Тёмный

ಆದಿ ಮಾನವರ ಸಮಾಧಿ & 850 years old Hoysala temple Murundi Kodi Malleshwara Arsikere Hassan Karnataka 

Sudeesh Kottikkal
Подписаться 286 тыс.
Просмотров 5 тыс.
50% 1

850 years old Hoysala temple Kodi Maleshwara Swamy temple Murundi Village Arsikere Hassan tourism Karnataka Tourism
Google map location: maps.app.goo.g...
ಕ್ರಿ ಶ 1174 ರಲ್ಲಿ ಹೊಯ್ಸಳ ಎರಡನೇ ಬಲ್ಲಾಳನ ಆಳ್ವಿಕೆಯಿದ್ದಾಗ ಹೆಗ್ಗಡೆ ನಾಕಿರಾಜನು ಮುರುಂಡಿಯಲ್ಲಿ (ಶಾಸನೋಕ್ತ ಮುರುಹಿಂಡಿ) ಯಲ್ಲಿ ಮೂಲಸ್ಥಾನೇಶ್ವರ ಎಂಬ ಶೈವ ದೇವಾಲಯ ನಿರ್ಮಿಸಿ ಕೆರೆಯನ್ನು ಕಟ್ಟಿಸಿ ಅದರ ಕೆಳಗಿನ ಫಲವತ್ತಾದ ಭೂಮಿಯನ್ನು ದೇವರಿಗೆ ಬಿಟ್ಟ ಮಾಹಿತಿಯಿದೆ.
The real name of Kodi Maleshwara Swamy temple is Mulasthaneshwara temple which was built by Heggade Nakiraja in the year 1174 CE under the Hoysala King Veeraballa II. The shikara was built in Phamsana style and the Ashta dikpalakas are carved outside the temple along with Kapalika yathis and Bhairava. The temple is Ekakuta and has a Gharbhagudi, Shukhanasi, Antharala, and Navaranga.
There are two stone inscriptions behind the temple and two hero stones as well. One stone inscription mentions the oldest Kannada school in Karnataka.
ಗರ್ಭಗುಡಿಯಲ್ಲಿ ಜೀರ್ಣೋದ್ಧಾರದ ಸಮಯದಲ್ಲಿ ಬದಲೀ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಗರ್ಭಗುಡಿಯ ದ್ವಾರದ ಇಕ್ಕೆಲಗಳಲ್ಲಿ ಶೈವ ದ್ವಾರಪಾಲಕರಿದ್ದರೆ ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬು ಶಿಲ್ಪವಿದೆ. ಅಂತರಾಳದ ದ್ವಾರದಲ್ಲಿ ಕಲಶದ ಮಾದರಿಯ ರಚನೆಗಳಿದ್ದು ಬೆಳಕಿನ ವ್ಯವಸ್ಥೆಗಾಗಿ ಜಾಲಂಧ್ರವನ್ನು ಅಳವಡಿಸಲಾಗಿದೆ. ನವರಂಗದಲ್ಲಿ ಸುಂದರವಾದ ನಾಲ್ಕು ಹೊಯ್ಸಳ ಕಂಬಗಳಿದ್ದು ಛಾವಣಿಯಲ್ಲಿನ ವಿತಾನಗಳು ಬಹಳ ಸುಂದರವಾಗಿವೆ. ಮಧ್ಯದ ವಿತಾನದಲ್ಲಿ ಪದ್ಮ ಮಂಡಲವಿದ್ದು ಪಟ್ಟಿಕೆಯಲ್ಲಿ ಉಮಾಮಹೇಶ್ವರನ ಶಿಲ್ಪವಿದೆ.
