Тёмный

ಮನೆತನಕ್ಕೆ ದಾರಿದ್ರ್ಯಬರಲು ಶಾಪ ಇರುತ್ತೆ ಇಷ್ಟು ಮಾಡಿ ಕಳೆದುಕೊಳ್ಳಿ ಒಂದು ಮುಷ್ಟಿ ಅವಲಕ್ಕಿ ಸುಧಾಮನ ಕಥೆ ಇಷ್ಟೇ 

Veena Joshi
Подписаться 276 тыс.
Просмотров 40 тыс.
50% 1

#ಸುಧಾಮನ_ಹಾಡು
ಪತಿಯ ಪಾದಕ್ಕೆರಗಿ ಮತಿ ಬೇಡಿ ಪಾರ್ವತಿ | ಸುತಗೆ
ವಂದನೆಯ ಮಾಡಿದಳು ||
ಅತಿ ಭಕ್ತಿಯಿಂದಲಿ ಸ್ತುತಿಸುವ ಜನರಿಗೆ ಸ- |
ದ್ಗತಿಯಾಗಲೆನುತ ಪೇಳಿದಳು || ೧ ||
ಸುಧಾಮನೆಂಬೋರ್ವ ಸೂಕ್ಷ್ಮದ ಬ್ರಾಹ್ಮಣ |
ಹೊದಿಯಲಿಕ್ಕಿಲ್ಲ ಆಶನವಿಲ್ಲ ||
ಗದಗದ ನಡುಗುತ ಮಧುರ ಮಾತಾಡುತ |
ಸದನದೊಳಿರುತಿದ್ದನಾಗ || ೨ ||
ಪ್ರಾತಃ ಕಾಲದಲ್ಲೆದ್ದು ನಿತ್ಯ ಕರ್ಮವ ಮುಗಿಸಿ | ನಾಥನ
ಧ್ಯಾನ ಮಾಡುತಲಿ ||
ಪಾತ್ರರ ಮನೆಗ್ಹೋಗಿ ಯಾಚನೆಗಳ ಮಾಡಿ | ಗ್ರಾಸ
ತರುವನು ಮುಷ್ಟಿ ತುಂಬ || ೩ ||
ಪತಿವೃತೆ ಹೆಂಡತಿ ಪತಿ ತಂದದ್ದೆ ಸಾಕೆಂದು | ಹಿತದಿಂದ
ಪಾಕ ಮಾಡುವಳು ||
ಅತಿ ಭಕ್ತಿಯಿಂದಲಿ ಪತಿಗೆ ಭೋಜನ ಬಡಿಸಿ | ಮತಿವಂತಿ
ಉಳಿದದ್ದುಂಬುವಳು || ೪ ||
ಹಸಿವೆ ತೃಷೆಗಳಿಂದ ಅತಿಕ್ಲೇಶವಾಗಿದ್ದು | ಪತಿಕೂಡೆ
ಮಾತನಾಡಿದಳು ||
ಗತಿಯೇನು ನಮಗಿನ್ನು ಹಿತದವರ‍್ಯಾರಿಲ್ಲ ಸ- |
ದ್ಗತಿಯೇನೆನುತ ಪೇಳಿದಳು || ೫ ||
ಪೊಡವಿಯೊಳಗೆ ನಿಮ್ಮ ಒಡಹುಟ್ಟಿದವರಿಲ್ಲೆ | ಒಡನೆ
ಆಡಿದ ಗೆಳೆಯರಿಲ್ಲೆ ||
ಕರೆದು ಕೂಡಿಸಿಕೊಂಡು ಬಿರುಸು ಮಾತ್ಹೆಳುವ | ಹಿರಿಯರು
ದಾರಿಲ್ಲೆ ನಿಮಗೆ || ೬ ||
ಚಿಕ್ಕಂದಿಲ್ಲೋದಿಲ್ಲೆ ಹೆತ್ತವರ‍್ಹೆಳಿಲ್ಲೆ | ಉತ್ತಮ ಗುರುಗೋಳಿಲ್ಲೆನು
||
ಹೊತ್ತು ವೇಳೆಗಾಗೋ ಮಿತ್ರರು ಯಾರಿಲ್ಲೆ ಮತ್ತೆ ಕೇಳಿದಳು
ಕ್ಲೇಶದಲಿ || ೭ ||
ಮಡದಿ ಮಾತನು ಕೇಳಿ ಮನದಲಿ ಯೋಚಿಸಿ |
ಹುಡುಗನಾಗಿರಲಿಕ್ಕೆ ಹೋಗಿ ||
ಗುರುಕುಲ ವಾಸದಲಿ ಹರಿ ನಾವು ಓದಿದ್ದು | ಹರಿ ಹೊರ್ತು
ಮತ್ತೊಬ್ಬರಿಲ್ಲಾ || ೮ ||
ಇನ್ನೊಬ್ಬರೇತಕೆ ಅನ್ಯರಪೇಕ್ಷೇಕೆ | ಮನ್ನಿಸಿ ಹೋಗಿ
ಬರ‍್ರೆಂದಳು ||
ಇನ್ನೇನು ಕೊಡತಿಯೆ ಹರಿ ಮುಂದೆ ಇಡಲಿಕ್ಕೆ | ಚೆನ್ನಾಗಿ
ಕೇಳಿದನಾಗ || ೯ ||
ಗಾಬರಿಯಾದಳು ಸಾಗಿ ತಾ ನಡೆದಳು | ಬೇಗ ತಂದಳು
ಅವಲಕ್ಕಿ ||
ಬಾಗಿ ವಸ್ತ್ರದೊಳು ಬೇಗ ಕಟ್ಟಿಕೊಟ್ಟು | ಹೋಗಿ ಬರ‍್ರೆನುತ
ಪೇಳಿದಳು || ೧೦ ||
ಅಂಗಳವನು ಬಿಟ್ಟು ಮುಂದಕೆ ಬಂದನು | ಹಂಗ
ಹಾರುವುದು ಎಡಕೆ ||
ಮಂಗಳವಾಗುವುದು ರಂಗನ ದರುಶನ |
ಸಂದೇಹವಿಲ್ಲದಾಗುವುದು || ೧೧ ||
ಬಾಗಿಲವನು ಬಿಟ್ಟು ಸಾಗಿ ಮುಂದಕೆ ಬರಲು | ಕಾಗಿ
