ಗಾಯಕರು: ಚಂದ್ರಿಕಾ ಗುರುರಾಜ್
ಧ್ವನಿ ಸುರುಳಿ:ಮಹಾಚೇತನ
#ಹನಸೋಗೆಸೋಮಶೇಖರ್
#bahujanmovementsongs
#dhammapada
#rajyadhwni
ಧರೆಯಂತೆ.... ಉಷೆಯಂತೆ....
ಧರೆಯಂತೆ ಉಷೆಯಂತೆ
ಧರಣಿಯನಾಳಿದ ದೊರೆಯಂತೆ
ಧರಣಿಯನಾಳುವ ದೊರೆಯಂತೆ
ಆ ದೊರೆಗಳಿಗೆ ಜೀವಕೊಟ್ಟ ಮಹಾಮಾಯಿಯಂತೆ
ನೀನಾಗು ನನ್ನ ಕರುಳೇ ಆ ಮಹಾಮಾಯಿಯಂತೆ
ನೀನಾಗು ನನ್ನ ಮಗಳೇ ಆ ಮಹಾತಾಯಿಯಂತೆ
ಸ್ಪೂರ್ತಿ ಪ್ರೇರಣೆಯ ಮಧುವಾಗಿ
ಸಿದ್ಧಾರ್ಥನಿಗೆ ಸ್ವಯಂ ವಧುವಾಗಿ
ಸ್ಪೂರ್ತಿ ಪ್ರೇರಣೆಯ ಮಧುವಾಗಿ
ಸಿಧ್ದಾರ್ಥನಿಗೆ ಸ್ವಯಂ ವಧುವಾಗಿ
ಬುದ್ಧನಾ ಮಡದಿ ಯಶೋಧರೆಯಂತೆ
ನಮ್ಮ ರಾಹುಲನಾ ಹಡೆದಾ ಯಶೋಧರೆಯಂತೆ
ನೀನಾಗು ನನ್ನ ಕರುಳೇ ಆ ಮಹಾಮಾಯಿಯಂತೆ
ನೀನಾಗು ನನ್ನ ಮಗಳೇ ಆ ಮಹಾತಾಯಿಯಂತೆ
ಸಹನೆ ಸಹಕಾರದ ಕಡಲಾಗಿ
ತಾಳ್ಮೆ ತ್ಯಾಗದ ತವರಾಗಿ
ಸಹನೆ ಸಹಕಾರದ ಕಡಲಾಗಿ
ತಾಳ್ಮೆ ತ್ಯಾಗದ ತವರಾಗಿ
ಬೀಮನೊಡನೆ ಬಾಳಿದಾ ರಮಾಭಾಯಿಯಂತೆ
ನಮ್ಮ ಮಹಾಮಾತೆ ರಮಾಭಾಯಿ ಅಂಬೇಡ್ಕರರಂತೆ
ನೀನಾಗು ನನ್ನ ಕರುಳೇ ಆ ಮಹಾಮಾಯಿಯಂತೆ
ನೀನಾಗು ನನ್ನ ಮಗಳೇ ಆ ಮಹಾತಾಯಿಯಂತೆ
ಬಹುಜನರೇಳಿಗೆಗೆ ಮುಡುಪಾಗಿ
ವಿದ್ಯೆ ವಿನಯಗಳ ನಿಧಿಯಾಗಿ
ಬಹುಜನರೇಳಿಗೆಗೆ ಮುಡುಪಾಗಿ
ವಿದ್ಯೆ ವಿನಯಗಳ ನಿಧಿಯಾಗಿ
ಜ್ಯೋತಿಬಾರ ಜೊತೆನಡೆದ ಮಾತೆ ಸಾವಿತ್ರಿಯಂತೆ
ಈ ನೆಲದ ಮೊದಲ ವಿದ್ಯಧಾತೆ ಸಾವಿತ್ರಿಮಾತೆಯಂತೆ
ನೀನಾಗು ನನ್ನ ಕರುಳೇ ಆ ಮಹಾಮಾಯಿಯಂತೆ
ನೀನಾಗು ನನ್ನ ಮಗಳೇ ಆ ಮಹಾತಾಯಿಯಂತೆ
ಭೀಮಾ ಮಾರ್ಗದಿ ಜಯ ಪಡೆದು
ರಾಜಾಭವನದ ಒಳನಡೆದು
ಭೀಮಾ ಮಾರ್ಗದಿ ಜಯ ಪಡೆದು
ರಾಜಾಭವನದ ಒಳನಡೆದು
ವಿಮೋಚಾನಾ ರಥವನ್ನು ಮುನ್ನಡೆಸಿದ ಅಕ್ಕನಂತೆ
ನಮ್ಮ ಉಕ್ಕಿನ ಮಹಿಳೆ ಅಕ್ಕ ಮಾಯಾವತಿಯಂತೆ
ನಮ್ಮ ಆನೆಯಾ ಗುಣದಾ ಅಕ್ಕ ಮಾಯಾವತಿಯಂತೆ
ನೀನಾಗು ನನ್ನ ಕರುಳೇ ಅಕ್ಕ ಮಾಯಾವತಿಯಂತೆ
ನೀನಾಗು ನನ್ನ ಮಗಳೇ ಅಕ್ಕ ಮಾಯಾವತಿಯಂತೆ
ಅಕ್ಕ ಮಾಯಾವತಿಯಂತೆ ಅಕ್ಕ ಮಾಯಾವತಿಯಂತೆ
ಹುಂಹೂಂ ಹುಂ ಹೂಂ
28 авг 2018