ಅಣ್ಣಾವ್ರ ಬಗ್ಗೆ ಹೋಲಿಕೆ ಮಾಡುವಂತ ನಟ ಈವರೆವಿಗೂ ಹುಟ್ಟಿಲ್ಲ. ಮುಂದೆಯೂ ಹುಟ್ಟಲ್ಲ ಬಿಡಿ ಸರ್. ಶ್ರೀಯುತ ಎನ್.ಆರ್.ರಮೇಶ್ ರವರಿಗೂ ಹಾಗೂ ಶ್ರೀಯುತ ಹರಿಹರಪುರ ಮಂಜುನಾಥ್ ರವರಿಗೂ ತುಂಬಾ ತುಂಬಾ ಧನ್ಯವಾದಗಳು.. 👌👌👌👍🏿👍🏿👍🏿🙏🙏🙏
ರಾಜಕುಮಾರ್ ಅವರನ್ನು ಅರ್ಥ ಮಾಡಿಕೊಳ್ಳಲು ನಮ್ಮಲ್ಲಿ ಒಂದು ರೀತಿ ಪರಿಪಕ್ವತೆ ಬರಬೇಕು. ನಾನು ಬಾಲ್ಯದಲ್ಲಿ ಇದ್ದಾಗ ನಮ್ಮ ಸುತ್ತ ಮುತ್ತ ಜನ ರಾಜಕುಮಾರ್ ಅವರನ್ನು ಗುಳ್ಳೆ ನರಿ ಅನ್ನುತ್ತಿದ್ದರು ಜೊತೆಗೆ ಶಂಕರ್ನಾಗ್ ಸಾವಿಗೆ ರಾಜಕುಮಾರ್ ಕಾರಣ ಹಾಗೆ ವಿಷ್ಣುವರ್ಧನ್ ಏಳ್ಗೆಯನ್ನು ರಾಜಕುಮಾರ್ ಸಹಿಸುತ್ತಿರಲಿಲ್ಲ ಮತ್ತು ರಾಜಕುಮಾರ್ ಅವರಿಗೆ ಸರಿಯಾಗಿ ನಟನೆ ಬರಲ್ಲ ಅಂತ ಹೇಳುತ್ತಿದ್ದರು. ನಂತರ ನಾನು ಕಾಲೇಜು ಅಲ್ಲಿ ಇದ್ದಾಗ ಉಪೇಂದ್ರ ಅವರ ಅಬ್ಬರ ಇತ್ತು. ಆಗ ನಾವು ರಾಜಕುಮಾರ್ ಅವರಿಗೆ ಸರಿಯಾದ ಉತ್ತರ ಈ ಉಪೇಂದ್ರ ಅಂತ ಸುಳ್ಳೇ ಸುಳ್ಳು ನಂಬಿದ್ದೆವು. ಈಗ ಒಂದಷ್ಟು ಯುವಕರು ಸಹ ದರ್ಶನ ಅವರಿಗೆ ರಾಜಕುಮಾರ್ ಅವರಿಗೆ ಮೀರಿದ ಜನಪ್ರಿಯತೆ ಇದೆ ಅಂತ ನಂಬಿದ್ದಾರೆ. ಆದರೆ ರಾಜಕುಮಾರ್ ಅವರು ಅವರ ಪಾತ್ರಗಳ ಮೂಲಕ ಅರ್ಥವಾಗುವುದು ಒಂದು ಪರಿಪಕ್ವತೆ ಬಂದ ಮೇಲೆ. ರಾಜಕುಮಾರ್ ಅವರ ಮಯೂರ ವರ್ಮಾ, ನಾಂದಿ, ರಾಘವೇಂದ್ರ ಸ್ವಾಮಿ ಪಾತ್ರ, ಬಂಗಾರದ ಮನುಷ್ಯ, ಕೃಷ್ಣದೇವರಾಯ ಮುಂತಾದ ಪಾತ್ರಗಳು timeless ಪಾತ್ರಗಳು.
