Тёмный

#ಮಕ್ಕಳ 

Educational Expert, Management & Career Consultant
Подписаться 2,7 тыс.
Просмотров 1,1 тыс.
50% 1

#ಪಿಯುಸಿ/ಪದವಿಯ ನಂತರ ಮುಂದೇನು? ಯಾವ ವೃತ್ತಿ; ಯಾವ #ಕೋರ್ಸ್, ಯಾವ ಕಾಲೇಜ್? ಒಂದೆರಡು ನಿಮಿಷಗಳ ಈ ವೀಡಿಯೊವನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ವೀಕ್ಷಿಸಬೇಕು. How to take #career & #course #decisions with examples?
ಮಕ್ಕಳ ಭವಿಷ್ಯದ ಬಗ್ಗೆ #ಪೋಷಕರ ಆಸಕ್ತಿ, ಚಿಂತನೆ, ಆತಂಕ ಇವೆಲ್ಲವೂ ಸಾಮಾನ್ಯ. ಇದರ ಪರಿಣಾಮವಾಗಿ ಕೆಲವೊಮ್ಮೆ ನಾವು ಮಾಡಬೇಕೆಂದುಕೊಂಡಿದ್ದ ಕೋರ್ಸ್ ಅಥವಾ ನಮಗೆ ಸರಿ ಎನಿಸಿದ ಕೋರ್ಸ್ ಅಥವಾ ವೃತ್ತಿಯನ್ನ ಮಕ್ಕಳ ಮೇಲೆ ಹೇರೋ ಸಂದರ್ಭಗಳನ್ನ ನಾವು ಖುದ್ದಾಗಿ ನೋಡಿದ್ದೇವೆ. ಇಂತಹ ನಿರ್ಧಾರಗಳು ಸರಿಯಾಗಿದ್ದು ಮಕ್ಕಳು ವಿಧ್ಯಾಭ್ಯಾಸ ಮುಗಿಸಿ, ವೃತ್ತಿಯ ಯಶಸ್ಸನ್ನ ಗಳಿಸಿರೋ ಉದಾಹರಣೆಗಳು ಬೇಕಾದಷ್ಟಿರೋದು ನಿಜ. ಆದರೆ, ಪೋಷಕರ ಒತ್ತಡ ಹೆಚ್ಚಾಗಿ, ಆಸಕ್ತಿಯಿಲ್ಲದ ಕೋರ್ಸ್‍ಗೆ ಸೇರಿ, ಮಕ್ಕಳ ಭವಿಷ್ಯ ಬಿಕ್ಕಟ್ಟಿನಲ್ಲಿ ಸಿಕ್ಕಿಹಾಕಿರೋದು ಸಹ ಅಷ್ಟೇ ನಿಜ.
ಕೆಲವು ಉದಾಹರಣೆಗಳು:
ಒಂದು ಕುಟುಂಬ. ತಲೆತರಾಂತರಗಳಿಂದ ಎಲ್ಲರೂ ವೈಧ್ಯರು. ಜೊತೆಗೆ ಒಂದು ಪ್ರಸಿದ್ಧ #ನರ್ಸಿಂಗ್ #ಹೋಮ್ ಒಡೆತನ. ಒಬ್ಬನೇ ಮಗ. ಅವನೂ ವೈಧ್ಯನಾಗಲೀ, ಅನ್ನೋ ಪೋಷಕರ ಬಯಕೆ ಸಹಜವಾಗಿಯೇ ಇತ್ತು. ಆದರೆ, ಆ ಹುಡುಗನಿಗೆ ವೈಧ್ಯಕೀಯ ವೃತ್ತಿಯಲ್ಲೇ ಆಸಕ್ತಿ ಇರಲಿಲ್ಲ; ಅವನಿಗೆ ಪತ್ರಕರ್ತನಾಗುವ ಬಲವಾದ ಒಲವು. ದೀರ್ಘವಾದ ಕೌಂನ್ಸೆಲಿಂಗ್ ನಂತರ ಹುಡುಗನ ಒಲವಿನ ಪ್ರಕಾರವೇ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಪೋಷಕರ ಮುಖದಲ್ಲಿ ನಿರಾಸೆಯ ಛಾಯೆ ಮೂಡಿತ್ತು.
