Тёмный

Ugrashrava - theme song (kannada) - War mode 

Подписаться
Просмотров 602
% 9

ಪೂರ್ವದಲ್ಲಿ ಹುಟ್ಟುವ ಸೂರ್ಯನು..
ಇರುಳ ಕರಗಿಸಲು ಮರೆವನೆ?
ರಣರಂಗದಲ್ಲಿ ಸೆಣಸುವ ಯೋಧನು..
ಸಾವಿಗೆ ಹೆದರಿ ಹಿಂಬರುವನೆ?
ಶತ್ರುಗಳ ಸಂಖ್ಯೆ ಎಷ್ಟಿದ್ದರೂ..
ವೀರನಿಗೆ ಯುದ್ಧವೂ ಆಟವೇ..
ಕಣ್ಣ ರೋಷಾಗ್ನಿಯೂ ಉರಿಯಲು..
ನೋಟಕೆ ಭಸ್ಮ ಆ ವೈರಿಯು..
ಬಂದರೆ ಕೊಲ್ಲಲು ಸೈನ್ಯವೂ..
ಕಾಯಲು ನಿಂತ ಈ ರುದ್ರನು..
ಉಗ್ರಶ್ರವಾ.. ಉಗ್ರಶ್ರವಾ..
ಎದುರಿಸಲು ನಿಂತನೂ ಕತ್ತಲಾ..
ಉಗ್ರಶ್ರವಾ.. ಉಗ್ರಶ್ರವಾ..
ಹರಿಸಿದ ನದಿಯಾಗಿ ನೆತ್ತರಾ..
ಉಗ್ರಶ್ರವಾ.. ಉಗ್ರಶ್ರವಾ..
ಸಾವಿಗೂ ನಡುಕ ತಂದಿರುವನೂ..
ಉಗ್ರಶ್ರವಾ.. ಉಗ್ರಶ್ರವಾ..
ಯಾರಿಗೂ ಅಂಜದ ಶೂರನೂ..
ಕಾರ್ಮೋಡದ ಅಂಚಿನ ಬೆಳ್ಳಿಯು ನೀ..
ಕಗ್ಗತ್ತಲಲ್ಲಿ ಮಿಂಚುವ ನಕ್ಷತ್ರ ನೀ..
ನೀ ನಡೆವ ದಾರಿಯೇ ಮೈಲಿಗಲ್ಲು..
ಅಂಧಕಾರದಲ್ಲಿರುವ ಜಗಕೆ ಬೆಳಕ ಚೆಲ್ಲು..
ಚಕ್ರವ್ಯೂಹದೊಳಗೆ ನುಗ್ಗಿದ ಅಭಿಮನ್ಯು ನೀನು..
ಆದರೆ ನಿನ್ನ ಸೋಲಿಸಲು ಮೃತ್ಯುವಿಗೆ ಸಾಧ್ಯವೇನು?
ಅರಾಜಕತೆಯ ನೋಡುತಾ ಕೂರುವ ಸಾಮಾನ್ಯನಲ್ಲ..
ಗುರುವಿನ ಮಾತನೆಂದೂ ಮೀರದ ಜಗಮಲ್ಲ..
ಎಂದೂ ಬಯಸಲಿಲ್ಲ ರಾಜ್ಯದ ಪದವಿಯ..
ನಡೆಸಿಕೊಡು ಜನರ ಪ್ರೀತಿಯ ಮನವಿಯ..
ಉಗ್ರಶ್ರವಾ.. ಉಗ್ರಶ್ರವಾ..
ಗೆಲುವೂ ಎಂದೂ ನಿನ್ನದೇ..
ಉಗ್ರಶ್ರವಾ.. ಉಗ್ರಶ್ರವಾ..
ನಿನ್ನೆದುರಿಸುವ ಗಂಡೆದೆ ಎಲ್ಲಿದೆ??
ಉಗ್ರಶ್ರವಾ.. ಉಗ್ರಶ್ರವಾ..
ಜಗವೂ ದಾರಿಯ ಕಾಣದೆ..
ಉಗ್ರಶ್ರವಾ.. ಉಗ್ರಶ್ರವಾ..
ನಿನ್ನ ಸಹಾಯ ಬೇಡಿದೆ..

Развлечения

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 4   
@dayakeshwari3643
@dayakeshwari3643 Месяц назад
Super
@dreamsunexplored
@dreamsunexplored Месяц назад
Thanks
@nav1989r
@nav1989r Месяц назад
Superb 👌👌👌
@dreamsunexplored
@dreamsunexplored Месяц назад
Thanks 🤗
Далее
İlham Əliyev və Vladimir Putin görüşü başladı
00:17
Street selfdefense 🥊 #boxing #mma #ufc
0:15
Просмотров 7 млн