ಹಾರ‍್ಹೋದವು ಬಲಕೆ ||
ಆಗುವುದು ನಮಗಿನ್ನು ಆಗುವುದು ಶುಭ ಚಿನ್ಹ |
ಆಗುವುದು ಹರಿ ಕೃಪೆಯಿಂದ || ೧೨ ||
ಹೀಗೆಂದ ಬ್ರಾಹ್ಮಣ ಮುಂದಕೆ ನಡೆದನು | ಕಂಡನು
ಕಮಲ ಪುಷ್ಪಗಳ ||
ರಂಗನ ಹೆಂಡರಿಗೆ ಹೆರಳಿಗೆ ಬೇಕೆಂದು |
ತೆಗೆದುಕೊಂಡನು ಕಮಲ ಪುಷ್ಪಗಳ || ೧೩ ||
ಹರಿಯುವ ಜಲವೆಲ್ಲ ಹರಿಯಭಿಷೇಕವೆಂ- | ದ್ಹರುಷದಲಿ
ತುಂಬಿಕೊಂಡು ||
ಕರದಲ್ಲಿ ಹಿಡಕೊಂಡು ಪುರದ ಬಾಗಿಲ ಮುಂದೆ | ಹರಿ
ಹ್ಯಾಗೆ ದೊರಕುವ ನೆಂದ || ೧೪ ||
ನಿಂತನು ಬ್ರಾಹ್ಮಣನ ಅನಂತ ರೂಪದಿ ಧ್ಯಾನ | ಅಂತ
ರಂಗದಲಿ ಮಾಡುತಲಿ ||
ಸಂತೋಷದಿಂದಲಿ ಧರಿಸಿದ ದಶರೂಪ- |ದಿಂದ
ಬಂದೆನ್ನ ಕಾಯೆಂದ || ೧೫ ||
ಹರಕು ವಸ್ತ್ರವನುಟ್ಟು ಹರಿ ಧ್ಯಾನ ಮಾಡುವ | ವಿಪ್ರನ
ಕಂಡು ಚಾರಕರು ||
ಬರಬೇಡಿರೊಳಗೆ ಹಿರಿಯರಪ್ಪಣೆಯಿಲ್ಲ | ತಿರುಗಿ ಹೋಗೆನುತ
ಹೇಳಿದರು || ೧೬ ||
ಅಂದ ಮಾತನು ಕೇಳಿ ಅಂಜಿದ ಬ್ರಾಹ್ಮಣ |
ಇಂದಿರಾರಮಣಗ್ಹೇಳೆಂದ ||
ಹೆಸರು ಸುಧಾಮನಂತೆ ಹಸಿದು ಬಂದಾರೆಂದು |
ವಸುದೇವ ತನಯಗ್ಹೇಳಿದರು || ೧೭ ||
ಕೇಳಿದ ಹರಿಯೆದ್ದು ಬಹಳ ಹರುಷದಿಂದ | ಬೇಗನೆ
ಕರೆತನ್ನಿರವನ ||
ಹೋಗು ಹೋಗೆಂದರೆ ಸಾಗಿ ಮುಂದಕೆ ಬರಲು | ಬಾಗಿಲಿಗೆ
ಬಂದ ಸುಧಾಮ || ೧೮ ||
ಬಂದ ಭಕ್ತನ ನೋಡಿ ಆನಂದದಿಂದೆದ್ದು | ವಂದಿಸಿ
ಆಸನವ ಹಾಕಿದರು ||
ಚಂದದಿಂದಲಿ ಕರವ ಹಿಡಿದು ಮಾತಾಡುತ | ಬಂದ
ಕಾರಣವ ಕೇಳಿದರು || ೧೯ ||
ಮಂದಗಮನೆ ಸಹಿತ ತಂದ ಉದಕದಿಂದ |
ಚಂದದಿಂದಲಿ ಪಾದ ತೊಳೆದು ||
ಗಂಧ ಕೇಶರ ಹಚ್ಚಿ ಚೆಂದ ಚಾಮರದಿಂದ | ಅಂದದಿ
ಗಾಳಿ ಬೀಸಿದರು || ೨೦ ||
ಹಸಿದು ಬಂದಾರೆಂದು ಹಸಿವೆಗೆ ತಕ್ಕಂಥ | ಹಸನಾದ
ಹಣ್ಣು ಸಕ್ಕರೆಯು ||
ಕುಸುಮ ನಾಭನು ತಾನು ಪನ್ನೀರು ತಂದೀಡೆ | ಉಂಡು
ಕೈತೊಳೆದ ಸುಧಾಮ || ೨೧ ||
ಮಂದರಧರಗಿನ್ನು ಸುಂದರ ಸತಿಯರು | ತಂದರು ತಬಕ
ವಿಳ್ಯವನು ||
ಇಂದಿರೆರಮಣನು ಬಂದ ಸುಧಾಮನು | ಚಂದದಿ
ಮೆಲೆದರು ವಿಳ್ಯವನು || ೨೨ ||
ಶ್ರಮ ಬಹಳವಾಗಿದೆ ಶ್ರಮಿಸಿಕೊಳ್ಳಿರೆಂದು | ಸೆಳೆ
ಮಂಚ ತಂದ್ಹಾಕಿದರು ||
ಶಾಲು ಸಕಲಾತಿಯು ಮೇಲಾದ ಹಾಸಿಗೆ | ಮೇಲೆ ಮಲಗಿದನು
ಸುಧಾಮ || ೨೩ ||
ಅಂದಿನ ರಾತ್ರಿಯಲಿ ಮಂದಗಮನೇಯರ ಬಿಟ್ಟು | ಬಂದು
ಮಲಗಿದನು ಶ್ರೀಹರಿಯು ||
ಹಿಂದಿನ ವೃತ್ತಾಂತ ಒಂದೊಂದು ಸ್ಮರಿಸುತ | ಆನಂದದಿ
ಹರಿಯು ಸುಧಾಮ || ೨೪ ||
ಅಂದಿನ ಸ್ನೇಹವು ಇಂದೇಕೆ ನೆನಪಾಯ್ತು | ಬಂದೀರಿ
ಬಹುದಿನಕೆಂದ ||