ಇನ್ನೊಂದು ಉದಾಹರಣೆ: ತಂದೆತಾಯಿಯವರಿಗೆ ಮಗ ಎಂಜಿನಿಯರ್ ಆಗಬೇಕಿತ್ತು. ಆದರೆ, ಅವನಿಗೆ #ಫುಟ್‍ಬಾಲ್‍ನಲ್ಲಿ ಆಸಕ್ತಿ. ಈ ಕ್ಷೇತ್ರದಲ್ಲಿ ಆಟದ ಜೊತೆ ಸಾಕಷ್ಟು ತಿಳಿವಳಿಕೆ ಸಹ ಇತ್ತು. ಅವನಿಗೆ ಫುಟ್‍ಬಾಲ್ ಮ್ಯಾನೇಜ್‍ಮೆಂಟ್ ವೃತ್ತಿಯನ್ನು ಸೇರಿಕೊಳ್ಳೋ ಛಲ. ಆದರೆ, ಇಂತಹ ಕ್ಷೇತ್ರಗಳಲ್ಲಿ ಯಶಸ್ಸು ನಿಧಾನ ಮಾತ್ರವಲ್ಲ; ಅನಿಶ್ಚಿತ ಕೂಡ. ಹಾಗಾಗಿ ಎಂಜಿನಿಯರಿಂಗ್ ಸೇರಿ ಕಾಲೇಜಿನ ಫುಟ್‍ಬಾಲ್ ಟೀಮಿಗೂ ಸೇರಿ, ಮಾಹಿತಿ ಮತ್ತು ಕೌಶಲಗಳ ಅಭಿವೃದ್ದಿಯಾಗಿ ಎರಡೂ ಕ್ಷೇತ್ರಗಳ ಆಸಕ್ತಿಯನ್ನ ಮುಂದುವರಿಸಿಕೊಂಡು ಹೋಗುವ ನಿರ್ಧಾರಕ್ಕೆ ಬರಲಾಯಿತು.
ಇನ್ನೊಂದು ಹುಡುಗಿಯ ವಿಚಾರ. ಸಾಧಾರಣಕ್ಕಿಂತಲೂ ಕಮ್ಮಿ ಸಾಮರ್ಥ್ಯ; ತನ್ನದೇ ಆದ ಆಸಕ್ತಿ, ಗುರಿಗಳಿಲ್ಲದ ವ್ಯಕ್ತಿತ್ವ. ತಂದೆಗೆ ಒಂದೇ ಆಸೆ. ಡಾಕ್ಟರ್ ಆಗಲಿ ಅಂತ. ಆದರೇ, ಮೆರಿಟ್ ಸೀಟ್ ಸಿಗುವ ಯಾವುದೇ ಲಕ್ಷಣಗಳಾಗಲೀ ಅಥವಾ ಡೊನೇಷನ್ ಕೊಟ್ಟು ಸೀಟ್ ಸಿಕ್ಕಿದರೂ, ಕೋರ್ಸ್‍ನ್ನ ಯಶಸ್ವಿಯಾಗಿ ಮುಗಿಸೋ ನಂಬಿಕೆ ನಮಗಂತೂ ಬರಲಿಲ್ಲ. ಆದರೆ, ಅವಳ ತಂದೆ ಬಿಡಕ್ಕೆ ತಯಾರಿರಲಿಲ್ಲ; “ ಎಷ್ಟು ಕೋಟಿ ಖರ್ಚಾದರೂ ಪರವಾಗಿಲ್ಲ ಸಾರ್, #MBBS ಗೆ ಸೇರ್ಲಿ ಅನ್ನೋ ಹಟ”. MBBS ಕೋರ್ಸಿಗೆ ಬೇಕಾದ ಆಸಕ್ತಿ, ಸಾಮರ್ಥ್ಯ ಇವಳಲ್ಲಿಲ್ಲ. ಇವಳ ಕೈಲಿ ಈ ಕೋರ್ಸ್ ಮಾಡಕ್ಕೆ ಆಗಲ್ಲ; ದಯವಿಟ್ಟು ಅರ್ಥ ಮಾಡಿಕೊಳ್ಳಿ ಅಂತ ನಾವು ಖಡಾಖಂಡಿತವಾಗಿ ಹೇಳಿದ ಮೇಲೆ ತಂದೆ ಹಟ ಬಿಟ್ರು.