ಭಾರತ ರತ್ನ ಪ್ರಶಸ್ತಿ ಗೆ ಅರ್ಹವಾದ ವ್ಯಕ್ತಿ ನಮ್ಮ ಅಣ್ಣಾವ್ರು.. ದಯವಿಟ್ಟು ಕರ್ನಾಟಕ ಸರ್ಕಾರ ಅಣ್ಣಾವ್ರಿಗೆ ಭಾರತ ರತ್ನಕ್ಕೆ ಶಿಫಾರಸ್ಸು ಮಾಡ್ಬೇಕು.. ಇದು ಎಲ್ಲಾ ಕನ್ನಡಿಗರ ಮನವಿ...🙏
ವರನಟ.ರಾಜ್ಕುಮಾರರ ಅಪೂರ್ವ ಅಪರೂಪದ ಅಭಿಮಾನಿ dr.ರಾಜ್ ವಿಕಿಪೀಡಿಯ,ಅಣ್ಣಾವ್ರ ಅರ್ಥಪೂರ್ಣ ಸ್ಮಾರಕಗಳ ಸರದಾರ NR ರಮೇಶ್ ರವರ ಬಹು ದಿನಗಳ ಅಪೇಕ್ಷೆಯ ಸಂದರ್ಶನ ನಡೆಸಿ ಕೊಟ್ಟ ಮಂಜುನಾಥ್ sir ರವರಿಗೆ ರಮೇಶ್ sir ರವರಿಗೆ ಅನಂತ ಕೋಟಿ ನಮನಗಳು
ನಮಸ್ತೆ ರಮೇಶಣ್ಣ ನಿಮ್ಮ ಧ್ವನಿ ಕೇಳಿ ಸಾರ್ಥಕ ಆಯಿತು ನಿಮ್ಮ ಧ್ವನಿಯಲ್ಲಿ ಅಣ್ಣಾವರ ಬಗ್ಗೆ ತಿಳಿಯಲು ತುಂಬ ಸಂತೋಷ್ ಆಗುತ್ತೆ ಇನ್ನು ಬೇಕು ಅಣ್ಣಾವರ ಬಗ್ಗೆ ಸೂಕ್ಷ್ಮ ತಿಳಿವಳಿಕೆ 🙏🙏🙏ಮಂಜುನಾಥ್ ಹರಿಹರ ಪುರ ನಿಮಗೆ ಧನ್ಯವಾದಗಳು ಈಗ್ಗೆ ಸಾಗಲಿ ನಿಮ ನಮ್ಮ ಮೀಡಿಯಾ 🙏🙏🙏
ನಾವು ಇಡೀ ಜೀವನದ ಶೈಲಿಯನ್ನು ಬದಲಿಸಿಕೊಂಡು ಒಳ್ಳೆಯ ಸನ್ಮಾರ್ಗದಲ್ಲಿ ನಡೆಯಲು ಮೂಲ ಕಾರಣ ಕರ್ನಾಟಕ ರತ್ನ ಡಾ ರಾಜ್ಕುಮಾರ್ ಅಣ್ಣಾವ್ರು ಮಾತ್ರ ನಂತರ ಅಪ್ಪು ಅವರು..ನನ್ನಂತೆ ಎಷ್ಟೋ ಜನರಿಗೆ ಅಣ್ಣಾವ್ರು ಮಾದರಿ ಹಾಗೂ ಸ್ಫೂರ್ತಿ. ರಾಜಣ್ಣ ಅಪ್ಪು ಸದಾ ಅಮರ. ಜೈ ರಾಜವಂಶ 🙏
ಅಣ್ಣಾವ್ರ ಬಗ್ಗೆ ಒಳ್ಳೆಯ ಮಾಹಿತಿಯನ್ನು ನೀಡಿದ್ದಕ್ಕೆ ಶ್ರೀ ಎನ್ ಆರ್ ರಮೇಶ್ ಅವರಿಗೆ ಧನ್ಯವಾದಗಳು ಮತ್ತು ಶ್ರೀ ಹರಿಹರಪುರ ಮಂಜುನಾಥ್ ಅವರು ರಮೇಶ್ ಸರ್ ಅವರ ಸಂದರ್ಶನ ಕನ್ನಡ ಜನತೆಗೆ ತಿಳಿಸಿದ್ದಕ್ಕೆ ಮಂಜುನಾಥ್ ಸರ್ ಅವರಿಗೂ ಧನ್ಯವಾದಗಳು ಎಲ್ಲಾ ಅಣ್ಣಾವ್ರ ಅಭಿಮಾನಿಗಳಿಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು
ಅಖಿಲ ಕರ್ನಾಟಕ ಡಾಕ್ಟರ್ ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷರು ನೀವು ಅಂತ ಹೇಳಿಕೊಳ್ಳುವುದಕ್ಕೆ ರಾಜವಂಶದ ಅಭಿಮಾನಿಗಳಿಗೆ ಹೆಮ್ಮೆ ಅನ್ಸುತ್ತೆ ರಮೇಶ್ ಅಣ್ಣ ❤️🙏 ಈಗಾಗಲೇ ಬಿಬಿಎಂಪಿ ಸದಸ್ಯರಾಗಿ ಸಾರ್ವಜನಿಕ ಜೀವನದಲ್ಲಿ ಉತ್ತಮ ಕೆಲಸ ಮಾಡಿದ್ದೀರಾ ಹಾಗೆ ಮುಂದೆ ನೀವು ಶಾಸಕರಾಗಿ ಇನ್ನು ಹೆಚ್ಚೆಚ್ಚು ಸಾರ್ವಜನಿಕರ ಕೆಲಸ ಮಾಡಲು ಆ ಭಗವಂತ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ.. 😘❤️🙏
ಅಣ್ಣಾವ್ರು ಎಂದಿಗೂ ದೇವರೇ ಅವರ ಬಗ್ಗೆ ಯಾರು ಏನೇ ಹೇಳಿದರೂ ಅವರನ್ನೂ ನಮ್ಮ ಅಭಿಮಾನದ ಗುಡಿಯಿಂದ ಸ್ವಲ್ಪವೂ alugadisalu ಸಾದ್ಯವಿಲ್ಲ. ಜೈ ರಾಜಣ್ಣ ಜೈ ರಾಜವಂಶ ಸರಳತೆಯ ದೇವರು ಕನ್ನಡದ ಸ್ವತ್ತು ನಮ್ಮ ಹೆಮ್ಮೆಯ ಮುತ್ತು ರಾಜ್ ಕುಮಾರ್ ಅವರು ದೇವರು.🌹🙏🙏💐💐
Superb superb superb sir.... ಅಣ್ಣಾವರು ಅನ್ನೋದು ಒಂದು ಬೀಜ ಮಾತ್ರ ಅದರಿಂದ ನಿಮ್ಮಂತ ನಮ್ಮಂತ ಎಷ್ಟೋ ಒಳ್ಳೇ ಸಸಿಗಳು ಬೆಳೀಬೇಕು.. ಹಾಗೆ ಬೆಳಗಬೇಕು... ಒಳ್ಳೆಯ ಸಂದೇಶ್ sir... ಅಣ್ಣಾವರಿಗೆ ಜೈ.. ರಾಜವಂಶ ಕ್ಕೆ ಜೈ... ಜೈ ಕರ್ನಾಟಕ... 💛❤️
Nr ರಮೇಶ್ ಸರ್ ಮತ್ತು ರಾಮ್ ಕುಮಾರ್ ಸರ್ ಗೆ ಹೃದಯ ಪೂರ್ವಕ ವಂದನೆಗಳು.. ನಿಮ್ಮ ಎಲ್ಲಾ ವಿಡಿಯೋ ಗಳನ್ನು ತಪ್ಪದೇ ನೋಡುವ ನಿಮ್ಮ ಚಾನೆಲ್ ಅಭಿಮಾನಿ... Nr ರಮೇಶ್ ಸರ್ ನೀವು ಅಣ್ಣಾವ್ರ ಅಭಿಮಾನಿ ಅಂತ ಹೇಳೋಕೆ ತುಂಬಾ ಹೆಮ್ಮೆ ಆಗುತ್ತೆ.. ನಿಮ್ಮಂತೆ ಬೇರೆಯವರು ಯಾರು ಹೇಳುವ ವ್ಯಕ್ತಿ ಇಲ್ಲ
