Тёмный

ಬೆಂಗಳೂರು ಸಮೀಪ ಜಾಗತಿಕ ಮಟ್ಟದ  

M B Patil
Подписаться 3,3 тыс.
Просмотров 195
50% 1

ಜಾಗತಿಕ ದರ್ಜೆಯ ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನಾ ನಗರವಾದ ಕೆಎಚ್ಐಆರ್ ಸಿಟಿ ಅನ್ನು ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಉತ್ಸುಕವಾಗಿದೆ. ಈ ಯೋಜನೆಗಾಗಿ ಸುಮಾರು 40 ಸಾವಿರ ಕೋಟಿ ರೂಪಾಯಿ ಹೂಡಿಕೆಯನ್ನು ಮಾಡಲಾಗುತ್ತದೆ. 80ರಿಂದ 1ಲಕ್ಷ ಉದ್ಯೋಗಗಳ ಸೃಷ್ಟಿಯನ್ನು ಕೂಡಾ ಮಾಡಲಾಗುತ್ತದೆ.ರಾಜ್ಯ ಜೆಡಿಪಿಗೆ 4-5% ಹೆಚ್ಚುವರಿಯಾಗಿ ದೊರೆತು ರೂ. 1 ಲಕ್ಷ ಕೋಟಿ ಹರಿದು ಬರಲಿದೆ ಎಂಬ ನಿರೀಕ್ಷೆಗಳಿವೆ.
2 ಸಾವಿರ ಎಕರೆ ವಿಸ್ತೀರ್ಣ, ಮೊದಲ ಹಂತದಲ್ಲಿ ಸಾವಿರ ಎಕರೆಯಲ್ಲಿ ಸಾಕಾರವಾಗಲಿದೆ. ಹಿಂದಿನಿಂದಲೂ ರಾಜ್ಯವು ಕೈಗಾರಿಕಾವಲಯದಲ್ಲಿ ಹೊಸತನವನ್ನು ಅಳವಡಿಸಿಕೊಳ್ಳುತ್ತಲೇ ಬಂದಿದೆ.
ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣ, ಐಟಿಪಿಎಲ್‌ಗಳನ್ನು ಉಲ್ಲೇಖಿಸಬಹುದು. ಈಗ ಉದ್ದೇಶಿತ ಕೆಎಚ್‌ಐಆರ್‌ ಸಿಟಿ ರಾಜಧಾನಿಯಿಂದ 60-80 ಕಿ.ಮೀ. ದೂರದಲ್ಲಿಯೇ ನಿರ್ಮಾಣವಾಗಲಿದೆ
ಕೆಎಚ್‌ಐಆರ್ ಕಿರ್ ಸಿಟಿಯಲ್ಲಿ ಏನಿರಲಿದೆ?
ಸಿಂಗಾಪುರದ ಬಯೋಪೊಲಿಸ್ ಕ್ಲಸ್ಟರ್ ಮತ್ತು ಜಪಾನ್‌ನ ಕೋಬ್ ಬಯೋಮೆಡಿಕಲ್ ಇನ್ನೋವೇಶನ್ ಕ್ಲಸ್ಟರ್ ಮಾದರಿಯಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿ ಈ ಕೆಎಚ್ಐಆರ್‌ ಸಿಟಿಯನ್ನು ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ.
"ಭೂ ಗುತ್ತಿಗೆ ಮಾದರಿಗಳು, ವಿಶೇಷ ಯೋಜನೆಗಳು ಮತ್ತು ಸಂಪೂರ್ಣ ಖಾಸಗಿ ಮಾದರಿಗಳ ಮೂಲಕ ಕರ್ನಾಟಕವು ಖಾಸಗಿ ಕಂಪನಿಗಳ ಭಾಗವಹಿಸುವಿಕೆ ವಿಚಾರದಲ್ಲಿ ಫ್ಲೆಕ್ಸಿಬಲ್ ಆಗಿದೆ. ಉದ್ಯೋಗ ಸೃಷ್ಟಿಯನ್ನು ಖಾತ್ರಿಪಡಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
