ಸರ್ ನಿಮಗೆ ಎಷ್ಟು ಧನ್ಯವಾದಗಳನ್ನ ಹೇಳಿದರೂ ಸಾಲದು ಸರ್ ಕಾರಣ ನನಗೆ ಮೆಂಟಲ್ ಎಬಿಲಿಟಿ ಕಲಿಯೋಕೆ ಪ್ರಯತ್ನ ಮಾಡಿದಾಗ ಬೇರೆ ವಿಡಿಯೋ ಗಳು ಅಷ್ಟು ಅರ್ಥವಾಗದೇ ಗೊಂದಲವಾಗ್ತಿತ್ತು.ಆದರೆ ನಿಮ್ಮ ವೀಡಿಯೋಗಳನ್ನು ನೋಡಿ ಕಲಿಯುವಾಗ ನೀರು ಕುಡಿಯುವಷ್ಟು ಸುಲಭವಾಗುತ್ತಿದೆ.ನಿಜವಾಗಲೂ ನಿಮ್ಮ ವಿದ್ಯಾಭಿಕ್ಷೆಗೆ ನಾನು ಚಿರರುಣಿ ಸರ್.ಧನ್ಯವಾದಗಳು
ಸರ್, ಮೊದಲಿಗೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಸರ್. ಏಕೆಂದರೆ ನೀವು ಯೂಟ್ಯೂಬ್ ನಲ್ಲಿ ಹೇಳುತ್ತಿರುವ ಪ್ರತಿ ತರಗತಿಯೂ ಮುಖ್ಯ ವಾಗಿವೆ. ಸರ್ ಅದರಲ್ಲೂ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಮಾನಸಿಕ ಸಾಮರ್ಥ್ಯ ಕ್ಕೆ ಸಂಬಂಧಿಸಿದ ಎಲ್ಲಾ ತರಗತಿಗಳು ಅತಿ ಮುಖ್ಯವಾಗಿದೆ. ನಮ್ಮಂತಹ ಅನೇಕ ಗ್ರಾಮೀಣ ಪ್ರದೇಶದ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಾಗಿರುವುದರಿಂದ ಬಹಳಷ್ಟು ಕಠಿಣವಾಗಿದ್ದವು.ಆದರೆ ನೀವು ಹೇಳಿದ ತರಗತಿಗಳಿಗೆ ಅವುಗಳೆಲ್ಲವೂ ಅತ್ಯಂತ ಸರಳವಾಗಿ ಮತ್ತು ಸುಲಭವಾಗಿ ಅರ್ಥವಾಗುತ್ತಿವೆ ಮತ್ತು ಬೇಗ ವಾಗಿ ಮಾಡಲು ಸಾಧ್ಯವಾಗುತ್ತಿದೆ. ನೀವು ವಿದ್ಯಾರ್ಥಿಗಳ ಪರೀಕ್ಷೆಯನ್ನು ದೃಷ್ಟಿಯಲ್ಲಿ ಇಟ್ಟು ಕೊಂಡು ನೀವು ಬೇಗ ಬೇಗ ತರಗತಿಗಳನ್ನು ಹೇಳಿದ್ದಿರಿ ಹಾಗಾಗಿ ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ನಿಮಗೆ ಅನಂತ ಅನಂತ ಧನ್ಯವಾದಗಳು ಸರ್. ಮತ್ತೊಂದು ಕಾರಣಕ್ಕಾಗಿಯೂ ಧನ್ಯವಾದಗಳು ಹೇಳಲೇಬೇಕು ಸರ್ ಏಕೆಂದರೆ ತರಗತಿಗಳನ್ನುಹೇಳುವಾಗ ಕೆಲವು ಮುಖ್ಯ ಅಂಶಗಳನ್ನು ಕನ್ನಡದ ಜೊತೆಗೆ ಇಂಗ್ಲಿಷ್ ನಲ್ಲಿಯೂ ಹೇಳಿದ್ದಿರಿ. ಹಾಗಾಗಿ ಪರೀಕ್ಷೆಗಳನ್ನು ಸುಲಭವಾಗಿ ಇಂಗ್ಲಿಷ್ ಪದಗಳನ್ನು ಗುರ್ತಿಸಲು ಸಾಧ್ಯವಾಗಿದೆ. ಉದಾಹರಣೆಗೆ ನಿನ್ನೆ ನಡೆದ ಪೊಲೀಸ್ ಕಾನ್ಸಟೇಬಲ್ ಪರೀಕ್ಷೆಯಲ್ಲಿ ಕಾನ್ವೇಕ್ಸ, ಕಾನಕ್ಲೇವ್ ಮಿರರ್ ಪ್ರಶ್ನೆ, ಸಿಟಿಜನ್ಶಿಪ ಪ್ರಶ್ನೆ ಮುಂತಾದ ಹಲವು ಪ್ರಶ್ನೆಗಳು ಬಂದಿದವು ಸರ್.ಹಾಗಾಗಿ ಮತ್ತೊಮ್ಮೆ ಧನ್ಯವಾದಗಳು ಸರ್. ಇನ್ನು ವಿಜ್ಞಾನಕ್ಕೆ ಸಂಬಂಧ ಪಟ್ಟ ಮುಖ್ಯ ತರಗತಿಗಳನ್ನು ಮಾಡಿ ಸರ್.