Sree #ShivaStuti by Sri #Narayana Panditacharya is one of 5 important stutis of #Madhwa philosophy.
ಶ್ರೀ ನಾರಾಯಣಪಂಡಿತರು ಆಚಾರ್ಯ ಶ್ರೀ #ಮಧ್ವಾಚಾರ್ಯ ರ ಸಾಕ್ಷಾತ್ ಶಿಷ್ಯರು. ಅವರೊಮ್ಮೆ ದಕ್ಷಿಣ ಯಾತ್ರೆಯಲ್ಲಿ ಶ್ರೀ ರಾಮೇಶ್ವರನ ದರ್ಶನಕ್ಕೆ ಹೋಗಿದ್ದಾಗ ಗುಡಿಯ ಬಾಗಿಲು ಮುಚ್ಚಿರಲು ಅಲ್ಲಿಯೇ ನಿಂತು ದರ್ಶನಾರ್ತರಾಗಿ ಈ ರುದ್ರದೇವರ ಸ್ತುತಿಯನ್ನು ರಚಿಸಿದಾಗ ಬಾಗಿಲು ತೆರೆದು ಶಿವದರ್ಶನ ದೊರೆಯಿತು ಎಂದು ಐತಿಹ್ಯ.
ವೈಷ್ಣವ ಸಂಪ್ರದಾಯಗಳಲ್ಲಿ ರುದ್ರದೇವರ ಸ್ತುತಿ ಮಾಡಲ್ಪಟ್ಟ ಕೃತಿಗಳು ವಿರಳ, ಅವೆಲ್ಲವುಗಳಲ್ಲಿ ಇದು ಅರ್ಥ, ಶೈಲಿಗಳಲ್ಲಿ ಅತಿವಿಶಿಷ್ಟ. #ಸ್ತುತಿಪಂಚಕ ಗಳಲ್ಲೊಂದಾದ ಈ ಶಿವತತ್ತ್ವದ ಸ್ತುತಿ ಮಾಡಲಾಗಿ, ಸಮಸ್ತ ಮಂಗಳಗಳು ಉಂಟಾಗಿ, ಅಮಂಗಳಗಳ ನಿವಾರಣೆಯಾಗಿ, ಜ್ಞಾನ-ಭಕ್ತಿ-ವೈರಾಗ್ಯ ಪ್ರಾಪ್ತಿಯಾಗುವುದು...
14 окт 2024