ರಮೇಶ್ ಅಣ್ಣ...💖💖💖💖💖 ಅಣ್ಣಾವರು ಒಬ್ರೇ dr ರಾಜಕುಮಾರ್ ಒಬ್ಬರೇ ಹಾಗೆ ಕನ್ನಡ, ಕರ್ನಾಟಕ ಒಂದೇ...... ನಂಗೆ ಈವಾಗ 29 age ನಾಳೆ ನನ್ನ ಮಕ್ಕಳು ಆದ್ಮೇಲೆ ಅವರಿಗೆ ಒಳ್ಳೆದಾರಿಯಲ್ಲಿ ನಡಿಸ್ಬೇಕು ಅನ್ನೋದು ನನ್ನ ಅಸೆ ಅಷ್ಟೇ ಅಲ್ಲ ಪ್ರತಿ ತಂದೆ ತಾಯಿಯ ಅಸೆ ಅದ್ಕ ಚಿತ್ರ ಮಾಧ್ಯಮ ಪ್ರಭಾವ ಬಹಳ ಇದೆ ಒಳ್ಳೇ ತಂದೆ ಮಗ ಅಣ್ಣ ತಮ್ಮ ಬಂದು ಬಳಗ ಸ್ನೇಹಿತ ಕೊನೆಗೆ ದೇವರು ಆಗಿದ್ದು ನಮ್ಮ್ ದೇವರು ಅಣ್ಣಾವರು ಬಿಟ್ರೆ ನಮ್ಮ್ ಇನ್ನೊಬ್ಬ ದೇವರು ಅಪ್ಪು ಅವರು ಯಾವತ್ತೂ ತಂದೆ ತಾಯಿ ಮಕ್ಕಳನ್ನ ಒಳ್ಳೇ ಪ್ರಜೆ ಆಗ್ಬೇಕು ಅಂತಾರೆ ಅದ್ನ್ ನೋಡಿ ಕಲಿಯೋಕೆ ನಮ್ಮ್ ಅಣ್ಣಾವರು ಅಪ್ಪು ದೇವರ ತರ ಇರ್ಬೇಕು ಪರವಾಗಿಲ್ಲ ಬೆಳಿಯುವ ಸಿರಿ ಮೋಳಿಕೇಯಲಿ ನೋಡು ಅಂದಹಾಗೆ ಅವರಿಗೆ ಇವರ ಚಿತ್ರ ಇವರ ವಿಚಾರ ಹೇಲ್ತಾ ಹೋದ್ರೆ ಸಾಕು ಅವರು ಕೂಡಾ ಉತ್ತಮ ಪ್ರಜೆ ಹಾಗೆ ಒಳ್ಳೆಯ ಮಕ್ಕಳು ಆಗ್ತಾರೆ ಅಣ್ಣಾವರಿಗೆ ಆಯ್ತು ಅಪ್ಪು ದೇವರಿಗೆ ಆಯ್ತು ಹೋಲಿಕೆ ಮಾಡೋಕೆ ಯಾರು ಇಲ್ಲ ಬರೋದು ಇಲ್ಲ ಅಕಸ್ಮಾತ್ ಹೀರೋಯಿಸಂ ಮುಖ್ಯ ಅನ್ನೋರು ಬೇರೆ hero ತರ ಅವರ ಮಕ್ಕಳನ್ನು ಬೆಳಿಸೋಕೆ ಹೇಳಲಿ ಆಗಲ್ಲ ಎಲ್ಲಾ ತಂದೆ ತಾಯಿಗಳು ಒಳ್ಳೇ ಮಕ್ಕಳು ಆಗಿ ಬೆಳೀಲಿ ಅನ್ನೋರು ಆದ್ರು ತಮ್ಮ ಹುಚ್ಚು ಅಭಿಮಾನಕ್ಕೆ ಮಕ್ಕಳನ್ನ ಬಲಿ ಕೊಡೋದು ಸರಿ ಅಲ್ಲ....