ಹೆಂಡತಿ ಮಕ್ಕಳು ಇಹರೇನು ನಿಮಗೆಂದು | ಇಂದಿರೆ ರಮಣ
ಕೇಳಿದನು || ೨೫ ||
ಹೆಂಡತಿ ಕಳುಹಿದಳು ರಂಗನ ದರುಷನ | ಕೊಂಡು
ಬಾರೆನುತ ಪೇಳಿದಳು ||
ತಂದದ್ದು ಕೊಡಲಿಕ್ಕೆ ಸಂದೇಹವೇತಕ್ಕೆ | ತಂಡುಲ ಹಿಡಿದು
ಜಗ್ಗಿದನು || ೨೬ ||
ಮುಷ್ಟಿತುಂಬವಲಕ್ಕಿ ಮುಕ್ಕಿದ ಹರಿ ಬೇಗ | ನಕ್ಕರು
ಸತಿಯರೆಲ್ಲ ||
ಇಷ್ಟೇ ಸಾಕು ಎಂದು ಗಟ್ಯಾಗಿ ಕೈ ಹಿಡಿಯೆ | ಕೊಟ್ಟನು
ಭಕ್ತನಿಗೆ ಐಶ್ವರ್ಯ || ೨೭ ||
ಹದಿನಾರು ಸಾವಿರ ಚದುರೆಯರ ಕರೆಸಿದ | ಕೊಡಿಸಿದೆಲ್ಲರಿಗೆ
ತಂಡುಲವ ||
ಉಳಿಸಿದ ಅವಲಕ್ಕಿ ಉಣಲಿಕ್ಕೆ ಮಾರ್ಗಕ್ಕೆ | ಬೇಕೆಂದು ಬಿಗಿದು
ಕಟ್ಟಿದರು || ೨೮ ||
ರನ್ನದ ಬಾಗಿಲಿಗೆ ಚಿನ್ನದ ಚೌಕಟ್ಟು | ಹೊನ್ನ
ಹೊಸ್ತಲವ ನಿರ್ಮಿಸಿದ ||
ರನ್ನ ಮಾಣಿಕ ಬಿಗಿದ ತೊಲಿ ಕಂಬ ಗಿಳಿಬೋದು |
ಪನ್ನಗಶಯನ ನಿರ್ಮಿಸಿದ || ೨೯ ||
ಇರಿರಿ ನಾಲ್ಕುದಿವಸ ತ್ವರೆ ಯಾಕೆ ಮಾಡುವಿರಿ | ಇರಲಿಕ್ಕೆ
ಬಾರದೆಯೆಂದಾ ||
ನೆರೆ ಹೊರೆ ಯಾರಿಲ್ಲ ತರುಣಿಯೊಬ್ಬಳಿಹಳು | ಇರಲಿ ನಾ ಹೇಗೆ
ಪೇಳೆಂದ || ೩೦ ||
ಪಾದಕೆ ಎರಗಿ ತಾ ಸಾಗಿ ಮುಂದಕೆ ಬಂದ | ಬಾಗಿಲಿಗೆ
ಬಂದ ಸುಧಾಮ ||
ಹೋಗಿರಿ ಹಿಂದಕೆ ಹೋಗಿ ಬರುತೇನೆನಲು | ಬಾಗಿ ಕೈ ಮುಗಿದ
ಶ್ರೀಹರಿಯು || ೩೧ ||
ಮುಂದಕೆ ಬಂದನು ಇಂದೇನು ಕೊಡಲಿಲ್ಲ | ಹೆಂಡತಿಗೆ
ಹೇಳಲೇನೆಂದ ||
ನಿಂತನು ಒಣಿಯಲಿ ಮಂದಿರ ಸಿಗಲಿಲ್ಲ | ಹೆಂಡತಿಯ ಕಂಡ
ಸುಧಾಮ || ೩೨ ||
ಮಂದಿರವನ್ನೆಲ್ಲ ಕಂಡನು ಐಶ್ವರ್ಯ |
ಚಂದದಿಂದಾಭರಣ ಕಂಡ ||
ಇಂದಿರಾಪತಿಯನ್ನು ಕಂಡು ಬಂದುದರಿಂದ | ಬಂದಿತು
ಸಕಲ ಸಂಪತ್ತು || ೩೩ ||
ರವಿವಾರ ಹಾಡಿದರೆ ರಾಜಕಾರ್ಯವಾಗುವುದು | ಬಂಜೆಗೆ
ಮಕ್ಕಳಾಗುವವು ||
ಬರಡೆಮ್ಮೆ ಕರೆಯೋದು ಬಡತನ ಹಿಂಗುವುದು |
ಗುರುವಾರ ಹಾಡಿದವರಿಗೆ || ೩೪ ||
ಶ್ರೀನಿವಾಸನ ಧ್ಯಾನ ಮೌನದಿಂದಲಿ ಮಾಡಿ | ನಾನಾ
ಸಂಪತ್ತು ಪಡೆದರು ||
ಅದರ ವಿಷಯ ತಿಳಿದು ಗತಿ ಮೋಕ್ಷ ಇರಲೆಂದು | ಶ್ರೀ ಹರಿ
ಕೊಡು ದೇವ ಸಿರಿಯ || ೩೫ ||
ಇದು ಭಾಗವತವೆನ್ನಿ ಇದು ಭಾಗವತವೆನ್ನಿ | ಇದು
ಭಾಗವತಕೆ ಕೀಲಗಳು |
ಇದಕೆ ಪ್ರಿಯನು ನಮ್ಮ ಪುರಂದರವಿಠ್ಠಲ | ಇದರಿಂದ
ಮುಕ್ತಿ ಕೊಡುವನು || ೩೬ ||

Опубликовано:

 

23 мар 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 344   
@kavithamanu797
@kavithamanu797 3 месяца назад
ಅಮ್ಮ ರಾಘವೇಂದ್ರ ಸ್ವಾಮಿಗಳ ಪರಿಮಳ ಗ್ರಂಥದ ಬಗ್ಗೆ ಹೇಳಿಕೊಡಿ