ಆ ಹುಡುಗ ಬುದ್ದಿವಂತ, ಅತಿ ಚುರುಕು. ನಮ್ಮ ಎಲಾ ಟೆಸ್ಟ್‌ಗಳಲ್ಲೂ ಚೆನ್ನಾಗಿ ಮಾಡಿದ್ದ. ತಂದೆತಾಯಿಗಳಿಗೆ ಅವನು ಸಾಫ್ಹ್ಟ್‌ವೇರ್ ಎಂಜಿನಿಯರ್ ಆಗಲೀ ಅನ್ನೋ ಆಸೆ. ಆದರೆ, ಅವನಿಗೆ ಅದರಲ್ಲಿ ಯಾವ ಆಸಕ್ತಿನೂ ಇಲ್ಲ; ಮತ್ತು ಅವನಿಗೆ ಮಾಸ್ಟರ್ ಶೆಫ್ ಆಗಬೇಕು ಅನ್ನೋ ಆಸೆ. ಕೊನೆಗೆ ಅವರ ಒತ್ತಡದಿಂದ ಎಂಜಿನಿಯರಿಂಗ್ ಸೇರಿದ ಹುಡುಗ ಕ್ರಮೇಣ ಮಂಕಾಗುತ್ತಾ ಹೋದ. ಮೊದಲ ಎರಡೂ ಸೆಮೆಸ್ಟರ್ ಗಳಲ್ಲೂ ಫೇಲ್ ಆದ. ಇನ್ನಷ್ಟು ಮಂಕಾಗಿ ತೀವ್ರವಾದ ಖಿನ್ನತೆಗೆ ಒಳಗಾದ. ಕೊನೆಗೆ ಎಂಜಿನಿಯರಿಂಗ್ ಬಿಡ್ಸಿ ಮುಂಬಯಿಯ ಹೋಟೆಲ್ ಮ್ಯಾನೇಜ್‍ಮೆಂಟಿನ ಕಾಲೇಜಿನಲ್ಲಿ ಮಾಸ್ಟರ್ ಶೆಫ್ ಕೋರ್ಸಿಗೆ ಸೇರಿದ ಮೇಲೆ ಸರಿಹೋದ. ಈ ಅದಲುಬದಲಾದ ಕೋರ್ಸ್‍ಗಳ ಮಧ್ಯೆ ಅವನ ಎರಡು ವರ್ಷ ಹಾಳಾಯಿತಾದ್ರೂ, ಈಗ ಕೋರ್ಸ್ ಮುಗಿಸಿ ಒಂದು ಒಳ್ಳೇ ಕೆಲಸದಲ್ಲಿದ್ದಾನೆ. ತಂದೆತಾಯಿಗಳಿಗೆ ಮಗನ ನಿರ್ಧಾರದ ಬಗ್ಗೆ ಹೆಮ್ಮೆ ಇದೆ.
ಹಾಗಾಗಿ ಎಲ್ಲಾ ಪೋಷಕರಿಗೆ ಮಕ್ಕಳ ಭವಿಷ್ಯದ ಬಗ್ಗೆ ಆಸಕ್ತಿ, ಆತಂಕ ಸ್ವಾಭಾವಿಕ. ಕೆಲವು ಸಂದರ್ಭಗಳಲ್ಲಿ ನಿರ್ಧಾರ ಸುಲಭವಲ್ಲ. ಹೀಗೆ, ನಮ್ಮ ಸಲಹೆ, ಸಹಾಯ ಬೇಕು ಅಂದ್ರೆ, ಯಾವುದೇ ಸಂಕೋಚವಿಲ್ಲದೆ ನೀವು ನಮ್ಮನ್ನ ಭೇಟಿ ಆಗ ಬಹುದು.
ಹಾಗೂ, ಇಲ್ಲಿನ ವೀಡಿಯೊಗಳನ್ನು ವೀಕ್ಷಿಸಿ, ಸಬ್‍ಸ್ಕ್ರೈಬ್ ಮಾಡಿ ಮತ್ತು ಲೈಕ್ ಮಾಡಿ.
For any clarifications or guidance or how to make a #career #plan , please write to pradeep@promaxintl.com or view: • ಉನ್ನತ ಶಿಕ್ಷಣಕ್ಕೆ ಬೇಕು ...

Опубликовано:

 

18 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 2   
Далее
Planning And Goal-Setting
28:40
Просмотров 146 тыс.