Тёмный

ಸರಳ ಪಾರಾಯಣ ದಾಟಿ ಹೇಳಿಕೊಟ್ಟಿದ್ದೇನೆ, ಹೇಳಿ ಅಥವಾ ಕೇಳಿ ಎಷ್ಟೋ ದೋಷದಿಂದ ಮುಕ್ತಿ 

ಪರಿಮಳಾಚಾರ್ಯ PARIMALACHARYA
Подписаться 92 тыс.
Просмотров 8 тыс.
50% 1

|| ಸಂಕ್ಷಿಪ್ತ ಶ್ರೀ ಗುರುಚರಿತ್ರೆ |
ಸರಸ್ವತಿ ಗಂಗಾಧರ ಗುರುಭಕ್ತನಿಗೊಲಿದು ಬಂದನಾ ಶ್ರೀದತ್ತ | ಪರಿಪರಿತಾಪವ ಕೇಶವ ಕಳೆಯುತ ನಿಜಸುಖವಿತ್ತನು ಶ್ರೀದತ್ತ ||೧||
ಕಷ್ಟದಿಂದ ಕಂಗೆಡುವ ಬಾಲಕನ ಕಂಡ ಸಿದ್ಧಮುನಿ ಶ್ರೀದತ್ತ | ದುಷ್ಟ ಭಾವನೆಯ ಬಿಟ್ಟು ಭಜಿಸಿದರೆ ಕೊಟ್ಟು ಕಾಯುವನು ಶ್ರೀದತ್ತ ||೨||
ನಿಂತು ನುಡಿವ ಯೋಗೀಂದ್ರನಂಪ್ರಿಯನು ಪಿಡಿದು ಕೇಳಿದ ಶ್ರೀದತ್ತ | ಇಂತು ಕರುಣೆಯದು ಕೊನೆಗೆ ಬಂದಿತೇ ಪಾಲಿಸು ಪಾಲಿಸು ಶ್ರೀದತ್ತ ||೩||
ಆಲಿಸು ಕುವರನೆ ಶ್ರೀಗುರುಚರಿತೆಯ ಭವತಾರಕನವ ಶ್ರೀದತ್ತ | ತೇಲುವ ಎಲ್ಲವ ಹಸಿವನು ಹಿಂಗಿಸಿ ಹರುಷದಿ ಕಾಯುವ ಶ್ರೀದತ್ತ ||೪||
ಇವನೇ ದತ್ತನು ಅನಸೂಯಾತ್ಮಜ ವಿಶ್ವನಿಯಾಮಕ ಶ್ರೀದತ್ತ | ಭವತಿಯ ನೆವದಲಿ ವಿಪ್ರನ ಮಡದಿಗೆ ಸುತನಾದನು ತಾ ಶ್ರೀದತ್ತ ||೫||
ಶ್ರೀಪಾದ ಶ್ರೀವಲ್ಲಭ ನಾಮದಿ ಕುಲ ಉದ್ಧರಿಸಿದ ಶ್ರೀದತ್ತ | ಕಾಪಿಡೆ ನಡೆದನು ಭಾರತ ಜನವನು ಯಾತ್ರೆಯ ನೆವದಿಂ ಶ್ರೀದತ್ತ ||೬||
ತೀರ್ಥಕ್ಷೇತ್ರಗಳ ಸುತ್ತಿ ಪತಿತರನು ಪಾವನಗೊಳಿಸಿದ ಶ್ರೀದತ್ತ | ಸಾರ್ಥಕವಾದ ಗೋಕರ್ಣವ ನೋಡುತ ಕುರವದಿ ನಿಂತನು ಶ್ರೀದತ್ತ ||೭||
ಮಂದಮತಿ ಅಂಬಾಕುಮಾರನಿಗೆ ಜ್ಞಾನದಾತನು ಶ್ರೀದತ್ತ | ಮಂದವಾಸರದ ಪ್ರದೋಷ ಪೂಜೆಯ ಮಹಿಮೆಯ ಹೇಳಿದ ಶ್ರೀದತ್ತ ||೮||
ಅಗಸಗ ಮುಂದಣ ಜನುಮದಿ ರಾಜ್ಯದ ಭೋಗವನಿತ್ತನು ಶ್ರೀದತ್ತ | ಅಗಲದಂತಿರಲು ವಲ್ಲಭೇಶನ ಸಂಕಟ ಕಳೆದನು ಶ್ರೀದತ್ತ |೯||
ವಚನದಂತೆ ಅಂಬಾ ಮಾಧವರಿಗೆ ಬಾಲಕನಾದನು ಶ್ರೀದತ್ತ | ಉಚಿತಸಮಯ ಬರೆ ನಾಲ್ಕೂ ವೇದದ ಸಾರವ ಹೇಳಿದ ಶ್ರೀದತ್ತ ।।೧೦||