@pravenikumari4455
@pravenikumari4455 2 месяца назад
Parimala grantha you tube channel nodi sis
@vijayasg3810
@vijayasg3810 12 дней назад
ಮೇ ಮಾಡಿ,ಸುದಾಮನ ಕತೆ ಕೇಳಿ ಕಣ್ಣು ತುಂಬಿ ಬಂತು ದನ್ಯವಾದಗಳು, ನಮಸ್ಕಾರಗಳು,
@rajuprema5679
@rajuprema5679 2 месяца назад
🙏🙏🙏ಕ್ರಷ್ಣಂ ವಂದೇ ಜಗದ್ಗುರು
@wv3217
@wv3217 3 месяца назад
ವೀಣಾ ಅಮ್ಮ ಕಥೆ ತುಂಬಾ ಚೆನ್ನಾಗಿತ್ತು .. ಗೆಳೆತನ ಅಂತ ಅಂದ್ರೆ ನೆನಪಾಗೋದೇ ದ ಸುಧಾಮ ಕೃಷ್ಣರ ಗೆಳೆತನ ..ಚಿಕ್ಕಂದಿನಿಂದ ಕೇಳಿ ಪಟ್ಟಿದ್ದು ಮತ್ತೊಮ್ಮೆ ನಿಮ್ಮಿಂದ ತಿಳಿದುಕೊಂಡು ಮನಸ್ಸಿಗೆ ತುಂಬಾ ಸಂತೋಷವಾಯಿತು🙏🏻🙏🏻
@mangalanaik4199
@mangalanaik4199 3 месяца назад
ಪ್ರತಿದಿನ ಹರಿಸೇವೆ ಮಾಡುತ್ತಾ ಪಾಮರರ ಅಭ್ಯುದಯಕ್ಕೆ ಶ್ರಮಿಸುತ್ತಿರುವ ನಿಮಗೆ ಧನ್ಯವಾದ ತಾಯಿ
@bettadammagaanalahari6421
@bettadammagaanalahari6421 3 месяца назад
ನಿಮ್ಮ ಬಾಯಿಂದ ಕಥೆಗಳು ಕೇಳೋದೇ ಖುಷಿ ಅಮ್ಮಾ
@user-ui3br4vt5j
@user-ui3br4vt5j 3 месяца назад
ನಮಸ್ತೆ ಅಮ್ಮ ಉತ್ತರದ ಕಡೆ ಬಾಗಲಿದ್ದವರು ಏನು ಮಾಡಬೇಕು ಎಂದು ತಿಳಿಸಿ ದಯವಿಟ್ಟು. ❤️🙏🏻🙏🏻
@vaijayanthirao6066
@vaijayanthirao6066 2 месяца назад
Hare srinivasa namaskara
@shrinivassullad7115
@shrinivassullad7115 2 месяца назад
Shri Krishna sudhama 🙏🏾🙏🏾
@prathapsr6896
@prathapsr6896 3 месяца назад
Amma ಭೂ ವರಾಹ ಸ್ವಾಮಿ ashothra ಹೇಳಿದರೆ ಮನೆ ಕೊಂಡುಕೊಳ್ಳಬಹುದು ಅಮ್ಮ
@USHAMGOWDRU
@USHAMGOWDRU 3 месяца назад
ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ಪ್ರಣಾಮಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐
@shobhagowda8410
@shobhagowda8410 3 месяца назад
ಕಥೆ ತುಂಬಾ ಚನ್ನಾಗಿದೆ ಅಮ್ಮ
@shashikalashashi6207
@shashikalashashi6207 3 месяца назад
🙏ಅಮ್ಮ ನಿಮ್ಮ ಆಶೀರ್ವಾದ ನಮ್ಮ ಮತ್ತು ನಮ್ಮ ಮಕ್ಕಳ ಮೇಲೆ ಸದಾ ಇರಲಿ ಅಮ್ಮ 🙏🙏🌹
@user-zd3om5xb9i
@user-zd3om5xb9i 3 месяца назад
