ಆತ್ಮೀಯ ಸೋದರಿಯರೇ, ಅಭಿನಂದನೆಗಳು. ನಾನು ಕೀರ್ತಿಶೇಷ ಹರಿಕಥಾ ಮಾಂತ್ರಿಕರಾದ ಶ್ರೀ ಅರುಣ ಕುಮಾರ್ ರವರ ಹಳೆಯ ಮಿತ್ರ. ಮೈಸೂರಿನ ಒಂಟಿಕೊಪ್ಪಲಿನಲ್ಲಿ ಶ್ರೀ ಮಾರುತಿ ದೇವಾಲಯದಲ್ಲಿ ಅನೇಕ ವರುಷಗಳ ಕಾಲ ಅವರ ಹರಿಕಥೆಗಳನ್ನು ವ್ಯವಸ್ಥೆಗೊಳಿಸಿ ಆನಂದಿಸುತ್ತಿದ್ದ ವ್ಯಕ್ತಿ. ವೇದಿಕೆಯ ಮೇಲೆ ಅವರ ಬಗೆಗೆ ಹೃದಯತುಂಬಿ ಹೊನ್ನ ಹೊಗಳಿಕೆಯ ಮಾತುಗಳನ್ನಾಡುತ್ತಿದ್ದವನು ಹೌದು. ನಾನು ಒಮ್ಮೆ ಬೆಂಗಳೂರಿನ ರಂಗಸ್ವಾಮಿ ಗುಡಿ ಬೀದಿಯ ೧೬ನೇ ಅಡ್ಡ ರಸ್ತೆಯ ನಿಮ್ಮ ಮನೆಗೆ ಬಂದಿದ್ದುದೂ ಉಂಟು. ‘ಶ್ರೀ ನಾಯ್ಡುರವರು ಮರೆಯಾದರು’- ಎಂದು ಕೆಲವರು ಹೇಳುತ್ತಾರೆ. ಆದರೆ, ಅವರು ಖಂಡಿತವಾಗಲೂ ಇನ್ನೂ ಉಳಿದಿದ್ದಾರೆ ಹಾಗೂ ಮುಂದೆಯೂ ಉಳಿದಿರುತ್ತಾರೆ: ನಿಮ್ಮಗಳ ಮೂಲಕ. ಅವರ ಎಲ್ಲ ವಾಕ್ಯಗಳು ಹಾಗೂ ಸೂಕ್ಷ್ಮವಾದ ಶೈಲಿಗಳು ಸಹ ನಿಮ್ಮಲ್ಲಿ ಉದಯಿಸುತ್ತಿವೆ. ಅವರಿಗೆ ಸಾಥ್ ನೀಡುತ್ತಿದ್ದ ಶ್ರೀ ಶಿವರಾಂ (ಹಾರ್ಮೋನಿಯಂ) ಹಾಗು ತಬಲಾ ಸಾಯಿನಾಥ್ ರವರೂ ಸಹ ಅವರೊಡನೆಯೇ (ನಿಮ್ಮೊಡನೆಯೇ) ಈಗಲೂ ವೇದಿಕೆಯಲ್ಲಿರುತ್ತಾರೆ. ಯಾವುದೇ ಕೊರತೆಯಿಲ್ಲದೆ ‘ಅವರನ್ನು’ ಯಥಾವತ್ ಧರೆಗಿಳಿಸುವ ತಂಡ ನಿಮದಾಗಿದೆ. “‘ಭಕ್ತಿ ಹಾಗು ಸಂಗೀತಗಳ’ ಸಂಗಮವಾಗಿದ್ದ ಹರಿಕಥಾ ಕ್ಷೇತ್ರವನ್ನು ನವರಸಮಯವನ್ನಾಗಿಸಿ ಹೊಸ ಶೈಲಿಯೊಂದನ್ನು ವೇದಿಕೆಗೆ ಏರಿಸಿದವರು - ಶ್ರೀ ಗುರುರಾಜುಲು ನಾಯ್ಡು ರವರು’ ಎಂದು ನಾನು ವೇದಿಕೆಯಲ್ಲಿ ವಿವರಿಸುತ್ತಿದ್ದೆ. ಅವರ ಕಾರ್ಯಕ್ರಮವು ಪ್ರಾರಂಭವಾಗುವ ಮುನ್ನ, ನಮ್ಮ ತಾಯಿಯವರು ಮಾಡಿಕೊಡುತ್ತಿದ್ದ ಅವರೇಕಾಳು ರೊಟ್ಟಿಯನ್ನು (ಡಿಸೇಂಬರ್ ತಿಂಗಳ ಹನುಮಜಯಂತಿ ವೇಳೆ) ಅವರು ಚಪ್ಪರಿಸಿ ಆಸ್ವಾದಿಸುತ್ತಿದ್ದ ದಿನಗಳು ನನ್ನ ಮನಸ್ಸಿನಿಂದ ಮರೆಯಾಗಿಯೇ ಇಲ್ಲ! ಸತತವಾಗಿ ಮೂರೂ ದಿನಗಳ ಅವರ ಕೀರ್ತನಾ ಕಾರ್ಯಕ್ರಮ ನಮ್ಮಲ್ಲಿರುತ್ತಿತ್ತು. ಒಟ್ಟಿನಲ್ಲಿ ಅವರನ್ನು