ಅವಳೀತನಯರ ತಾಯಿಗೆ ಕರುಣಿಸಿ ಕಾಶಿಗೆ ಬಂದನು ಶ್ರೀದತ್ತ | ನವಸಂವತ್ಸರವಿರೆ ಸನ್ಯಾಸವ ಸ್ವೀಕರಿಸಿದನು ಶ್ರೀದತ್ತ ||೧೧||
ಮೂವತ್ತಬುಧವ ದಾಟಿಬಂದು ತಾಯ್ತಂದೆಯ ನೋಡಿದ ಶ್ರೀದತ್ತ | ಆವುದನೆಲ್ಲವ ನೀಡಿ ಹರಸುತ ಪಯಣವ ಬೆಳೆಸಿದ ಶ್ರೀದತ್ತ ।।೧೨||
ಉದರಶೂಲೆಯ ವಿಪ್ರನ ಜನ್ಮವನುಳಿಸಿ ಕಾಯ್ದನು ಶ್ರೀದತ್ತ | ಮುದದಿ ಪೂಜಿಸುವ ಸತಿಪತಿಯರನು ಕಂಡು ನಲಿದನು ಶ್ರೀದತ್ತ ||೧೩||
ಸಾಯನದೇವನ ಸಾವನು ತಪ್ಪಿಸಿ ಯವನನಂಜಿಸಿದ ಶ್ರೀದತ್ತ | ಧೈಯ ಸಾಧನೆಗೆ ಯಾತ್ರೆಯ ಮಾಡಲು ಶಿಷ್ಯನ ಕಳುಹಿದ ಶ್ರೀದತ್ತ ||೧೪||
ಗುಪ್ತವಾಗಿರಲು ಗುರುನಿಂದಕನಿಗೆ ಬೋಧವ ಮಾಡಿದ ಶ್ರೀದತ್ತ | ಸುಪ್ತ ಚೇತನೆಯ ಚಾಲಿಪ ಶಕ್ತಿಯು ಗುರುವಿಗಿದೆಂದನು ಶ್ರೀದತ್ತ ||೧೫||
ದೇವಿಯ ಬಳಿಯಲಿ ನಾಲಿಗೆ ಕೊಯ್ದಗೆ ಮತಿಯ ಪಾಲಿಸಿದ ಶ್ರೀದತ್ತ ಭಾವದಿ ಭಿಕ್ಷೆಯ ನೀಡಿದ ವಿಪ್ರಗೆ ಸಂಚಿತ ತೋರಿದ ಶ್ರೀದತ್ತ |॥೧೬||
ಯೋಗಿನಿಯರ ಸಹವಾಸದಿ ಇರುವನು ನರಸಿಂಹ ಸರಸ್ವತಿ ಶ್ರೀದತ್ತ | ಸಾಗಿ ಶೋಧಿಸಿದ ಅಂಬಿಗರವನಿಗೆ ಗುಪಿತವ ಹೇಳಿದ ಶ್ರೀದತ್ತ ॥೧೭||
ಹರಕೆಯ ಕುವರನ ಹರಣವ ಬರೆಸಿದ ಔದುಂಬರದಿ ಶ್ರೀದತ್ತ | ಬರುತ ಅಮರಜಾ ಭೀಮಾ ಸಂಗಮ ಕ್ಷೇತ್ರದ ತಂಗಿದ ಶ್ರೀದತ್ತ ||೧೮||
ಬರಡೆಮ್ಮೆಯನು ಕರೆಯಿಸಿ ಜನರಿಗೆ ಕೌತುಕ ತೋರಿದ ಶ್ರೀದತ್ತ | ಹರುಷದಿ ಕರೆಯಲು ಗಾಣಗಾಪುರಕೆ ನೆಲೆಸಬಂದನಾ ಶ್ರೀದತ್ತ ||೧೯||
ದೂರಮಾಡಿದ ಬ್ರಹ್ಮರಾಕ್ಷಸನ ಕುಮಸಿಗೆ ನಡೆದನು ಶ್ರೀದತ್ತ ತೋರಿದ ತ್ರಿವಿಕ್ರಮ ಭಾರತಿಗೆ ವಿಶ್ವರೂಪವನು ಶ್ರೀದತ್ತ ||೨೦||
ವಾದಿಸಬಂದಿಹ ಸೊಕ್ಕಿದ ವಿಪ್ರರ ಗರ್ವವ ಕಳೆದನು ಶ್ರೀದತ್ತ | ವೇದದಸಾರ ನಿರೂಪಣ ಮಾಡುತ ಅದ್ಭುತ ಹೇಳಿದ ಶ್ರೀದತ್ತ ||೨೧||