Amma male barodakke enadaru pariharA heli amma plz male niru illade prani pakshigalige tondare agutte amma nau manusharu ego jivana madrivi amma prani,pakshigalanna nodidare papa annisutte nimminda elladu saddyya agutte amma plz plz amma❤❤❤❤❤
@sudhan371
@sudhan371 3 месяца назад
ಈ ಕಥೆ ನಾನು ಓದುತ್ತಿರುತ್ತೀನಿ ಇದು ಸಣ್ಣ ಕಥೆ ಎರಡು ತರಹ ಇದೆ ನನ್ನ ಹತ್ತಿರ ಹಾಡು ತರಹನೂ ಹೇಳಬಹುದು ನಿಮ್ಮ ಬಾಯಿಯಿಂದ ಕೇಳಿ ಖುಷಿ ಆಯ್ತು ಧನ್ಯವಾದಗಳು ವೀಣಾ ರವರೆ ಶುಭ ಸಾಯಂಕಾಲ 🪔🪔🪔
@mamathahr3106
@mamathahr3106 3 месяца назад
Amma namaskar
@user-ry7hr2bi8d
@user-ry7hr2bi8d 3 месяца назад
ಅಮ್ಮ ನಮಸ್ಕಾರ ನಿಮ್ಮ ಮಾತು ಕೇಳಿ ಬಹಳ ಸಮಾಧಾನ ಆಯ್ತು
@shankargoudapatil5405
@shankargoudapatil5405 3 месяца назад
ಅಮ್ಮ ನಿಮ್ಮ ಆಶೀರ್ವಾದ ಸದಾಕಾಲ ಎಲ್ಲರಮೇಲೆ ಇರಲಿ ಇವತ್ತಿನ ಕೃಷ್ಣ ಸುಧಾಮರ ನಡೆದಕಥೆ ತುಂಬಾ ಸುಂದರವಾಗಿತ್ತು ಹರೆ ಕೃಷ್ಣ 🙏🙏🙏🙏🙏
@Adithi-lz3gk
@Adithi-lz3gk 3 месяца назад
Dhanyosmi veena akka. Haresrinivaasa. Nanagaagi bhagavantha e vidiyo kottiddaane.,,
@SahasranamaSeva
@SahasranamaSeva 3 месяца назад
ಹರೇ ಕೃಷ್ಣ. ಕಥೆಯನ್ನು ಬಹಳ ಚೆನ್ನಾಗಿ ಹೇಳಿದಿರಿ ಅಮ್ಮಾ. ಸುಧಾಮ ಬಡತನದ ಜೀವನ ಹೇಗೆ ಮಾಡಿರಬೇಕು ಎಂದು ನೆನಪು ಮಾಡಿಕೊಂಡರೆ ಕಣ್ಣೀರು ಬರುತ್ತದೆ. ಧನ್ಯವಾದಗಳು 🙏🏻🙏🏻
@Chaya-ej9lf
@Chaya-ej9lf 3 месяца назад
ಜೈ ಶ್ರೀ ಕೃಷ್ಣ 🙏🌹ಜೈ ವಾಸುದೇವ 🙏ಜೈ ಸುಧಾಮ್ 🙏🌹
@sumanv3984
@sumanv3984 3 месяца назад
🙏amma ಈ ಕಥೆನ ಸ್ಕೂಲ್ ಪಾಠ ಪುಸ್ತಕ ದಲ್ಲಿ ಅವಾಗ ಕೇಳಿದೆ ನಾವು ಸ್ಕೂಲ್ಗೇ ಹೋಗುವಾಗ ತುಂಬಾ ಚೆನಾಗಿದೆ ಕಥೆ 🙏 💐💐
@jahnavidhananjay9963
@jahnavidhananjay9963 3 месяца назад
Thanku so much ....🙏🙏🙏🙏
@sujathapatil6717
@sujathapatil6717 3 месяца назад
Thanks amma
@user-yw8ip4lg6p
@user-yw8ip4lg6p 3 месяца назад
Mam ತುಂಬಾ ಧನ್ಯವಾದ
@hemanthbp9415
@hemanthbp9415 3 месяца назад
Tq amma
@vanitanaik4407