ನವರಂಗದಲ್ಲಿ ಸಪ್ತಮಾತೃಕೆಯರು , ಇತ್ತೀಚಿನ ಗಣಪತಿ ಮತ್ತು ನಂದಿ ವಿಗ್ರಹವನ್ನು ಕಾಣಬಹುದು. ದೇವಾಲಯದ ಹೊರಭಾಗದ ಭಿತ್ತಿಯು ಸರಳವಾಗಿದ್ದು ಅಧಿಷ್ಠಾನವು ಮೂರು ಪಟ್ಟಿಕೆಗಳಿಂದ ಕೂಡಿದೆ. ಭಿತ್ತಿಯಲ್ಲಿ ವಿಶೇಷವಾಗಿ ಮಾಂತ್ರಿಕ / ಕಾಪಾಲಿಕ ಮತ್ತು ನಾಗಕನ್ಯೆ / ವಿಷಕನ್ಯೆಯರ ಶಿಲ್ಪಗಳಿವೆ. ಈ ಶಿಲ್ಪಗಳ ಮಧ್ಯೆ ಕಾಲಭೈರವನ ಮೂರ್ತಿಯಿದ್ದು ಇವು ಭೈರವ ಪಂಥಕ್ಕೆ ಸೇರಿರಬಹುದಾದ ಸಾಧ್ಯತೆಯಿದೆ. ಉಳಿದಂತೆ ದರ್ಪಣ ಸುಂದರಿ, ಚಾಮರಧಾರಿಣಿ, ಉಮಾಮಹೇಶ್ವರ, ಕಾಲಭೈರವ, ವೀರಭದ್ರ, ಕೃಷ್ಣ ಸತ್ಯಭಾಮೆಯರನ್ನು ಹೊತ್ತ ಗರುಡ, ಅಷ್ಟ ದಿಕ್ಪಾಲಕರ ಶಿಲ್ಪಗಳು ಗಮನ ಸೆಳೆಯುತ್ತವೆ. ಸಾಮಾನ್ಯವಾಗಿ ವಿತಾನದಲ್ಲಿ ಇರಬೇಕಾದ ಅಷ್ಟದಿಕ್ಪಾಲಕರ ಶಿಲ್ಪಗಳನ್ನು ಇಲ್ಲಿ ಭಿತ್ತಿಯಲ್ಲಿ ಅಳವಡಿಸಲಾಗಿದೆ. ಈ ವಿಧಾನವು ಬೇರೆ ಯಾವ ಹೊಯ್ಸಳ ದೇವಾಲಯದಲ್ಲೂ ಕಂಡುಬರುವುದಿಲ್ಲ.
ದೇವಾಲಯದ ಮುಖ್ಯದ್ವಾರದಲ್ಲಿ ಎರಡೂ ಕಡೆ ಶೈವ ದ್ವಾರಪಾಲಕರ ಶಿಲ್ಪಗಳಿವೆ. ಗರ್ಭಗುಡಿಯ ಮೇಲೆ ಕದಂಬ ನಾಗರ / ಫಾಂಸನ ಶೈಲಿಯ ಶಿಖರವಿದ್ದು ಏಳು ಸ್ತರಗಳಿಂದ ಕೂಡಿದೆ. ಘಂಟಾ ಭಾಗದ ನಾಲ್ಕು ಕಡೆ ನಂದಿಯ ವಿಗ್ರಹಗಳಿವೆ. ಶುಕನಾಸಿಯಲ್ಲಿ ಹುಲಿಯನ್ನು ಕೊಲ್ಲುತ್ತಿರುವ ಸಳನ ಶಿಲ್ಪವಿದೆ. ಇದಲ್ಲದೆ ಸಳನ ಶಿಲ್ಪದ ಮುಂದೆ ವಿಷ್ಣು ಮತ್ತು ಬ್ರಹ್ಮರ ವಿಗ್ರಹಗಳನ್ನು ಪ್ರತಿಸ್ಥಾಪಿಸಿರುವುದು ವಿಶೇಷವಾಗಿದೆ. ಹಿಂದೊಮ್ಮೆ ದೇವಾಲಯದ ಒಳಗೆ ಇದ್ದ ಪರಿವಾರ ದೇವತೆಗಳಾದ ಸರಸ್ವತಿ, ಗಣಪತಿ, ಸುಬ್ರಹ್ಮಣ್ಯ ವಿಗ್ರಹಗಳನ್ನು ಭಿನ್ನವಾಗಿದೆಯೆಂದು ಹೊರ ಆವರಣದಲ್ಲಿ ಇರಿಸಲಾಗಿದೆ.