ತಿಳಿಯದ ವಿಪ್ರರು ವಾದವ ಬೆಳೆಸಲು ಹೊಲೆಯನ ಕರೆದನು ಶ್ರೀದತ್ತ | ಬಳಿದು ಭಸ್ಮವ ಕೃಪೆಯನು ಮಾಡುತ ವಾದಿಸ ಹೇಳಿದ ಶ್ರೀದತ್ತ ||೨೨||
ಪಾಪಿಗಳಾಗಲೇ ಅಂಜಿ ನಡುಗಿದರು ಶಾಪವ ಕೊಟ್ಟನು ಶ್ರೀದತ್ತ | ಪಾಪ ಪುಣ್ಯದ ಸಂಚಿತ ಕರ್ಮದ ಫಲವನುಸುರಿದ ಶ್ರೀದತ್ತ ||೨೩||
ಭಸ್ಮ ಮಹಾತ್ಮಿಯ ತಿಳಿಹೇಳಿದನು ವಾಮದೇವನು ಶ್ರೀದತ್ತ | ವಿಸ್ಮಯಗೊಂಡಿಹ ರಾಕ್ಷಸ ಜನುಮಕೆ ಮೋಕ್ಷವನಿತ್ತನು ಶ್ರೀದತ್ತ ||೨೪||
ಸತಿಸಾವಿತ್ರಿಯ ಪತಿ ಮೃತನಾಗಲು ಅಳುವುದ ಕಂಡನು ಶ್ರೀದತ್ತ | ಸತಿಧರ್ಮದ ಇತಿಹಾಸವ ಹೇಳುತ ಸತಿ ಹೋಗೆಂದನು ಶ್ರೀದತ್ತ ||೨೫||
ಹೋಗುವ ಮುನ್ನ ಕ್ಷೇತ್ರಕ್ಕೆ ಬಂದ ಬಾಲೆಯ ಹರಸಿದ ಶ್ರೀದತ್ತ | ಹೋಗದು ಜೀವ ಎನ್ನಯ ನುಡಿಯಿದು ಮಂಗಳವೆಂದನು ಶ್ರೀದತ್ತ ||೨೬||
ಚೇತರಿಸಿತು ಶವ ಅಭಿಷಿತ ಜಲದಿಂ ಪ್ರೋಕ್ಷಣೆ ಮಾಡಲು ಶ್ರೀದತ್ತ | ಆತುರದಿಂ ದಂಪತಿಗಳು ಬಾಗಲು ಆಶೀರ್ವದಿಸಿದ ಶ್ರೀದತ್ತ ||೨೭|
ರುದ್ರಾಧ್ಯಾಯದ ರುದ್ರಾಕ್ಷಿಯ ಕಥೆ ಹೇಳಿದನವರಿಗೆ ಶ್ರೀದತ್ತ ಭದ್ರೆ ಸಿಮಂತಿನಿ ಮಾಡಿದ ಚಂದಿರವಾರದ ವ್ರತವನು ಶ್ರೀದತ್ತ ||೨೮||
ಬೆಳಗಿನಿಂದಲಿ ರಾತ್ರಿಯವರೆಗಿನ ವಿಹಿತಕರ್ಮವನು ಶ್ರೀದತ್ತ | ತಿಳಿಯಪಡಿಸಿದ ವಿಪ್ರನ ಮಡದಿಗೆ ಪರಾನ್ನದೋಷವ ಶ್ರೀದತ್ತ ॥೨೯||
ಮೂವರ ಭೋಜನ ಅಕ್ಷಯವಾಗಿಸಿ ದಾಸಗೊಲಿದನು ಶ್ರೀದತ್ತ | ಸಾವ ಸಮೀಪದ ಗಂಗಾಮಾತೆಗೆ ಮಕ್ಕಳಕೊಟ್ಟನು ಶ್ರೀದತ್ತ ॥೩೦||
ಒಣಮರ ಚಿಗುರಿಸಿ ನರಹರಿ ವಿಪ್ರನ ಕುಷ್ಣವ ಕಳೆದನು ಶ್ರೀದತ್ತ | ಅಣುಕದಿ ಅಂಜಿಕೆ ತೋರುತ ಶಿಷ್ಯನ ಪರೀಕ್ಷೆ ಮಾಡಿದ ಶ್ರೀದತ್ತ ||೩೧||
ಕಾಶೀಕ್ಷೇತ್ರದ ಮಹಿಮೆಯ ತೋರಿದ ಸಾಯನದೇವಗೆ ಶ್ರೀದತ್ತ | ತೋಷದೊಲವನು ಹಾಡುತಲೆಂದನು ಹರಿಹರ ಬ್ರಹ್ಮನು ಶ್ರೀದತ್ತ ||೩೨||