@vanitanaik4407 3 месяца назад
ಧನ್ಯವಾದಗಳು ಅಮ್ಮ🙏🙏
@rachanarach2251
@rachanarach2251 3 месяца назад
ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ 🙏🙏🙏
@sahananadiger-ir2gd
@sahananadiger-ir2gd 3 месяца назад
Namaste Amma 🙏🏻🙏🏻❤
@poornima20099
@poornima20099 3 месяца назад
ಅಮ್ಮ ಧನ್ಯವಾದ 🙏 ಇಷ್ಟು ವಿವರವಾಗಿ ಸುಂದರವಾಗಿ ಕೃಷ್ಣ ಸುಧಾಮರ ಕಥೆ ಹೇಳಿದ್ದು ❤❤❤
@lakshmi.h7657
@lakshmi.h7657 3 месяца назад
ಧನ್ಯವಾದಗಳು ಅಮ್ಮ 🙏🙏🙏
@nidhiaadhya8784
@nidhiaadhya8784 3 месяца назад
Amma namaste....🙏🙏🙏
@VeerendraGB
@VeerendraGB 3 месяца назад
ಧನ್ಯವಾದಗಳು mam 🙏🏽🙏🏽
@kiranaradhya3141
@kiranaradhya3141 3 месяца назад
🙏🏻🙏🏻ಧನ್ಯವಾದಗಳು ಅಕ್ಕ
@harshuharshitha2277
@harshuharshitha2277 3 месяца назад
Thumba dhanyavadagalu Amma ❤❤❤❤
@varshabhaskar8044
@varshabhaskar8044 3 месяца назад
ಧನ್ಯವಾದಗಳು ಅಮ್ಮ 🙏🙏🙏🙏🙏🙏
@savithasavisavi2148
@savithasavisavi2148 3 месяца назад
ಧನ್ಯವಾದಗಳು ಅಮ್ಮ 🙏♥️♥️♥️🌹
@sunitharamesh3780
@sunitharamesh3780 3 месяца назад
Namaste amma❤❤❤
@VeenaJoshi
@VeenaJoshi 2 месяца назад
Thanks to all
@YamunaPatil1
@YamunaPatil1 3 месяца назад
Thankyou Amma
@shakutahala7384
@shakutahala7384 3 месяца назад
ನಿಮ್ಮ ಆಶೀರ್ವಾದ ಇರಲಿ ಅವ್ವಾ
@umavishu3155
@umavishu3155 3 месяца назад
Thank you
@amruthamurugesh7149
@amruthamurugesh7149 3 месяца назад
ಅಮ್ಮ ನಮಸ್ಕಾರ ❤ ಕೃಷ್ಣ ಸುಧಾಮ ಸ್ನೆಹಿತರ ಕಥೆ ಕೇಳಿ ತುಂಬಾ ಸಂತೋಷವಾಯಿತು ಅಮ್ಮ ❤❤❤❤❤❤🎉🎉
@sow.shetty
@sow.shetty 3 месяца назад
Thq ma'am 🙏🏻🙏🏻
@vijayalaxmiAjay60
@vijayalaxmiAjay60 3 месяца назад
First comment first like.... ಧನ್ಯವಾದಗಳು ಅಮ್ಮ 🙏🏻🙏🏻
@GayathriHiremathaudiobook
@GayathriHiremathaudiobook 3 месяца назад
ಅಮ್ಮ ಧನ್ಯವಾದಗಳು
