ್ರಾಪುರಮಠ ದ ದಿವ್ಯ ಪರಿಸರದಲ್ಲಿ ಜಗದ್ಗುರುಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಜಿಗಳ ದಿವ್ಯಮಾರ್ಗದರ್ಶನದಲ್ಲಿ ಶ್ರೀಭಾರತೀ ಗುರುಕಲಮ್ 1997 ರಲ್ಲಿ ಪ್ರಾರಂಭವಾಯಿತು.
ಗುರುಕುಲದ ಪ್ರತಿ ಮಗುವು ಧರ್ಮಯೋಧನಾಗಿ ಹೊರಹೊಮ್ಮ ಬೇಕೆಂಬ ಶ್ರೀಗಳವರ ಆಶಯಕ್ಕೆ ಪೂರಕವಾಗಿ ಆಧುನಿಕ ಶಿಕ್ಷಣದೊಂದಿಗೆ ಭಾರತೀಯ ಪರಂಪರೆಯನ್ನು ಅರಿತು, ಭೋಧಿಸಿ, ಆಚರಿಸಿ ವಿಸ್ತರಿಸುವುದೇ ಗುರುಕುಲದ ಪರಮೋಧ್ಧೇಶ ಹಾಗೂ ವೈಶಿಷ್ಟ್ಯ.
ಈ ಗುರುಕುಲವನ್ನು ಭಾರತೀಯ ಪರಂಪರೆಯ 64 ವಿದ್ಯೆಗಳನ್ನೊಳಗೊಂಡ ಗುರುಕುಲ ವಿಶ್ವ ವಿದ್ಯಾಲಯವನ್ನಾಗಿಸುವುದು ಶ್ರೀಗಳ ಆಶಯ. ಋಗ್ವೇದ, ಯಜುರ್ವೇದ, ಸಾಮವೇದ, ಕರ್ಮಕಾಂಡ, ಸಂಸ್ಕೃತದ ಜೊತೆಗೆ ಕಂಪ್ಯೂಟರ್ ಹಾಗು ಇಂಗ್ಲೀಷ್ ಶಿಕ್ಷಣದಂತಹ ಆಧುನಿಕ ಪಠ್ಯಕ್ರಮವನ್ನು ಒಳಗೊಂಡ 6 ರಿಂದ 10 ನೇ ತರಗತಿಯ ವರೆಗಿನ ಕಲಿಕಾ ವ್ಯವಸ್ಥೆಯು ಗುರುಕುಲದಲ್ಲಿದೆ.
ಸಂಸ್ಕೃತಿ, ಅಡುಗೆ, ರಂಗೋಲಿ, ಹುಲಿಗೆ, ಕಸೂತಿ, ಹಾಡುಹಸೆ ಮುಂತಾದ ಜೀವನಕಲಿಕೆಯೊಂದಿಗೆ ಕರ್ನಾಟಕ ಸರ್ಕಾರದ ಪಠ್ಯಕ್ರಮವನ್ನು ಅನುಸರಿಸಿ ಆರ್ಹ ವಿದ್ಯಾರ್ಥಿನಿಯರಿಗೆ 6 ರಿಂದ 10ನೇ ತರಗತಿ ಶಿಕ್ಷಣ ನೀಡಲು ಶ್ರೀಮಾತಾ ಎಂಬ ಶಾಖೆ ಗುರುಕುಲದಲ್ಲಿದೆ. ಭರತನಾಟ್ಯ, ಯಕ್ಷಗಾನ, ಕೊಳಲು, ಮೃದಂಗ ಮೊದಲಾದ ಕಲೆಗಳನ್ನು ಆಸಕ್ತ ವಿದ್ಯಾರ್ಥಿಗಳಿಗೆ ಕಲಿಸಿಕೊಡಲೆಂದೇ ಗಾಂಧರ್ವ ಶಾಖೆಯನ್ನು ಗುರುಕಲದಲ್ಲಿ ರೂಪಿಸಲಾಗಿದೆ. ಪ್ರಾಚೀನ ರೀತಿಯಲ್ಲಿ ಶರಾವತಿಯ ಪವಿತ್ರ ತೀರದಲ್ಲಿ ಕುಟೀರ ರೂಪದಲ್ಲಿ ಗುರುಕುಲವನ್ನು ನಿರ್ಮಿಸಲಾಗಿದೆ. ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯಗಳನ್ನು ಒಳಗೊಂಡ ಗುರುಕುಲದಲ್ಲಿ ಉಚಿತ ವಸತಿ ಮತ್ತು ಶಿಕ್ಷಣವನ್ನು ಕೊಡಲಾಗುತ್ತದೆ.
ಇದು ಭಾರತೀಯ ಸಂಸ್ಕೃತಿ ಶಿಕ್ಷಣವೇ ಜೀವಾಳವಾದ ಶ್ರೀಭಾರತೀ ಗುರುಕುಲದ ವಿಸ್ತೃತ ನೋಟ.
ಬನ್ನಿ..ಭಾರತವನ್ನು ವಿಶ್ವಗುರುವಾಗಿಸುವ ವಿಶಿಷ್ಠ ಕಲ್ಪನೆಯ ಗುರುಕುಲವನ್ನು ಬೆಳೆಸೋಣ..ಸಂಸ್ಕೃತಿಯನ್ನು ಉಳಿಸೋಣ.
ಸಂಪರ್ಕ:
ಶ್ರೀ ಭಾರತೀಗುರುಕುಲಮ್
ಶ್ರೀರಾಮಚಂದ್ರಾಪುರಮಠ, ಹನಿಯ, ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ
08185-253616, 08185-256183
Sri Bharathi Gurukulam was started in 1997 under the divine guidance of Jagadguru Shankaracharya Sri Raghaveshwara Bharati Mahaswamiji in the sacred environment of Sri Ramachandrapura Matha, Hosanagar.
The main aim of gurukula system is to include effective understanding, educating and practicing of Indian heritage along with the modern education system to fulfill the desire of Sri Samsthana that every child graduating from gurukula should become a warrior of dharma.
Sri Samsthana intends to make this Gurukula as a university comprising of all 64 arts of Indian culture. In this regard, Rigveda, Yajurveda, Samaveda, Karmakanda, Sanskrit are taught along with the modern subjects like Computer and English as academic curriculum for the classes of 6th to 10th.
Srimatha is a branch of Gurukulam which teaches life-skills like culture, cooking, rangoli, tailoring, embroidery for students of classes 6th to 10th along with the curriculum of Karnataka state education system.Gandharva department is formed to teach interested students the art forms like bharatanatyam, yakshagana, flute, mridangam etc. Gurukula is built on the shores of sacred river Sharavati in the form of a cottage in ancient manner. Free boarding and education along with a well-equipped laboratory and libraries are provided here.
This is an extensive view of Sri Bharathi gurukula whose essence is in teaching Indian culture.
Join hands in preserving our culture by building gurukula system of education. Thus making India a model for the rest of the World.
Contact:
Sri Bharati Gurukulam
Sri Ramachandrapura Matha, Haniya, Hosanagara taluk, Shimoga district
08185-253616, 08185-256183
Join us:
A/C No. 3132500100694501
Karnataka Bank Hosanagara branch
IFSC:KARB0000313
Email:bahaloka@gmail.com
Donations are exempted under 80G Income Tax Act.
Facebook: / shankarapeetham
Twitter: / shankarapeetha
RU-vid: / shankarapeetha
Website: www.srisamsthan...
Blog: hareraama.in
4 окт 2024