ಅನಂತನಾವ್ರತ ಮಹಿಮೆಯ ಹೇಳುತ ವ್ರತ ಮಾಡಿಸಿದನು ಶ್ರೀದತ್ತ ಅನಂತಕೋಟಿಯು ಅನಂತರೂಪನು ಅನಂತಮಹಿಮನು ಶ್ರೀದತ್ತ ||೩೩|
ನೇಕಾರಗೆ ಶ್ರೀಶೈಲದ ಯಾತ್ರೆಯ ಮಾಡಿಸಿದನು ತಾ ಶ್ರೀದತ್ತ ಸಾಕಾರದಿ ಶಿವರಾತ್ರಿ ಮಹಾತ್ಮಿಯ ಹೇಳಿದನಾತಗೆ ಶ್ರೀದತ್ತ ||೩೪||
ದೇವಿಯ ಭಕ್ತನ ಕುಷ್ಠ ನಿವಾರಿಸಿ ಜ್ಞಾನವಕೊಟ್ಟನು ಶ್ರೀದತ್ತ | ಕವಿಯಾದಾ ಕಶನರ್ಚಕನ ಶಿಷ್ಯನ ಮಾಡಿದ ಶ್ರೀದತ್ತ ||೩೫||
ಹಸುಳರೆಲ್ಲರನು ಮೆಚ್ಚಿಸಿ ಧರಿಸಿದ ಎಂಟು ರೂಪವನು ಶ್ರೀದತ್ತ ಕೃಷಿಕನ ಮೌನಾರ್ಚನೆಗೊಲಿದಿತ್ತನು ನೂರ್ಮಡಿ ಧಾನ್ಯವ ಶ್ರೀದತ್ತ ||೩೬|
ಪುರಜನರಿಂ ಸಹ ಸಕಲ ತೀರ್ಥಗಳ ಯಾತ್ರೆಯ ಮಾಡಿದ ಶ್ರೀದತ್ತ | ಪೂರ್ವಾಶ್ರಮದ ಭಗಿನಿಯ ಪಾಪಕ್ಷಾಲನೆ ಮಾಡಿದ ಶ್ರೀದತ್ತ ||೩೭||
ಹರುಷದಿ ಹೇಳಿದ ಗುರುಗೀತೆಯನು ನಾಮಧಾರಕಗೆ ಶ್ರೀದತ್ತ | ನೆರೆ ನಂಬುವರನು ಪರಿಪಾಲಿಸುವುದು ನಿಶ್ಚಿತವೆಂದನು ಶ್ರೀದತ್ತ ||೩೮||
ಯಾಕೋ ರಜಕಾ ಎನ್ನುತ ಯವನರ ರಾಜನ ಕರೆದನು ಶ್ರೀದತ್ತ | ಕಾಕುಗೊಂಡಿಹ ರಾಜನ ಮಂಡಿಯ ರೋಗವ ಕಳೆದನು ಶ್ರೀದತ್ತ ||೩೯||
ಯವನರ ಕಾಟಕೆ ಕದಳೀವನಕೆ ಹೋಗುವೆನೆಂದನು ಶ್ರೀದತ್ತ | ಅವಸರದಿಂ ಬಲು ಶೋಕಿಸಬೇಡಿರಿ ಇಲ್ಲಿ ಹೆನೆಂದನು ಶ್ರೀದತ್ತ ||೪೦||
ಹಾಡಿರಿ ಹಾಡಿರಿ ಮತ್ತು ಆರತಿ ಮಾಡಿರಿ ಎಂದನು ಶ್ರೀದತ್ತ | ಬೇಡಿದ ವರವನು ಕೊಡುವೆನು ಭಾವಿಕ ಜನರಿಗೆ ಸತ್ಯವಿದೆಂದನು ಶ್ರೀದತ್ತ ||೪೧|
ಅತಿ ಸಂಕ್ಷೇಪದ ಈ ಗುರುಚರಿತೆಯ ದಿನವೂ ಹಾಡುವ ಕೇಳ್ವರಿಗೆ | ಅತಿ ಆನಂದವು ಮೇಣ್ ಸುಖಸಂಪದ ಪಾಲಿಸುವನು ತಾ ಶ್ರೀದತ್ತ ||೪೨||
ಮಂದಮತಿ ನಾ ತೊದಲ್ನುಡಿಯಿಂದಲಿ ಹಾಡಿದೆನಿದನು ಶ್ರೀದತ್ತ | ವಂದಿಸುತಲಿ ನಾ ಅರ್ಚನೆ ಮಾಡುವೆ ನಿನ್ನಡಿಗಳಿಗೆ ಶ್ರೀದತ್ತ ।।೪೩||
ಮಂಗಳ ಮಂಗಳ ನಿತ್ಯಸುಮಂಗಳ ಮಂಗಳಮಯ ಶ್ರೀದತ್ತ | ಗಂಗೆಮಾಳಾಂಬಿಕೆಕಾಂತಸ್ವರೂಪನು ಸಚ್ಚಿದಾನಂದಮಯ ಶ್ರೀದತ್ತ ||೪೪||