@vrdp787
@vrdp787 3 месяца назад
Thanks❤😊
@rajanivenkatesh3208
@rajanivenkatesh3208 3 месяца назад
ತುಂಬಾ ಧನ್ಯವಾದಗಳು 🙏
@manikr5952
@manikr5952 3 месяца назад
Amma namste
@msnishanadar7614
@msnishanadar7614 3 месяца назад
Ammma 🙏🙏🙏🙏
@bharatitubakad7481
@bharatitubakad7481 3 месяца назад
Thank you soooooo much Amma 🎉🎉
@VijayaReddy-hg6si
@VijayaReddy-hg6si 3 месяца назад
ತುಂಬ super
@savitahalemani3277
@savitahalemani3277 3 месяца назад
Veena Sister 🙏
@kavyashree6691
@kavyashree6691 3 месяца назад
🙏🏻🙏🏻🙏🏻
@Mala-nt8cc
@Mala-nt8cc 3 месяца назад
Amma nimage danyavadagalu
@aratinargund5
@aratinargund5 3 месяца назад
namaste Amma 🙏
@chanduravikumarn2232
@chanduravikumarn2232 3 месяца назад
Namasthe amma
@abhijitgulavanigulavani171
@abhijitgulavanigulavani171 3 месяца назад
Namaste Amma 😊🙏🙏🙏
@mangalamangala1984
@mangalamangala1984 3 месяца назад
Amma thumba dhanyavaadgalu 🙏🙏🙏Amma
@vaibhavij.m.4693
@vaibhavij.m.4693 3 месяца назад
Nimma padagalige nanna namaskaragalu Amma
@devakin3744
@devakin3744 3 месяца назад
Amma thumba thumba thumba Dhanyawadagalu ❤❤❤😊
@AbhayKs-ue5ev
@AbhayKs-ue5ev 3 месяца назад
🎉🎉🙏🙏 thank you so much
@vanitanaik4407
@vanitanaik4407 3 месяца назад
Namaste Amma
@binduravi5342
@binduravi5342 3 месяца назад
Guru sandeepanalli odikonda vivaranella heluthiddanu anrha ethu adare edara artha ega thilithu tq maa...🙏
@BAVPATHY
@BAVPATHY 3 месяца назад
Jai srikrishnna sudhama
@AnjaneyaH-nb4wy
@AnjaneyaH-nb4wy 3 месяца назад
🙏🙏 Jay Krishna Sudama🙏🙏💐💐
@savitrisutar5496
@savitrisutar5496 3 месяца назад
Dhnnywadglu akka 🙏🙏🌹.