ಅದು ಅವರ ಅವರ ಅಭಿಪ್ರಾಯ ಅಷ್ಟೇ... ನಮ್ಮ್ ಮಕ್ಕಳಿಗೆ ಹಾಗೂ ಮುಂದೆ ಬರುವ ನಮ್ಮ ಪೀಳಿಗೆಗೆ ಅಣ್ಣಾವರು ಹಾಗೆ ಅಪ್ಪು ದೇವರು ಯಾವತ್ತೂ ಗುರಿಯಾಗಿ ಇರ್ಬೇಕು.. ಇದು ಹೆಮ್ಮೆಹಾಗೆ ತಂದೆ ತಾಯಿಗಳ ಗರ್ವ ಮತ್ತು ಕರ್ತವ್ಯ ... 🙏🙏🙏💖💖💖 ಅಪ್ಪು ಅಣ್ಣಾವರ ದೇವರ ಭಕ್ತರು... 💛❤️
ಎನ್.ಆರ್.ರಮೇಶ್ ಅಣ್ಣ ನವರಿಗೆ ಹೃದಯ ಪೂರ್ವಕ ಅಭಿನಂದನೆಗಳು ಅಣ್ಣಾವ್ರ ಕುಟುಂಬದ ಮಾಹಿತಿಗಳ ಬೃಹತ್ ಗ್ರಂಥಾಲಯ ಅಂದರೆ ತಪ್ಪಾಗಲಾರದು ಏಕೆಂದರೆ ನಮ್ಮಂತಹ ಅಣ್ಣಾವ್ರ ಅಭಿಮಾನಿಗಳಿಗೆ ರಮೇಶ್ ಅಣ್ಣನವರು ಒಂದು ಸ್ಪೂರ್ತಿ. ಶುಭವಾಗಲಿ ಅಣ್ಣ ನಿಮಗೆ ಜೈ ವಿಶ್ವ ಮಾನವ ಡಾ.ರಾಜ್ ಕುಮಾರ್ 🙏🙏🙏👏👏👏💐💐💐
ಹೌದು ರಮೇಶ್ ಸರ್, ನೀವು ಹೇಳುವುದು ಸತ್ಯ. ತೇಜಸ್ವಿಯವರೇ ಹೇಳಿದ್ದಾರೆ. ನಾವು ಎಷ್ಟೇ ಹೋರಾಡಿದರೂ ಈ ರಾಜಕುಮಾರ್ ಸೈಲೆಂಟ್ ಆಗೇ ಸಮಾಜದ ಶೋಷಣಾಕಾರರ ವಿರುದ್ಧ ಸಮರ್ಥ ವಾಗಿ ಯಶಸ್ವಿಯಾದರು ಎಂದು ಹೇಳಿದ್ದಾರೆ
Total ಕನ್ನಡ you tube ವಾಹಿನಿಯ ಮೂಲಕ ರಮೇಶ್ ಸರ್ ಗೆ ಕನ್ನಡಿಗರ ಮನವಿ, ಮುಖ್ಯಮಂತ್ರಿ ಗಳ ಮನವರಿಕೆ ಮಾಡಿ, ಅಣ್ಣಾವ್ರಿಗೆ ಭಾರತ ರತ್ನ ಮತ್ತುಅಪ್ಪು ಅವ್ರಿಗೆ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಿ ಸರ್...🙏
Janaru sir antha karedaddu Dr BR Ambedkar,Dr APJ,and Appu sir. all are next generation educational visioners.we always love you Appu sir and your family.