ಸಿದ್ಧಾಂತ ಅವಧೂತ ಚಿಂತನ ಶ್ರೀ ಗುರುದೇವದತ್ತ || ಶ್ರೀಕೃಷ್ಣಾರ್ಪಣಮಸ್ತು |
ಶ್ರೀ ಕೃಷ್ಣಾರ್ಪಣಮಸ್ತು
ಆಶಾ ನಾಗಭೂಷಣ.

Опубликовано:

 

21 фев 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 29   
@lakshmis579
@lakshmis579 Месяц назад
Tumba chennagide sister i v chant
@sangeetha6704
@sangeetha6704 2 месяца назад
🙏🙏🙏
@bhagyammaln9353
@bhagyammaln9353 4 месяца назад
ತುಂಬಾ ಚೆನ್ನಾಗಿದೆ ನಿಮ್ಮ ಸ್ವರ 🌹 ಪಾರಾಯಣ ಮಾಡಲು ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು ನಿಮ್ಮ ಸ್ವರಕ್ಕೆ ನಾಯಿ ಶಬ್ದ ಭಗವಂತನ ಆಶೀರ್ವಾದ ದತ್ತಾತ್ರೇಯ ಸವಾರಿ 💐ತುಂಬಾ ಸಂತೋಷ ಆಯಿತು👌🙏🌹🌹🙏👌🙏🙏🙏💐 ಜೈ ಗುರುದೇವ ದತ್ತ 🙏💐🙏
@kumarlakshmi4800
@kumarlakshmi4800 4 месяца назад
ಓಂ ಶ್ರೀ ಗುರು ದತ್ತಾತ್ರೇಯ ನಮೋಸ್ತುತೇ ನಮೋ ನಮಃ 🙏🙏🙏🙏🌹🙏🙏🌹🌹🌹🌹🌹🙏🙏🙏🌹🌹🙏🌹🌹
@sunandabinkadakatti4060
@sunandabinkadakatti4060 4 месяца назад
❤❤❤❤❤
@user-tn7yy5xl7i
@user-tn7yy5xl7i 4 месяца назад
Thumba channagide ಮೇಡಂ
@sumathihr3122
@sumathihr3122 4 месяца назад
ತುಂಬಾ ಚೆನ್ನಾಗಿದೆ
@vijayavani1499
@vijayavani1499 4 месяца назад
Thanks amma
@appletreeproduction44
@appletreeproduction44 4 месяца назад
🙏🏻🙏🏻💐💐
@geetagk7839
@geetagk7839 4 месяца назад
Thank u so much 🙏🙏
@geethan3200
@geethan3200 4 месяца назад
Thank u so much..
