ತೂಗಿರೆ ರಾಯರ ತೂಗಿರೆ ಗುರುಗಳ ತೂಗಿರೆ ಯತಿಕುಲ ತಿಲಕರ
ತೂಗಿರೆ ಯೋಗಿಂದ್ರ ಕರಕಮಲ ಪೂಜ್ಯರ ತೂಗಿರೆ ಗುರು ರಾಘವೇಂದ್ರರ||
ಕುಂದಣಮಯವಾದ ಚಂದದ ತೊಟ್ಟಿಲದೊಳ್ ಅಂದದಿ ಮಲಗ್ಯಾರೆ ತೂಗಿರೆ
ನಂದಾನಕಂದ ಮುಕುಂದ ಗೋವಿಂದನ ಆನಂದದಿ ಭಜಿಪರ ತೂಗಿರೆ 1
ಯೋಗಾನಿದ್ರೆಯನ್ನು ಬೇಗನೆ ಮಾಡುವ ಯೋಗೀಶವಂದ್ಯರ ತೂಗಿರೆ
ಭೋಗೀಶಯನನ ಪಾದ ಯೋಗದಿ ಭಜಿಪರ ಭಾಗವತರನ್ನ ತೂಗಿರೆ 2
ನೇಮದಿ ತನ್ನನ್ನು ಕಾಮಿಪ ಜನರಿಗೆ ಕಾಮಿತ ಕೊಡುವವರ ತೂಗಿರೆ
ಪ್ರೇಮದಿ ನಿಜಜನರ ಆಮಾಯವನುಕೂಲ ಧೂಮಕೇತುವೆನಿಪರ ತೂಗಿರೆ 3
ಭಜಕಜನರು ತಮ್ಮ ಭಜನೆಯ ಮಾಡಲುನಿಜಗತಿಯಿಪ್ಪರ ತೂಗಿರೆ
ನಿಜಗುರುಜಗನ್ನಾಥ ವಿಠಲನ ಪದಕಂಜ ಭಜನೆಯ ಮಾಳ್ಪರ ತೂಗಿರೆ 4
*********
17 апр 2021