ದೇವಾಲಯದ ಆವರಣದಲ್ಲಿ ಎರಡು ಶಾಸನಗಳು ಮತ್ತು ಎರಡು ವೀರಗಲ್ಲುಗಳನ್ನು ಸಂರಕ್ಷಿಸಲಾಗಿದೆ. ಮೊದಲನೇ ಶಾಸನವು ಹೊಯ್ಸಳರ ವಂಶಾವಳಿಯಿಂದ ಶುರುವಾಗುತ್ತದೆ. ಎರಡನೇ ವೀರಬಲ್ಲಾಳನ ಕಾಲದಲ್ಲಿ ಈ ದೇವಾಲಯದ ನಿರ್ಮಾಣ ಮಾಹಿತಿಯಿದ್ದು ಜೊತೆಗೆ ಮಹಾಪ್ರಧಾನ, ಸರ್ವಾಧಿಕಾರಿ, ಮಹಾಪಸಾಯಿತ ಶ್ರೀಕರಣದ ಎರೆಯಣ್ಣ ಹೆಗ್ಗಡೆಯು ಅರಸನಿಂದ ಮುರುಂಡಿಯನ್ನು ಪಡೆದು ನರಸಿಂಹರಾಜಪುರ ಎಂಬ ಹಳ್ಳಿಯನ್ನು ಮುರುಂಡಿಯಲ್ಲಿ ಈತನು ಸ್ಥಾಪಿಸಿದ್ದ ಬಾಲಕರ ಶಾಲೆಗೆ ದತ್ತಿ ಬಿಟ್ಟಿದ್ದಾಗಿ ತಿಳಿಸುತ್ತದೆ. ಇಲ್ಲಿ ಕರ್ಣಾಟ (ಕನ್ನಡ ) ಭಾಷೆಯನ್ನು ಮಕ್ಕಳಿಗೆ ಕಲಿಸಲು ಬೋಳೆಯ ಸೋವಿಯಣ್ಣ ಎಂಬ ಶಿಕ್ಷಕರನ್ನು ನೇಮಿಸಿ ಆತನಿಗೆ ಹನ್ನೆರಡು ಗದ್ಯಾಣ ಮತ್ತು ಅಡಿಗೆ ಮಾಡುವ ಬಾಣಸಗಿತ್ತಿಗೆ ಮೂರು ಗದ್ಯಾಣವನ್ನು ಕೊಡುವ ವ್ಯವಸ್ಥೆಯನ್ನು ಸಹ ಮಾಡಿದ್ದಾಗಿ ತಿಳಿಯುತ್ತದೆ.

Опубликовано:

 

2 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 21   
@ranganathbr-gx6zw
@ranganathbr-gx6zw 8 месяцев назад
ಮಾಹಿತಿ ತಿಳಿಸಿ ಕೊಟ್ಟ ಯುವರಾಜು ರವರಿಗೆ ಹಾಗೂ ಪವನ್ ಮೌರ್ಯ ಚಕ್ರವರ್ತಿ ರವರಿಗೆ ಧನ್ಯವಾದಗಳು 🙏
@rameshr-xl7zg
@rameshr-xl7zg 8 месяцев назад
🙏🙏
@spradeepkumarschandrasheka672
@spradeepkumarschandrasheka672 7 месяцев назад
Awesome vlog sir 😊😊😊😊😊😊
@niskitab
@niskitab 8 месяцев назад
Super information
@peregrinehiker7851
@peregrinehiker7851 8 месяцев назад
Even this simple Hoysala temple packs so much grandeur. Hoysalas are the greatest architects and sculptors!
@SudeeshKottikkal
@SudeeshKottikkal 8 месяцев назад
true 😊😊
@rohithdanand802
@rohithdanand802 8 месяцев назад
Thumba ole information 🔥🔥🙏🙏
@ancienthistoricplacechanne2227
@ancienthistoricplacechanne2227 8 месяцев назад
ಸರ್ ಚಿಕ್ಕ ಚಿಕ್ಕದಾಗಿ ಎಪಿಸೋಡ್ ಮಾಡಿ ಹಾಕಿ ಇಷ್ಟುದ್ದ ಯಾರು ನೋಡ್ತಾರೆ?.