"ಪ್ರಮುಖ ಜಾಗತಿಕ ಮತ್ತು ಭಾರತೀಯ ಆಸ್ಪತ್ರೆಗಳು, ಸಂಶೋಧನಾ ಕೇಂದ್ರಗಳು, ವಿಶ್ವವಿದ್ಯಾನಿಲಯಗಳು ಮತ್ತು ಖಾಸಗಿ ಕಂಪನಿಗಳಿಂದ ಹೂಡಿಕೆಗಳನ್ನು ಪಡೆಯುವುದು, ಆರ್ಥಿಕ ಚಟುವಟಿಕೆ ಹೆಚ್ಚಿಸಿ ರಾಜ್ಯದ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಕೊಡುಗೆ ಹೆಚ್ಚಿಸುವ ಸಾಮರ್ಥ್ಯವನ್ನು ಈ ಯೋಜನೆ ಹೊಂದಿದೆ. ಹೂಡಿಕೆಗಳನ್ನು ಆಕರ್ಷಿಸುವುದರ ಜೊತೆಗೆ, ರಾಜ್ಯ ಜಿಡಿಪಿಗೆ ಕನಿಷ್ಠ 1 ಲಕ್ಷ ಕೋಟಿ ರೂಪಾಯಿ ಕೊಡುಗೆ ನೀಡುವ ಗುರಿ ಹೊಂದಿದೆ.
"ಬೆಂಗಳೂರು ಭಾರತದಲ್ಲಿಯೇ ಅತಿ ಹೆಚ್ಚು ನುರಿತರನ್ನು, ಪ್ರತಿಭಾನ್ವಿತರನ್ನು ಹೊಂದಿದೆ. ಕೆಎಚ್‌ಐಆರ್ ಸಿಟಿಯ ಅಭಿವೃದ್ಧಿಗೆ ಸೂಕ್ತವಾಗಿದೆ. ಕರ್ನಾಟಕವು ಇಲ್ಲಿ ಸ್ಥಾಪಿಸಲಾದ ಅನೇಕ ಜಾಗತಿಕ ಕಂಪನಿಗಳ ಆರ್ & ಡಿ ಘಟಕಗಳೊಂದಿಗೆ ಉತ್ತಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಭಾರತದ ಸುಮಾರು ಶೇಕಡ 60 ರಷ್ಟು ಜೈವಿಕ ತಂತ್ರಜ್ಞಾನ ಕಂಪನಿಗಳು ಕರ್ನಾಟಕದಲ್ಲಿವೆ," ಎಂಬುದು ಡಾ. ಎಂ.ಬಿ. ಪಾಟೀಲರ ಅಭಿಪ್ರಾಯವಾಗಿದೆ.
"ಕೆಎಚ್‌ಐಆರ್ ಸಿಟಿ ಅತ್ಯಾಧುನಿಕ ಜ್ಞಾನ ಸಂಸ್ಥೆಗಳು, ಆರೋಗ್ಯ ಸೌಲಭ್ಯಗಳು, ಇನೋವಿಟಿವ್ ಹಬ್‌, ಸಂಶೋಧನಾ ಕೇಂದ್ರಗಳ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ನಗರದ ಜಾಗತಿಕ ಸ್ಥಾನವನ್ನು ಹೆಚ್ಚಿಸಲು ಸಿದ್ಧವಾಗಿದೆ. ಕರ್ನಾಟಕವು ಈಗಾಗಲೇ ಆರ್ಥಿಕ ಮೌಲ್ಯದ ದೃಷ್ಟಿಯಿಂದ ಭಾರತದ ಅಗ್ರ ಐದು ರಾಜ್ಯಗಳಲ್ಲಿ ಒಂದಾಗಿದೆ. ಈ ಯೋಜನೆ ದೇಶದಲ್ಲೇ ರಾಜ್ಯದ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತವೆ” ಎನ್ನುತ್ತಾರೆ.
ಶೀಘ್ರ ಕಿರ್ ಸಿಟಿ ಸಾಕಾರವಾಗಲಿ. ಉದ್ಯೋಗ ಸೃಷ್ಟಿಯಾಗಲಿ, ರಾಜ್ಯ ಸರ್ವಾಂಗೀಣ ಪ್ರಗತಿಯನ್ನು ಸಾಧಿಸಲಿ ಎಂಬುದೇ ಎಲ್ಲರ ಅಪೇಕ್ಷೆಯಾಗಿದೆ.

Опубликовано:

 

19 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1   
@MohanKumar-ev3cj
@MohanKumar-ev3cj 9 месяцев назад
MB patilll🎉🎉🎉🙏🙏🙏🙏🙏💐💐 is doing good job as minister
Далее