@arpuswathi8597
@arpuswathi8597 3 месяца назад
Thank u madam for writing in words in description
@nishvikasreddykannadavlogs1400
@nishvikasreddykannadavlogs1400 3 месяца назад
🙏veena Amma
@shashimaidur7222
@shashimaidur7222 3 месяца назад
🙏🙏
@vjorganicfarming794
@vjorganicfarming794 3 месяца назад
Tq amma kathe bhal chenditri maa namg idar bagge mahiti ne irlilla shubharatri 🙏❤️
@shruthishru6843
@shruthishru6843 3 месяца назад
Amma 🙏
@laxmikustigar8975
@laxmikustigar8975 3 месяца назад
First view mam🙏🙏🙏
@PrasadMathadevaru
@PrasadMathadevaru 3 месяца назад
🙏🙏amma
@savithabm2946
@savithabm2946 3 месяца назад
ಕಥೆ ಕೇಳೋದೆ ಚೆಂದ ವೀಣಾಮ್ಮ ❤️🙏
@Ni8585
@Ni8585 3 месяца назад
🙏🙏🙏 amma
@pratibhavasanth5402
@pratibhavasanth5402 3 месяца назад
ಅದ್ಭುತವಾಗಿದೆ ಅಕ್ಕಾ 🙏🙏🙏🙏🙏🥰🙏🙏🙏🙏
@mamatha5732
@mamatha5732 3 месяца назад
Namaste Amma. ಕಥೆ ಕೇಳಿ ಆನಂದ ಭಾಷ್ಪ ಬರ್ತಿದೆ ಅಮ್ಮ. ರಂಗೋಲಿ ತುಂಬಾ ಚೆನ್ನಾಗಿದೆ. ರಂಗೋಲಿ ವಿವರವಾಗಿ ಹೇಳಿ.🙏🏻🙏🏻
@tusharbg2073
@tusharbg2073 3 месяца назад
🌺 JaiMaShakthi 🙏 🌸 ಶುಭೋದಯ ಅಮ್ಮ 🌹☺️ ❤️
@radhakhandate2211
@radhakhandate2211 3 месяца назад
ಹರೇ ಶ್ರೀನಿವಾಸ ಅಕ್ಕಾ
@kingofpop7765
@kingofpop7765 3 месяца назад
Nija amma namagu shap ide idannu tilisi kottiddakke tumba tumba dhanyawadagalu amma 🙏🙏🙏
@yeshuk8332
@yeshuk8332 3 месяца назад
❤annath danyevaadagalu nimge amma nim aashrivaada sadha eirali namge happy holi maa🌹🌹🌹🌹🙏🙏🥰🤗🤗🤗
@madhuridixit3313
@madhuridixit3313 3 месяца назад
👌👌🙏🙏 thannk your so much ma'am ❤❤ ನಮ್ಮ ಅಮ್ಮಾನು ಹಾಡುತ್ತಿದ್ದರು ಈಗ ಅಮ್ಮ ಇಲ್ಲ ಇಂದು ತಮ್ಮಿಂದ ಕೇಳಿ ತುಂಬ ಸಂತೋಷ ಆಯ್ತು ರೀ❤🙏
@user-ff6uj5xo8l
@user-ff6uj5xo8l 3 месяца назад
E kathe kelta kelasa nanna ge Kannagi niruthumbibartide amm❤🙏🤲
@summireddy3742
@summireddy3742 3 месяца назад
🙏🙏🙏
@jamunakumarijamuna5272
@jamunakumarijamuna5272 3 месяца назад
Amma ty so much amma katy channagetu amma❤
@umaambig7762
@umaambig7762 3 месяца назад
Namaste amma
@tusharbg2073
@tusharbg2073 3 месяца назад
☘️ JaiMaShakthi 🌸 🕉️ ಶುಭೋದಯ ಅಮ್ಮಾ 💐 🤍 ☺️
@shrinivasasha6067
@shrinivasasha6067 3 месяца назад
🙏🏻🙏🏻🙏🏻🙏🏻🙏🏻🙏🏻 Amma
@user-xs7gp7lz8j
@user-xs7gp7lz8j 3 месяца назад
ಧನ್ಯವಾದಗಳು ಅಮ್ಮ . ಕಥೆ ತುಂಬಾ ಚೆನ್ನಾಗಿತ್ತು.🙏
@ganeshmedleri6014
@ganeshmedleri6014 3 месяца назад
Namaskar maathji 🙏🙏🙏
@anupamajagadish233
@anupamajagadish233 3 месяца назад
Amma 🙏🏽🙏🏽🙏🏽🙏🏽
@swethasswethas3040
@swethasswethas3040 3 месяца назад
ಕಥೆ ತುಂಬಾ ಚೆನ್ನಾಗಿತ್ತು ಮೇಡಂ ಥ್ಯಾಂಕ್ಯು🙏
@guttalveena1562
@guttalveena1562 3 месяца назад
Bahala chennagi vivarisiddiri, bhakti tumbida katheyanna danyavadagalu mami ravarige🙏🙏🙏
@manyan4926
@manyan4926 3 месяца назад
❤❤❤🌹🌹🌹🥰
@dginfotechdvg
@dginfotechdvg 3 месяца назад
@user-dz9ut2pn4v
@user-dz9ut2pn4v 3 месяца назад
Namaste amma 🙏🙏🙏🙏🙏
@vijayalaxmiAjay60
@vijayalaxmiAjay60 3 месяца назад
First view......
@nagarjungowda5370
@nagarjungowda5370 3 месяца назад
Amma amma
@user-dd9jq7mt6h
@user-dd9jq7mt6h 3 месяца назад
ಅಮ್ಮ ನಮಸ್ತೆ 🙏 ತುಂಬಾ ಚೆನ್ನಾಗಿದೆ ಕಥೆ 🙏 ನಿಮ್ಮ ರಂಗೋಲಿ ನೋಡುವುದೇ ನಮ್ಮ ಭಾಗ್ಯ 😍
Далее
Июль в Tanks Blitz
51:46
Просмотров 91 тыс.
Me: Don't cross there's cars coming
00:16
Просмотров 6 млн
Balaji Mane - Menthe hittu preparation
5:30
Просмотров 1,1 тыс.