Ramesh avrige Vandane galu , rajakumar mele etiruva agada abhimana , Hage avrinda prabava ke valagaagi samaja seve maduthiruvudake nimge thumba dhanyavadagalu, do good work sir
ಎನ್ ಆರ್ ರಮೇಶ್ ಅಣ್ಣಾವರಿಗೆ ವಿಶ್ವ ಮಾನವ ಡಾಕ್ಟರ್ ರಾಜಕುಮಾರ್ ಸೇವಾಸಮಿತಿ ಕಡೆಯಿಂದ ಅಭಿನಂದನೆಗಳು 🙏🏽💐🙏🏽 ಮತ್ತು ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ಒಳ್ಳೆಯ ಸಂದೇಶಗಳನ್ನು ಹೇಳಿದ್ದಾರೆ 🙏🏽🙏🏽
ರಮೇಶ್,ನಾನೂ ಸ್ವಲ್ಪ ಹೆಚ್ಚು ಕಡಿಮೆ ನಿಮ್ಮ ವಯಸ್ಸಿನವನೇ, ನಾನೂ ಬಾಲ್ಯದಿಂದಲೇ ಅಣ್ಣಾವ್ರಿಂದ ಪ್ರಭಾವಿತನಾದವನೇ. ನಿಮ್ಮ ಮಾತುಗಳೆಲ್ಲ ನೂರಕ್ಕೆ ನೂರು ಸತ್ಯ. ಇಂದಿಗೂ ಈ ಮಧ್ಯ ಏಶ್ಯಾದಿಂದ ವಲಸೆ ಬಂದು (ನಿಜವಾದ) ಇಲ್ಲಿಯ ಸ್ಥಳೀಯ ದ್ರಾವಿಡರನ್ನು ತುಳಿದು ತಮ್ಮ ಪಾರುಪತ್ಯವನ್ನು ಸ್ಥಾಪಿಸಲು ಹವಣಿಸುತ್ತಿರುವವರೆಲ್ಲರಿಗೆ ಸಡ್ಡು ಹೊಡೆದು ಅವರು ಮಾಡಿದ ಪಾಪ ಕಾರ್ಯಗಳಿಗೆ ಅವರೇ ಪಶ್ಚಾತಾಪ ಪಡುವಂತೆ ಮಾಡಿದ ದೈವಾಂಶ ಸಂಭೂತರೆಂದರೆ ಅವರೇ ನಮ್ಮ ಡಾ.ರಾಜ್. ರಮೇಶ್ ನಿಮ್ಮ ಮಾತುಗಳು ಇಂದಿನ ಯುವ ಪೀಳಿಗೆಗೆ ಒಂದು ಡಿಕ್ಷನರಿ ಇದ್ದಹಾಗೆ. ಅಭಿನಂದನೆಗಳು.
ಮಿಸ್ಟರ್ ನಿಮ್ಮ ಜಿಹಾದಿ ಬುದ್ಧಿ ಇಲ್ಲಿ ಬೇಡ, ಆರ್ಯ ಮತ್ತು ದ್ರಾವಿಡ ಸಿದ್ಧಾಂತ ಕೇವಲ ಊಹಾಪೋಹ ಅಂತ ಅಂಬೇಡ್ಕರ್ ಅವರೇ ಅಧ್ಯಯನ ಮಾಡಿ ಹೇಳಿದ್ದಾರೆ, ಇತ್ತೇಚೆಗೂ ಸಹಾ ಅದರ ಬಗ್ಗೆ ಅಧ್ಯಯನ ಆಗಿದೆ. ನೀವು ಹೇಳಿದ ಹಾಗೆ ಇದು ಆರ್ಯ ದ್ರಾವಿಡ ಇದು ಕೇವಲ ನಿಮ್ಮಂತವರ ವಾದ. ಇಷ್ಟಾಗಿಯೂ ನಿಮ್ಮ ವಿಚಾರಕ್ಕೆ ಇದು ವೇದಿಕೆ ಅಲ್ಲಾ... 🤦♂️🙏
ಕನ್ನಡದ ಮೇರು ನಟರಾಗಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಇಡೀ ವಿಶ್ವದಾದ್ಯಂತ ಹರಡಿರುವ ಅಣಾವ್ರ ಬಗೆಗಿನ ವಿಚಾರಗಳ ಬಗ್ಗೆ ಅದ್ಭುತವಾಗಿ ಎಲ್ಲರ ಮನ ಮುಟ್ಟುವ ರೀತಿ ವಿವರಣೆ ನೀಡಿರುವ ಎನ್. ಆರ್. ರಮೇಶ್ ಸರ್ ಅವರಿಗೆ ಧನ್ಯವಾದಗಳು