@indukumarm5410
@indukumarm5410 8 месяцев назад
Super ವಿವರಣೆ , ಒಳ್ಳೆಯ ಮಾಹಿತಿ ಸರ್ ಆ ಇಬ್ಬರು ಗೈಡಗಳ ನಂಬರ್ ಕೊಡಿ ಸರ್
@SudeeshKottikkal
@SudeeshKottikkal 8 месяцев назад
ಇಬ್ಬರು ಇತಿಹಾಸ ಸಂಶೋಧಕರು Pawan Mourya Chakravarty (Researcher) M: 96861 61809 Dr Harish Kumar (Academician & Researcher) M: 94813 46213
@loka2960
@loka2960 8 месяцев назад
ಸರ್ ನಿಮ್ ವಿಡಿಯೋ ತುಂಬಾ ಅತ್ಯುತ್ತಮ ವಾಗಿರುತ್ತವೆ ನಾನು ನಿಮ್ಮ ಜೊತೆ ಮಾತಾಡಬೇಕು ಪ್ಲೀಸ್ ನನಗೆ ನಿಮ್ಮ ವಾಟ್ಸಾಪ್ ನಂಬರ್ ಕೊಡಿ
@GONGABOIIS
@GONGABOIIS 8 месяцев назад
❤❤
@SudeeshKottikkal
@SudeeshKottikkal 8 месяцев назад
😊😊🙏
@RajendraMurundivenkateshaiah
@RajendraMurundivenkateshaiah 7 месяцев назад
ನಮ್ಮ ಹುಟ್ಟೂರು ಬಗ್ಗೆ ಪೂರ್ತಿ ವಿವರಣೆ ಬಹಳ ಸಂತೋಷವಾಯಿತು. ಅದ್ಬುತ ವಿವರಣೆ. ಧನ್ಯವಾದ
@bharathamr8908
@bharathamr8908 8 месяцев назад
ನಮ್ಮ ಊರಿನ ಇತಿಹಾಸವನ್ನು ತುಂಬಾ ಅರ್ಥ ಪೂರ್ಣವಾಗಿ ತಿಳಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್...
@jagajagadeesh8726
@jagajagadeesh8726 8 месяцев назад
❤ ತುಂಭಾ ಒಳ್ಳೆ ಮಾಹಿತಿ ಕೊಟ್ಟಿದಿರ
@zionven
@zionven 7 месяцев назад
super video suddeesh sir...
@abhishekshivakumar2194
@abhishekshivakumar2194 8 месяцев назад
thanks for the video sir. Namma karnatakadalli eetara eshto jagagalu belakige barabeku. I never miss your videos.
@SudeeshKottikkal
@SudeeshKottikkal 8 месяцев назад
😍🙏😊❤
@koushikraichur8027
@koushikraichur8027 8 месяцев назад
ಬಹಳ ಒಳ್ಳೆಯ , ಅರ್ಥಪೂರ್ಣವಾದ ಚಿತ್ರಣ. ಮಾಹಿತಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ಪುರಾಣ ಹಾಗೂ ಜನಪದ ಎರಡೂ ಅಂಶಗಳನ್ನು ಒಳಗೊಂಡಿರುವ ಸುಂದರ ದೇವಾಲಯ
@HarishHunterHari-ed7iv
@HarishHunterHari-ed7iv 8 месяцев назад
ಸೂಪರ್ ಸರ್ ನಮ್ಮ ಊರಿನ ಶ್ರೀ ಕೋಡಿ ಮಲ್ಲೇಶ್ವರ ದೇವಾಲಯ ದ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಾ ನಮಗೆ ಗೊತ್ತಿಲ್ಲದ ವಿಚಾರಗಳನ್ನ ತಿಳಿಸಿದ್ದಕ್ಕೆ ನಿಮಗೆ ತುಂಬು ಹೃದಯ ಧನ್ಯವಾದಗಳು🎉❤
Далее
Учёные из Тринидад и Тобаго
00:23