ದಶಕಗಳ ನಂತರ ಭೇಟಿಮಾಡಿದ ಆನಂದ ನನಗೆ ಲಭಿಸಿತು. ನಿಮಗಳಿಗೆ ಆ ಪರಮಾತ್ಮನು ಸಕಲ ಸೌಭಾಗ್ಯ ಕೀರ್ತಿಗಳನ್ನು ದಯಪಾಲಿಸಲಿ- ಎಂದು ಪ್ರಾರ್ಥಿಸುತ್ತೇನೆ. ನಿಮ್ಮ ಕಲಾವೆಸೇವೆಯು ನಿರಂತರವಾಗಿ ಸಾಗಲಿ. ನಿಮ್ಮ ವಾದ್ಯಗಾರರು ಸಹ ನನ್ನ ಹೃದಯವನ್ನು ಗೆದ್ದಿದ್ದಾರೆ. ಬಬ್ರುವಾಹನ ಕಥನದಲ್ಲಿ, ಯುದ್ಧಕ್ಕೆ ತೆರಳುವ ಮಗನನ್ನು ಭೇಟಿಮಾಡಿವ ತಾಯಿ -ಮಕ್ಕಳ ಭೇಟಿ ಮತ್ತು ಸಂಭಾಷಣೆಯು ಬಹು ಮನೋಜ್ಞವಾಗಿ ಮೂಡಿಸುತ್ತೀರಿ . ‘ತಾಯಿಯ ಪಾದ ಹಿಡಿದು ಬಬ್ರುವಾಹನ ಹೇಳಿದಾsssss ....’ ಎನ್ನುವ ಮಾತುಗಳಲ್ಲಿನ ‘ನಡುಕ’ ಅವರೇ (ಅರುಣ ಕುಮಾರ್) ಧರೆಗಿಳಿದಂತೆ ಭಾಸವಾಗಿತ್ತದೆ. ಒಟ್ಟಿನಲ್ಲಿ ಒಬ್ಬರಿಗೆ ಸಂಗೀತವನ್ನೂ ಮತ್ತೊಬ್ಬರಿಗೆ ನಿರೂಪಣೆಯನ್ನೂ ಅವರು ಎರಕಹೊಯ್ದಿದ್ದಾರೆ. ಸ್ವರ್ಗಿಯ ಮಿತ್ರರಿಗೆ ನನ್ನ ಅನಂತ ನಮಸ್ಕಾರಗಳೊಡನೆ, ನಿಮಗೆ ಮತ್ತು ವಾದ್ಯಗಾರರಿಗೆ ವಂದನೆಗಳು. - ಡಾ. ಮೈ. ನಾ. ಶರ್ಮಾ. 93421 08080.
ಇಬ್ಬರು ಸಹೊದರಿಯರನ್ನ ನೊಡ್ತಾಈದ್ದರೆ 1980 ನೇ ಇಸವಿ ಜ್ನಾಪಕ ಬರುತ್ತೇ ಆ ಸರರ್ಸ್ವತಿ ನಿಮ್ಮ ನಾಲಿಗೇ ಮೇಲೆ ನೃತ್ಮಾ ಮಾಡ್ತಾಇದಾಳೇನೊ ಅಂತಾ ಭಾಸವಾಗುತ್ತೆ ಯೆಸ್ಟು ಸುಲಲಿತವಾದ ಕನ್ನಡ ಉಚ್ಚಾರಣೆ ಅಬ್ಬಬ್ಬಾ ಸಹೊದರಿಯರೇ ನಿಮಗೇ ಕೋಟಿ ಕೊಟಿ ಸಹಸ್ರ ಕೋಟಿ ವಂದನೆಗಳು ನಮನಗಳೂ ಆ ದೇವರು ಆರೋಗ್ಯ ಐಶ್ವರ್ಯಾ ಆಯಿಸ್ಸೂ ನಿಮಗೇ ಕೊಡಲಿ ಯಂದು ಪ್ರಾರ್ತಿಸುವಾ ನಿಮ್ಮ ಅಪ್ಪಟ ಅಭಿಮಾನಿ ಚಳ್ಳಕೆರೆ
Excellent Harikathe by these sisters. 🙏🙏 It is not that easy woman performing Harikathe. It needs Exordinary strength. I too started watching seeing Amruthas interview for Kalamadhyama. I wish Amrutha keeps doing it and more and more people should watch and encourage her. 🙏