ನಮ್ಮಲ್ಲಿ ದೇವರಿಗೆ ಅರ್ಪಿಸುವ ಅಡಿಗೆಯಲ್ಲಿ ಈರುಳ್ಳಿ ನಿಶೇಧವಿಲ್ಲ, ಅದನ್ನ ಸರಿಯಾಗಿ ತಿಳಿಯಿರಿ, ಶಿವರಾತ್ರಿಯಲ್ಲಿ ಕೂಡ ಉಪ್ಪಿಟ್ಟು , ಕಡಲೆಕಾಳು ಉಸ್ಲಿ ಇದಕ್ಕೆಲ್ಲ ಈರುಳ್ಳಿ ಬಳಸುತ್ತೇವೆ , ಇದು ನಮ್ಮ ತಲೆತಲಾಂತರದಿಂದ ನಡೆದುಬಂದಿದೆ, ನಾವೇನು ಹೊಸದಾಗಿ ಮಾಡ್ತಿಲ್ಲ ಒಬ್ಬಟ್ಟಿನ ಸಾರು, ಅನ್ನ, ಹೀಗೆ ಎಲ್ಲವನ್ನೂ ದೇವರ ನೈವೇದ್ಯಕ್ಕೆ ಇಡುತ್ತೇವೆ, ಸಾರಿಗೆ ಈರುಳ್ಳಿ ಹಾಕಿರುತ್ತೇವೆ, ವಿವಿಧತೆಯಲ್ಲಿ ಏಕತೆ ಇದೆ ನಮ್ಮ ಸಮಾಜದಲ್ಲಿ, ನಾವು ನಮ್ಮಲ್ಲಿ ಮಾಡುವ ವಿಧಾನವನ್ನ ಪ್ರಾಮಾಣಿಕವಾಗಿ ತಿಳಿಸಿರುತ್ತೇವೆ, ಹೆಸರು ಬಳಸಿಕೊಳ್ಳುವ ಅವಶ್ಯಕತೆ ಬರುವುದಿಲ್ಲ, ಮತ್ತು ನಮ್ಮ ಪದ್ಧತಿಯನ್ನು ಯಾರಿಗೂ ವತ್ತಾಯವಾಗಿ ಹೇರ್ತಾಇಲ್ಲ, ನಾವು ಪ್ರತೀ ಹಬ್ಬದಲ್ಲಿಯೂ ಹೀಗೆ ಮಾಡಿದ್ದು ಗೊತ್ತಾ , ಕಮೆಂಟ್ ಮಾಡುವಾಗ ಎಚ್ಚರಿಕೆಯಿಂದ ವಿಚಾರಿಸಿ ಯಾರ ಪದ್ಧತಿ ಹೇಗಿದೆ ಎಂದು ತಿಳಿದು ಮಾಡಿ, ಅನವಶ್ಯಕ ಚರ್ಚೆಗೆ ಅವಕಾಶ ಕಲ್ಪಿಸಬೇಡಿ, ಆದರೂ......ಧನ್ಯವಾದಗಳು.
ನಿಮ್ಮ ವಿಚಾರಧಾರೆಯನ್ನ ಯಾವುದಾದರೂ ಉಪಯೋಗಕ್ಕೆ ಬರುವಂಥದ್ದರಲ್ಲಿ ಮಂಡಿಸಿ, ದಯವಿಟ್ಟು ಅನವಶ್ಯಕ ಚರ್ಚೆ ನಮಗೆ ಇಷ್ಟವಿಲ್ಲ, ಮತ್ತು ನಿಮಗೆ ಸಾಬೀತು ಪಡಿಸುವ ಅವಶ್ಯಕತೆ ಕೂಡಾ ಇಲ್ಲ, ನಮ್ಮಲ್ಲಿ ಪ್ರತೀ ಹಬ್ಬದಲ್ಲಿಯೂ ಹೀಗೆ ಮಾಡುವುದು, ನಾನು ಕಂಡಹಾಗೆ ಇದು ನನಗೆ ಐವತ್ತಾರನೆಯ ಗಣಪತಿ ಹಬ್ಬ, ನಮ್ಮಲ್ಲಿ ಹೀಗೇ ಮಾಡುವುದು, ನೀವೂ ಹೀಗೆ ಮಾಡಿ ಎಂದು ನಾವು ಹೇಳುವುದಿಲ್ಲ, ನಾವು ಮಾಡುವುದು ಹೀಗೆ, ಗೊತ್ತಾಯ್ತಾ.. ಮತ್ತೊಮ್ಮೆ ಧನ್ಯವಾದಗಳು.