@sathyanayak1045
@sathyanayak1045 4 месяца назад
thank u very much nannu kuda yelidhe
@sgg4941
@sgg4941 4 месяца назад
🙏🙏
@yashodagj8792
@yashodagj8792 4 месяца назад
🙏🙏🙏nim voice. Thumbaa ne chennagide estu chennagi helteera god gift thank s 🙏🙏🙏
@PARIMALACHARYA
@PARIMALACHARYA 4 месяца назад
🙏🏻
@jayaprakashr799
@jayaprakashr799 4 месяца назад
Sri ragavendra🙏🙏🙏
@raghavendrats8204
@raghavendrats8204 4 месяца назад
Super
@SharadhaMogaveera-ne3vk
@SharadhaMogaveera-ne3vk 4 месяца назад
❤❤❤❤🙏🙏💐💐🙏💐💐🙏💐🙏
@sharadat4327
@sharadat4327 4 месяца назад
ಜೈ ಶ್ರೀರಾಮ್ ವೀಣಾ ಅವರೇ ನೀವು ಕ್ಷಮೆ ಕೇಳಬೇಡಿ ದಯಮಾಡಿ ನೀವು ಬಹಳ ಶ್ರಮವಹಿಸಿ ಶ್ಲೋಕಗಳನ್ನು ಮತ್ತು ಗುರುಚರಿತ್ರೆಯನ್ನು ನಿಮ್ಮ ಕಂಚಿನ ಕಂಠದಿಂದ ಕೇಳಿಸಿದ್ದಕ್ಕೆ ಧನ್ಯವಾದಗಳು 14:51
@PARIMALACHARYA
@PARIMALACHARYA 4 месяца назад
🙏🏻
@bhoomikayj2121
@bhoomikayj2121 4 месяца назад
Akka nan nimmella video nodidini akka Nanu ivattige 9 dinadinda mudupu anustana madtidde ivattige ombattu dina anytu 10 ne dinakke aa mudupuli iro kanikena yardru badavarge kodbekittala adu nalege 10 day agatte adre nan ivattu. Dharmastala hogta idini aka so adna allinda bandu kododa or nanjotene tagondogi alle nale kodla akka please heli yakandre nan barodu innu Monday agtte so en madodu ille ittodre sarina or tagondogla dayvittu heli
@sathyanayak1045
@sathyanayak1045 4 месяца назад
ma'm nemma voice yavagalu soooper muddmuddagide
@PARIMALACHARYA
@PARIMALACHARYA 4 месяца назад
🙏🏻🥰
@roopamurthy4449
@roopamurthy4449 4 месяца назад
Can we get this book tq mam
@divyashree5429
@divyashree5429 4 месяца назад
Nav shloka galannu kelsa madovaga helta or kelta madbahuda .. ila yela shloka galannu devar yedurige helbeka
@PARIMALACHARYA
@PARIMALACHARYA 4 месяца назад
👍🏻
@divyashree5429
@divyashree5429 4 месяца назад
@@PARIMALACHARYA tq
Далее
小天使和小丑离家出走#short #angel #clown
00:36
Only you are left😭I beg you to do this🙏❓
00:19
Sri Shakambari Sahasranama Stothram
35:48
Просмотров 394 тыс.
Gajendra Moksha | Sri Vadirajaru
16:27
Просмотров 3 млн